Breaking; ರೈಲಿನಿಂದ ಬಿದ್ದು ಹುಬ್ಬಳ್ಳಿಯಲ್ಲಿ ಬಿಬಿಎಂಪಿ ಇಂಜಿನಿಯರ್ ಸಾವು
ಬೆಂಗಳೂರು, ಡಿಸೆಂಬರ್ 20; ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಅಧೀಕ್ಷಕ ಇಂಜಿನಿಯರ್ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರನ್ನು ರಂಗರಾಜು ಎಸ್. ಎ. (59) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಲು ರಂಗರಾಜು ರೈಲು ಹತ್ತಬೇಕಿತ್ತು. ಆದರೆ ಬೆಳಗಾವಿಗೆ ಹೋಗುವ ರೈಲನ್ನು ಹುಬ್ಬಳ್ಳಿ ನಿಲ್ದಾಣದಲ್ಲಿ ಹತ್ತಿದ್ದರು.
ಬೇರೆ ರೈಲು ಹತ್ತಿರುವುದು ತಿಳಿದು ಗಾಬರಿಯಿಂದ ಇಳಿದಿದ್ದಾರೆ. ಆಗ ರೈಲು ಚಲಿಸುತ್ತಿತ್ತು. ರೈಲು ಇಳಿಯುವಾಗ ಆಯತಪ್ಪಿ ಬಿದ್ದು, ಪ್ಲಾಟ್ ಫಾರ್ಮ್‌ನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಂಗರಾಜು ಎಸ್. ಎ. ಬೆಂಗಳೂರಿನಲ್ಲಿ ಬಿಬಿಎಂಪಿಯ ಕೆಆರ್‌ಐಡಿಎಲ್ ವಿಭಾಗದಲ್ಲಿ ಸೂಪರಿಟೆಂಡೆಂಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ರಂಗರಾಜು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.












Click it and Unblock the Notifications