ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಕರ್ನಾಟಕದ ಶಬರಿ ಮಲೈಯಲ್ಲಿ ಅಯ್ಯಪ್ಪ ಸ್ವಾಮಿಯ ಭವ್ಯ ಮೆರವಣಿಗೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್‌, 20: ಅಯ್ಯಪ್ಪ ಸ್ವಾಮಿಯ ದೇಗುಲ ಅಂದರೆ ಭಕ್ತಾಧಿಗಳಲ್ಲಿ ಕೇರಳದ ಪಂಪಾನದಿಯ ತೀರದಲ್ಲಿರುವ ಶಬರಿ ಮಲೈ ಎನ್ನುವ ಭಾವನೆ ಇದೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಈಗ ಶಬರಿ ಮಲೈ ನಿರ್ಮಾಣವಾಗಿದೆ. ಕರ್ನಾಟಕದ ಬಹುತೇಕ ಜನರಿಗೆ ಹುಬ್ಬಳ್ಳಿಯ ಶಿರೂರ ಪಾರ್ಕಿನಲ್ಲಿರುವ ದೇವಸ್ಥಾನವೇ ಶಬರಿ ಮಲೈ ಆಗಿದೆ. ಈ ನಿಟ್ಟಿನಲ್ಲಿ ಅದ್ದೂರಿಯಾಗಿ ಅಯ್ಯಪ್ಪ ಸ್ವಾಮಿ ಮೆರವಣಿಗೆಯನ್ನು ಮಾಡಲಾಯಿತು.

ಕಾರ್ತೀಕ ಮಾಸ ಪ್ರಾರಂಭ ಆಯ್ತು ಅಂದರೇ ಸಾಕು ಭಕ್ತರು ಅಯ್ಯಪ್ಪನ ದರ್ಶನಕ್ಕೆ ಹೋಗುವ ಕಾತರದಲ್ಲಿರುತ್ತಾರೆ. ಅಲ್ಲದೇ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಆಚರಣೆ ಮಾಡುವುದು ವಿಶೇಷವಾಗಿರುತ್ತದೆ. ಹಾಗೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯ ಶಿರೂರ್ ಪಾರ್ಕ್‌ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವತಿಯಿಂದ ಅಯ್ಯಪ್ಪ ಸ್ವಾಮಿ ಮೆರವಣಿಗೆಯನ್ನು ಮಾಡಲಾಯಿತು. ಸಕಲ ವಾದ್ಯ ವೈಭವದಿಂದ ಕುಂಭ ಮೇಳದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು, ಮೆರವಣಿಗೆಗೆ ಆನಂದ ಗುರುಸ್ವಾಮಿ ಹಾಗೂ ಡಾ.ವಿ.ಎಸ್.ವಿ ಪ್ರಸಾದ ವಿದ್ಯುಕ್ತವಾಗಿ ಚಾಲನೆ ನೀಡಿದರು.

Sabarimala Temple: ಅಯ್ಯಪ್ಪನ ದರ್ಶನಕ್ಕೆ ಒಂದೇ ದಿನ ಲಕ್ಷ ಮಂದಿ ಬುಕ್ಕಿಂಗ್Sabarimala Temple: ಅಯ್ಯಪ್ಪನ ದರ್ಶನಕ್ಕೆ ಒಂದೇ ದಿನ ಲಕ್ಷ ಮಂದಿ ಬುಕ್ಕಿಂಗ್

ಕರ್ನಾಟಕದ ಶಬರಿ ಮಲೈಯಲ್ಲಿ ಮೆರವಣಿಗೆ

ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್‌ನಲ್ಲಿರುವ ಅಯ್ಯಪ್ಪನ ದೇಗುಲ ಕರ್ನಾಟಕದ ಶಬರಿ ಮಲೈ ಎಂದೇ ಖ್ಯಾತಿ ಪಡೆದಿದೆ. ಸಾವಿರಾರು ಭಕ್ತರಿಗೆ ದೀಕ್ಷೆ ನೀಡುರುವ ಪುಣ್ಯ ಕ್ಷೇತ್ರವಾಗಿ ಹುಬ್ಬಳ್ಳಿ ಶಿರೂರ ಪಾರ್ಕ್‌ನ ಅಯ್ಯಪ್ಪ ಸ್ವಾಮಿ ದೇಗುಲ ಹೆಸರುವಾಸಿಯಾಗಿದೆ. 1994-95ರಲ್ಲಿ ಶಂಕುಸ್ಥಾಪನೆಗೊಡ ಈ ದೇಗುಲ ಇದೀಗ ಉತ್ತರ ಕರ್ನಾಟಕ ಮಾತ್ರವಲ್ಲದೆ, ರಾಜ್ಯದಲ್ಲಿಯೇ ಕರ್ನಾಟಕದ ಶಬರಿಮಲೈ ಎಂದೇ ಖ್ಯಾತಿ ಪಡೆದಿದೆ.

Ayyappa Swamy grand procession at Sabarimala of Karnataka

ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ

ಈಗಾಗಲೇ ಸಾವಿರಾರು ಭಕ್ತರು ತಮ್ಮ ವ್ರತವನ್ನು ಇಲ್ಲಿಂದಲೇ ಪ್ರಾರಂಭಿಸಿ, ಮಾಲೆ ಧರಿಸಿಕೊಂಡು ಅಯ್ಯಪ್ಪನ‌ ದರ್ಶನ ಮಾಡಿದ್ದಾರೆ. ಇದೀಗ ಭಕ್ತರು ಪುನಃ ಇಲ್ಲಿಯೇ ದರ್ಶನಕ್ಕೆ ಬರುತ್ತಿರುವುದು ವಿಶೇಷವಾಗಿದೆ. ಆನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆಯುವ ಪೂಜೆ ಪುನಸ್ಕಾರ ನೋಡುವುದೇ ಒಂದು ಸೌಭಾಗ್ಯವಾಗಿದೆ. ಮಕ್ಕಳು, ವೃದ್ಧರು, ಅಂಗವಿಕಲರು ಕೂಡ ಶಿರೂರ ಪಾರ್ಕ್ ಅಯ್ಯಪ್ಪನ ದೇವಸ್ಥಾನದಲ್ಲಿ ಭಕ್ತಿಯಿಂದ ಬೇಡಿಕೊಳ್ಳುವುದು ನಿಜಕ್ಕೂ ಭಕ್ತಿಭಾವವನ್ನು ಮತ್ತಷ್ಟು ಪುಷ್ಟಿಗೊಳಿಸುವಂತೆ ಭಾಸವಾಗುತ್ತಿದೆ.

Ayyappa Swamy grand procession at Sabarimala of Karnataka

ಗೆಲುವಿಗಾಗಿ ಅಯ್ಯಪ್ಪನ ಮೊರೆ

ಮುಂದಿನ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ಈಗಿನಿಂದಲೇ ತಯಾರಿ ನಡೆಸುತ್ತಿದ್ದರೆ, ಕಾರ್ಯಕರ್ತರು ತಮ್ಮ ನಾಯಕನ ಗೆಲುವಿಗೆ ಅಯ್ಯಪ್ಪನ ಮೊರೆ ಹೋಗುತ್ತಿದ್ದಾರೆ. ಡಿಸೆಂಬರ್, ಜನವರಿ ಬಂದರೆ ಸಾಕು ಅಯ್ಯಪ್ಪನ ದರ್ಶನ ಪಡೆಯಲು ಭಕ್ತರು ಶಬರಿಮಲೆಗೆ ಮಾಲೆ ಹಾಕಿಕೊಂಡು ಸಾಗರೋಪಾದಿಯಲ್ಲಿ ತೆರಳುತ್ತಾರೆ. ಆದರೆ, ಈ ಬಾರಿಯ ವಿಶೇಷ ಅಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇರಿಮುಡಿ ಜೊತೆ ತಮ್ಮ ನೆಚ್ಚಿನ ನಾಯಕರ ಫೋಟೋವನ್ನು ಕೊರಳಿನಲ್ಲಿ ತೂಗು ಹಾಕಿಕೊಂಡು ಅಯ್ಯಪ್ಪಸ್ವಾಮಿ ಮೊರೆ ಹೋಗುತ್ತಿದ್ದಾರೆ.

English summary
Ayyappa Swamy grand procession at Hubballi Shiruru Park Sabarimala of Karnataka, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X