Shiggoan By Poll: ಬಿಜೆಪಿ ಹಿನ್ನಡೆಗೆ ಕಾಂಗ್ರೆಸ್ ಅಧಿಕಾರ-ಹಣದ ಪ್ರಭಾವ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ನವೆಂಬರ್ 23: ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಿದೆ. 9ನೇ ಸುತ್ತಿನಲ್ಲಿ (ಬೆಳಗ್ಗೆ 10.40ರವರೆಗಿನ ಮಾಹಿತಿ) ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಹಿನ್ನಡೆ ಆಗಿರುವುದು ಆಘಾತ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅಭ್ಯರ್ಥಿಯು 6000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ವಿರುದ್ಧ ಅಧಿಕಾರ, ಹಣದ ಪ್ರಭಾವದ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ತನ್ನ ಅಧಿಕಾರ ಹಾಗೂ ಹಣದ ಪ್ರಭಾವ ಬೀರಿದೆ ಎಂದು ಬಿಜೆಪಿಗೆ ಹಿನ್ನಡೆ ಕುರಿತು ಅವರು ಆರೋಪಿಸಿದರು.

ಸದ್ಯ ಶಿಗ್ಗಾವಿ ಉಪಚುನಾವಣೆಯಯ ಮತದಾನ ಎಂಟನೇ ಸುತ್ತು ಮುಗಿದಿದೆ. ಇನ್ನೂ ಹತ್ತು ಸುತ್ತುಗಳು ಬಾಕಿ ಇವೆ, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ತನ್ನ ಅಧಿಕಾರ ಹಾಗೂ ಹಣದ ಪ್ರಭಾವ ಬೀರಿದೆ ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆದಿದೆ. ಆದರೂ ಜನ ನಮ್ಮನ್ನ ಕೈಬಿಡಲ್ಲ ಎಂಬ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಉಳಿದ ಸುತ್ತಿನಲ್ಲಿ ಭರತ್ ಬೊಮ್ಮಾಯಿ ಲೀಡ್ ಬರುವ ಸಾಧ್ಯತೆ ಇದೆ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಹಿನ್ನೆಡೆ ವಿಚಾರವಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತರ ಹಾವೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಕೇವಲ ಶಿಗ್ಗಾವಿ ಮಾತ್ರವಲ್ಲದೇ, ಚನ್ನಪಟ್ಟಣ ಹಾಗೂ ಸಂಡೂರಿನಲ್ಲೂ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಭಾರಿ ಮುನ್ನಡೆ ಸಾಧಿಸಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು 56236 ಮತಗಳಿಂದ ಮುಂದೆ ಇದ್ದಾರೆ. 51739 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಹಿಂದಿದ್ದಾರೆ.
ಇನ್ನೂ ಚನ್ನಪಟ್ಟಣದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರಿಂದ ಕಾಂಗ್ರೆಸ್ ಅಭ್ಯರ್ಥಿಯು 19000 ಮತಗಳ ಅಂತರದಿಂದ ಮುಂದಿದ್ದಾರೆ. ಸದ್ಯದವರೆಗಿನ ಮತ ಎಣಿಕೆಯ ಫಲಿತಾಂಶ ಬಿಜೆಪಿ ಆಘಾತ ನೀಡಿದೆ.
ಇದಾಗುತ್ತಿದ್ದಂತೆ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಕಾಣಿಸಲೇ ಇಲ್ಲ. ಇತ್ತ ನಿರಂತರವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಲೇ ಹೋಯಿತು. 18ನೇ ಸುತ್ತಿನ ವರೆಗೂ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ಗೆದ್ದು ಬೀಗಿತು.












Click it and Unblock the Notifications