ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ರಾಷ್ಟ್ರ ನಾಯಕರಿಗೆ ಪತ್ರ ಬರೆದ ಹುಬ್ಬಳ್ಳಿ ಜನ

ಹುಬ್ಬಳ್ಳಿ, ಜುಲೈ 18: ವಾಣಿಜ್ಯ ನಗರಿ ಹುಬ್ಬಳ್ಳಿಯ ಯುವಕನ ಬೆತ್ತಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಇದೀಗ ರಾಷ್ಟ್ರ ಮಟ್ಟಕ್ಕೂ ತಲುಪಿದೆ. ಹಲ್ಲೆ ಮಾಡಿರುವ ರೌಡಿಶೀಟರ್ ಯುವಕರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಹುಬ್ಬಳ್ಳಿ ಜನತೆ ಪತ್ರ ಬರೆದಿದ್ದು, ಯುವಕರ ಪೈಶಾಚಿಕ ಕೃತ್ಯಗಳನ್ನು ಪತ್ರದ ಮೂಲಕ ಬಿಚ್ಚಿಟ್ಟಿದ್ದಾರೆ.

ಯುವಕನ ಮೇಲಿನ ಹಲ್ಲೆ ಹಾಗೂ ಪೈಶಾಚಿಕ ಕೃತ್ಯ ಇಡೀ ಸಮಾಜ ತಲೆ ತಗ್ಗಿಸುವಂತದ್ದು. ಆದರೆ ಇಂತಹ ಕೃತ್ಯಗಳು ಆಗಾ ಆಗಾ ನಡೆಯುತ್ತಿದ್ದು, ಮಹಾನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು, ಕಾನೂನಿನ ಭಯ ಇಲ್ಲದಂತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯುವಕರು ಈಗಾಗಲೇ ರೌಡಿಶೀಟರ್ ಪಟ್ಟಿಯಲ್ಲಿದ್ದು, ಅವರ ಮೇಲೆ ಕಠಿಣ ಕ್ರಮವಾಗಬೇಕೆಂದು ಹುಬ್ಬಳ್ಳಿ ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್‌ ಶಾ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಷ್ಟ್ರ ನಾಯಕರಿಗೆ ಪತ್ರ ಬರೆದಿದ್ದಾರೆ.

Assault On Youth Case

ರೌಡಿಗಳ ಅಟ್ಟಹಾಸದ ಕುರಿತು ಹುಬ್ಬಳ್ಳಿ ಜನ ಬರೋಬ್ಬರಿ 13 ಜನ ನಾಯಕರಿಗೆ ಪತ್ರ ಬರೆದಿದ್ದಾರೆ. ರೌಡಿಗಳ ಅಟ್ಟಹಾಸಕ್ಕೆ ಹುಬ್ಬಳ್ಳಿ -ಧಾರವಾಡ ಅವಳಿನಗರದ ಜನತೆ ಬೇಸತ್ತು ಹೋಗಿದ್ದಾರೆ, ಈಗ ಯುವಕನ ಬೆತ್ತಲೆ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ತನಿಖೆ ಮಾಡುವಂತೆ ಹುಬ್ಬಳ್ಳಿಯ ಸಾರ್ವಜನಿಕರು ಪತ್ರ ಬರೆದಿದ್ದಾರೆ. ಸದ್ಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಅಂಗಳಕ್ಕೆ ತಲುಪಿದ ಬೆತ್ತಲೆ ಪ್ರಕರಣ ಮುಂದೇನಾಗುತ್ತೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಹುಬ್ಬಳ್ಳಿಯಲ್ಲಿ ಹೆಚ್ಚಿದ ಅಪರಾಧ ಪ್ರಕರಣ: ಆತಂಕದಲ್ಲಿ ಜನ

ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ, ಸಣ್ಣ ಪುಟ್ಟ ಕಾರಣಕ್ಕೆ ಗಲಾಟೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಲಾ ಆ್ಯಂಡ್ ಆರ್ಡರ್ ವ್ಯವಸ್ಥೆ ಹಳ್ಳ ಹಿಡಿದಂತಾಗಿದೆ. ಅದೆಷ್ಟೋ ನಿಯಮಗಳನ್ನು ಜಾರಿಗೊಳಿಸಿದರೂ ಕೂಡ ಅವಳಿನಗರದ ಲಗಾಮು ಪೊಲೀಸರ ಕೈಗೆ ಸಿಗದೇ ಇರುವುದರಿಂದ ಗೃಹ ಇಲಾಖೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

ಅವಳಿ ನಗರದಲ್ಲಿ ದಿನವೊಂದಕ್ಕೂ ಕೊಲೆ, ದರೋಡೆ, ಚಾಕು ಇರಿತ, ಮೀಟರ್ ಬಡ್ಡಿ ನೀಡುವವರ ಅಟ್ಟಹಾಸ ಮಿತಿಮೀರಿದೆ. ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚಾಕು, ಚೂರಿ, ತಲ್ವಾರ್, ಮತ್ತಿತರ ಮಾರಕಾಸ್ತ್ರಗಳು ಆಟಿಕೆಯಂತಾಗಿವೆ. ಸಾಮಾನ್ಯರೂ ಸಲೀಸಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಂದಾಜು 45 ಕೊಲೆಗಳು ನಡೆದಿವೆ ಎನ್ನಲಾಗಿದೆ. ಹೀಗಾಗಿ ಹುಬ್ಬಳ್ಳಿ ಜನ ಅಪರಾಧ ನಡೆಯುತ್ತಿರುವ ಪ್ರದೇಶದಲ್ಲಿ ಆಂತಕದಲ್ಲಿಯೇ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+