Bomb Blast: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ: ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟ NIA: ಓರ್ವನ ಬಂಧನ
ಬೆಂಗಳೂರು, ಮೇ 21: ಬೆಂಗಳೂರಿನ ಐಟಿ ಪ್ರದೇಶದಲ್ಲಿದ್ದ ರಾಮೇಶ್ವರಂ ಕೆಫೆಯಲ್ಲಿ ಕಳೆದ ಫೆ. 29ರಂದು ಬಾಂಬ್ ಬ್ಲಾಸ್ಟ್ ಆಗಿತ್ತು. ತೀವ್ರ ಹುಡುಕಾಟದ ನಂತರ ಇಬ್ಬರು ಬಾಂಬರ್‌ಗಳ ಬಂಧವು ಆಗಿತ್ತು. ಇದೀಗ ಈ ಬ್ಲಾಸ್ಟ್ ಪ್ರಕರಣದ ತನಿಖೆ ವಹಿಸಿಕೊಂಡಿರುವ NIA ತಂಡ ತನಿಖಾಧಿಕಾರಿಗಳು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ದಿ. ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೋ ಹುಬ್ಬಳ್ಳಿಗೂ ಲಿಂಕ್ ಇದಿಯಾ ಎಂಬ ಬಗ್ಗೆ ಎನ್ ಐಎ ನಾಲ್ವರ ಅಧಿಕಾರಿಗಳ ತಂಡ ಹುಬ್ಬಳ್ಳಿಯ ತನಿಖೆ ಚುರುಕುಗೊಳಿಸಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಶಂಕಿತ ಉಗ್ರರು. ಪ್ರತ್ಯೇಕ ಕೋಡ್ ವರ್ಡ್‌ಗಳ ಮೂಲಕ ಸಂಭಾಷಣೆ ನಡೆಸುತ್ತಿದ್ದರೆಂಬ ಮಾಹಿತಿ ಕಲೆಹಾಕಿದ್ದಾರೆ. ಈ ಸಂಬಂಧ ಪ್ರಕರಣದಲ್ಲಿ ಇಲ್ಲವೇ ಸಂಚುಕೋರರಿಗೂ ಹುಬ್ಬಳ್ಳಿಗೂ ಲಿಂಕ್ ಇದೆಯೆ ಎಂಬ ಅನುಮಾನ ಮೂಡಿದೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಉಗ್ರರೊಂದಿಗೆ ನಂಟು ಹೊಂದಿದ್ದವರ ಜೊತೆ ಉಗ್ರರು ಸಂಪರ್ಕದಲ್ಲಿದ್ದರು. ಪ್ರಮುಖ ಉಗ್ರರ ಸೂಚನೆಯಂತೆ ವಿಧ್ವಂಸಕ ಕೃತ್ಯ ಎಸಗಲು ಅವರಿಬ್ಬರು ತಯಾರಿ ನಡೆಸುತ್ತಿದ್ದರು ಎಂಬ ಸಂಗತಿಯೂ ತನಿಖೆಯಿಂದ ಗೊತ್ತದ ನಂತರ ಎನ್ಐಎ ತಂಡ ಫುಲ್ ಅಲರ್ಟ್ ಆಗಿತ್ತು.
NIA ಗೆ ಕೋಡ್ ವರ್ಡ್ ಸಂಭಾಷಣೆ ಮಾಹಿತಿ
ಬಾಂಬ್ ಸ್ಫೋಟದ ಸಂಚು ಹಾಗೂ ಪರಾರಿ ಮಾರ್ಗದ ಬಗ್ಗೆ ಶಂಕಿತರು ಇಬ್ಬರು ಕೋಡ್ ವರ್ಡ್ ಮೂಲಕ ಸಂಭಾಷಣೆ ನಡೆಸಿರುವುದಕ್ಕೆ ಪುರಾವೆಗಳು ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಈ ಕೋಡ್ ವರ್ಡ್ ಸಂಬಾಷಣೆ ಯಾರೊಂದಿಗೆ ನಡೆಸುತ್ತಿದ್ದರು. ಬಂಧಿತರೊಂದಿಗೆ ಸಂಭಾಷಣೆ ನಡೆಸುತ್ತಿದ್ದವರು, ಹುಬ್ಬಳ್ಳಿಯಲ್ಲಿ ಇದ್ದಾರಾ?

ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ಹುಬ್ಬಳ್ಳಿಗೂ ಲಿಂಕ್ ಇದಿಯಾ ಅಥವಾ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾದರು ಹುಬ್ಬಳ್ಳಿಗೆ ಬಂದಿದ್ದರಾ? ಎಂಬ ವಿವಿಧ ಆಯಾಮಗಳ ಮೇಲೆ ತನಿಖಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ಎನ್‌ಐಎ ತಂಡ ಹುಬ್ಬಳ್ಳಿಯಲ್ಲಿ ತನಿಖೆ ಚುರುಕುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತರಿಂದ ಎನ್‌ಐಎಗೆ ಮಹತ್ವ ಮಾಹಿತಿ
ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಾದ್ಯಂತ ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್ ಸದ್ದು ಮಾಡಿತ್ತು. ಹಲವರಿಗೆ ಗಂಭೀರ ಗಾಯಗಳಾಗಿದ್ದವು. ಎನ್‌ಐಎ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿತ್ತು. ಪತ್ತೆಗೆ ಮುಖಚಹರೆ ಗುರುತು ಬಿಡುಗಡೆ ಮಾಡಿತ್ತು.
ನಗದು ಹಣ ಸಹ ಘೋಷಿಸಲಾಗಿತ್ತು. ಕೊನೆಗೆ ಎನ್‌ಐಎ ಮತ್ತು ಕರ್ನಾಟಕ ಪೊಲೀಸರ ಸಹಕಾರದಲ್ಲಿ ಇಬ್ಬರು ಬ್ಲಾಸ್ಟರ್‌ಗಳನ್ನು ಬಂಧಿಸಲಾಗಿತ್ತು. ಇದೀಗ ಅವರ ವಿಚಾರಣೆ ನಡೆಸಲಾಗಿದ್ದು, ತಪ್ಪಿತಸ್ಥರು ಕೋಡ್ ವರ್ಡ್ ಬಳಕೆ ಬಗ್ಗೆ ಎನ್‌ಐಎ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಒಬ್ಬನ ಬಂಧನ
ಇನ್ನೂ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಶೋಯೆಬ್ ಅಬ್ದುಲ್ ಮಿರ್ಜಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ಗೌಸಿಯಾ ಟೌನ್‌ನಲ್ಲಿ ವಾಸವಿದ್ದ ಮಿರ್ಜಾ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications