ಶಿವರಾಂ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಿಗೆ ಶೆಟ್ಟರ್ ಸ್ಪಷ್ಟನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್, 15 : ದಲಿತ ನಾಯಕ ಕೆ,ಶಿವರಾಂ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಹಲವು ಬಿಜೆಪಿ ನಾಯಕರುಗಳು ಗೈರಾಗಿದ್ದು. ಇದಕ್ಕೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಹೆಬಸೂರು, ಕಿರೇಸೂರ ಮತ್ತು ನಾಗರಹಳ್ಳಿ ಗ್ರಾಮಗಳ ಬೆಳೆಹಾನಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಪಕ್ಷಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಬೆಂಗಳೂರಿನಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಒಳ್ಳೆಯದು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ಪೂರ್ವ ನಿಯೋಜಿತ ಕಾರ್ಯಕ್ರಮವೇ ಹೊರತು ಬೇರೆ ಉದ್ದೇಶವಿಲ್ಲ" ಎಂದು ಸ್ಪಷ್ಟಪಡಿಸಿದರು. [ಬಿಜೆಪಿ ಸಮಾವೇಶದಲ್ಲಿ ಅಸಮಾಧಾನ ಬಯಲು: ಹಿರಿಯ ಮುಖಂಡರೇ ಗೈರು]

Shetter

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಮುಂದಿನ ಬಾರಿ ಮುಖ್ಯಮಂತ್ರಿಯನ್ನಾಗಿಸುವುದೇ ನಮ್ಮ ಪಕ್ಷದ ಗುರಿಯಾಗಿದೆ. ಕೆಲ ವಿರೋಧಿಗಳು ಯಡಿಯೂರಪ್ಪ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಇದಕ್ಕೆ ಯಾರೂ ಗಮನ ಕೊಡಬಾರದು ಎಂದು ಶೆಟ್ಟರ್ ಹೇಳಿದರು.

ಕಾಂಗ್ರೆಸ್ ಪಕ್ಷದವರು ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಲಿ ಎಂದು ಕೇಳುವ ಬದಲು ತಮ್ಮ ನಾಯಕಿ ಸೋನಿಯಾ ಗಾಂಧಿಯವರನ್ನೇ ಮಧ್ಯ ಪ್ರವೇಶಕ್ಕೆ ಒಪ್ಪಿಸಲಿ ಎಂದು ಒತ್ತಾಯಿಸಿದರು. ಈ ಸಂಬಂಧ ಕಾಂಗ್ರೆಸ್ ಪಕ್ಷವು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿರೋಧ ಪಕ್ಷಗಳ ನಾಯಕರ ಮನವೊಲಿಸಲಿ ಎಂದುರು

ಬೆಳೆಹಾನಿ : ಬರಪೀಡಿತ ನವಲಗುಂದ ತಾಲೂಕಿನ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಶೆಟ್ಟರ್ ರೈತರ ಈರುಳಿ ಮತ್ತು ಮೆಣಸಿನಕಾಯಿ ಬೆಳೆಗಳು ಮಳೆ ಇಲ್ಲದೇ ಹಾನಿಗೊಳಗಾಗಿವೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
chief minister Jagadish Shettar B.S.Yadiyurappa as a CM candidate said on Saturday oct 15, in tour to drought hit areas in Hubballi-Dharwada.
Please Wait while comments are loading...