ಗೌರಿ ಲಂಕೇಶ್ ಪ್ರಕರಣ: ಆರೋಪಿಗಳ ಸ್ವಾಗತ ಕೋರಿ ದೇವಸ್ಥಾನ ಮುಂದೆ ಬ್ಯಾನರ್! ಮುಂದೇನಾಯ್ತು

ಹುಬ್ಬಳ್ಳಿ, ಫೆಬ್ರವರಿ 02: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರೀಶ್ ಲಂಕೇಶ್ ಹತ್ಯೆ ಆರೋಪಿಗಳಿಗೆ ಜಾಮೀನು ದೊರೆತಿದೆ. ಅವರು ಜಾಮೀನಿನ ಮೇಲೆ ಜೈಲುಶಿಕ್ಷ ಅನುಭವಿಸಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜಾಮೀನು ಬಳಿಕ ಮೊದಲ ಭಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಕೊಲೆ ಆರೋಪಿಗಳನ್ನು 'ಹಿಂದೂ ಹುಲಿಗಳು' ಎಂದು ಹೆಸಿನಲ್ಲಿ ಸ್ವಾಗತ ಕೋರಿದ ಬ್ಯಾನರ್‌ಗಳು ಹುಬ್ಬಳ್ಳಿಯಲ್ಲಿ ರಾರಾಜಿಸಿವೆ.

ಹೌದು, ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿಗಳಾದ ಅಮಿತ್ ಬದ್ದಿ ಮತ್ತು ಗಣೇಶ ಮಿಸ್ಕಿನ್ ಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಪಡೆದು ಮೊದಲ ಬಾರಿಗೆ ಇವರಿಬ್ಬರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇವರಿಗೆ ಸ್ವಾಗತ ಕೋರಿ ಹುಬ್ಬಳ್ಳಿಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತುಳಜಾ ಭವಾನಿ ದೇವಸ್ಥಾನ ಹಾಗೂ ಇನ್ನಿತರ ಕಡೆಗಳಲ್ಲಿ ಬ್ಯಾನರ್ ಅಳವಡಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Banner Welcoming Gauri Lankesh Case Accused Released on Bail Removed by Temple Wall at hubballi

7 ವರ್ಷಗಳ ನಂತರ ಬಿಡುಗಡೆಗೊಂಡ ಹಿಂದೂ ಹುಲಿಗಳೆಂದು ಬ್ಯಾನರ್ ಹಾಕಲಾಗಿದೆ. ಕೊಲೆ ಆರೋಪಿಗಳಿಗೆ ಸ್ವಾಗತ ಕೋರಿ ದೇವಸ್ಥಾನ ಮುಖ್ಯಬಾಗಿಲ ಬಳಿ ಬ್ಯಾನರ್ ಹಾಕಿದ್ದನ್ನು ಖಂಡಿಸಿದ ತುಳುಜಾ ಭವಾನಿ ಮಂದಿರದ ಆಡಳಿತ ಮಂಡಳಿಯು ಬ್ಯಾನರ್ ತೆಗೆದು ಹಾಕಿದೆ. ಸದ್ಯ ಕೊಲೆ ಆರೋಪಿಗಳಿಗೆ ಬ್ಯಾನರ್ ಹಾಕಿ ಸ್ವಾಗತಿಸಿದ ವಿಚಾರ ಭಾರೀ ಚರ್ಚೆ ಆಗುತ್ತಿದೆ.

2017ರ ಸೆಪ್ಟೆಂಬರ್ 5ರಂದು ರಾತ್ರಿ ಬೆಂಗಳೂರಿನ ಆರ್‌ಆರ್ ನಗರದ ನಿವಾಸದ ಬಳಿಕ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದಿತ್ತು. ಈ ಪ್ರಕರಣದ ಸಾಕಷ್ಟು ತಲ್ಲಣ ಸೃಷ್ಟಿಸಿತ್ತು. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗೌರಿ ಲಂಕೇಶ್ ನಿವಾಸ ಮನೆಯ ಹೊರಗೆ ದ್ವಿಚಕ್ರ ವಾಹನ ನಿಲ್ಲಿಸಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಅವರನ್ನು ಮಾಡಿದ್ದರು.

ಈ ಕೊಲೆ ಪ್ರಕರಣದಲ್ಲಿ ಗಣೇಶ್ ವಿಸ್ಕಿನ್, ಅಮಿತ್ ಬದ್ದಿ ಆರೋಪಿಗಳಿಗೆ ಶಿಕ್ಷೆ ಆಗಿತ್ತು. ಏಳು ವರ್ಷಗಳ ಕಾಲ ಜೈಲಲ್ಲಿದ್ದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಎಸ್ ಎಸ್ ಕೆ ಸಮಾಜದ ವತಿಯಿಂದ ದೇವಸ್ಥಾನದ ಮುಂದೆ ಬ್ಯಾನರ್ ಅಳವಡಿಸಿ ಸ್ವಾಗತ ಕೋರಲಾಗಿದೆ.

ಜೈಲಿನಿಂದ ಹೊರ ಬಂದ ಈ ಇಬ್ಬರು ಹುಬ್ಬಳ್ಳಿ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠದ ಗದ್ದುಗೆ ದರ್ಶನ ಪಡೆದಿದ್ದಾರೆ. ಇವರಿಬ್ಬರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದು ರಾಷ್ಟ್ರ ಸ್ಥಾಪನೆಗಾಗಿ ಮರಳಿ ಬರುತ್ತಿರುವ ಎರಡು ಹುಲಿಗಳಿಗೆ ಸ್ವಾಗತ ಎಂಬ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಚರ್ಚೆ ಹುಟ್ಟು ಹಾಕಿದೆ.

ಬ್ಯಾನರ್ ನಲ್ಲಿ ಸಹಸ್ರಾಜುನ, ಶಿವಾಜಿ ಹುಲಿ ಹಾಗೂ ಇದರ ಕೆಳಗೆ ಅಮಿತ್ ಬದ್ದಿ, ಗಣೇಶ ಮಿಸ್ಕಿನ್ ಪೋಟೋ ಮುದ್ರಿಸಲಾಗಿದೆ. ಅಮಿತ್ ಬದ್ದಿ, ಗಣೇಶ ಮಿಸ್ಕನ್ ಸಂಬಂಧಿ ಭಾಗಿ ಎಂದು ಬರೆಸಲಾಗಿದೆ. ದೇವಸ್ಥಾನ ಮುಂದೆ ಈ ಬ್ಯಾನರ್‌ಗಳನ್ನು ತೆಗೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+