"ಅರವಿಂದ್ ಕ್ರೇಜಿವಾಲ್ ಕ್ರೇಜ್ ಖಾಲಿ!"
ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ ಚುನಾವಣೆ2025ರಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ದೆಹಲಿಯಲ್ಲಿ ಎಎಪಿ ಮೂರನೇ ಬಾರಿ ಅಧಿಕಾರಕ್ಕೆ ಬರುವ ಕನಸು ಈಡೇರುತ್ತಿಲ್ಲ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕ್ರೇಜ್ ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ಹೌದು ಈ ರೀತಿ ಹೇಳಿದ್ದು ಯಾರು ಹಾಗೂ ದೆಹಲಿಯಲ್ಲಿ ಈಗ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವ ವಿವರ ಇಲ್ಲಿದೆ.
ದೆಹಲಿಯಲ್ಲಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಾಪಾಡಿಕೊಂಡಿದೆ. ದೆಹಲಿ ವಿಧಾನಸಭೆ ಚುನಾವಣೆಯ ಮ್ಯಾಜಿಕ್ ಸಂಖ್ಯೆ /ಬಹುಮತ 36 ಆಗಿದೆ. ಇನ್ನು ದೆಹಲಿಯಲ್ಲಿ ಎಎಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಅರವಿಂದ್ ಕೇಜ್ರಿವಾ ಅವರಿಗೇ ಭಾರೀ ಹಿನ್ನಡೆಯಾಗಿರುವುದು ಮುಜುಗರಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು ದೆಹಲಿ ವಿಧಾನಸಭೆ ಚುನಾವಣೆಯ ರಿಸಲ್ಟ್‌ನ ಬಗ್ಗೆ ಮಾತನಾಡಿದ್ದಾರೆ.

ದೆಹಲಿಯಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ. ಅರವಿಂದ್ ಕ್ರೇಜಿವಾಲ್ ಅವರು ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ. ಅಣ್ಣಾ ಹಜಾರೆ ಹೋರಾಟವನ್ನು ಬಳಸಿಕೊಂಡು ಅರವಿಂದ್ ಕ್ರೇಜಿವಾಲ್ ಅವರು ಅಧಿಕಾರಕ್ಕೆ ಬಂದಿದ್ದರು. ಕಳೆದ ಎರಡು ಅವಧಿಯಲ್ಲಿ ಕೇಜ್ರಿವಾಲ್ ಅವರ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದರಿಂದ ಜನರು ನಿರಾಸೆಗೆ ಒಳಗಾಗಿದ್ದಾರೆ. ಹೀಗಾಗಿ, ದೆಹಲಿಯಲ್ಲಿ ಜನ ಬಿಜೆಪಿ ಕೈ ಹಿಡಿದಿದ್ದಾರೆ.
ಕಾಂಗ್ರೆಸ್ ಡೇ ಬಾಯ್ ಡೇ ಕೊಲ್ಯಾಪ್ಸ್ ಆಗುತ್ತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿತ ಕಂಡಿದೆ ಎಂದು ಅವರು ದೂರಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷವು ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ. ಅದೂ ಸಹ ಈ ರಾಜ್ಯಗಳಲ್ಲಿ ಬಿಜೆಪಿಯ ತಪ್ಪಿನಿಂದಾಗಿ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿ ಇರುವವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ. ಅಲ್ಲದೆ ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು. ಈ ಚುನಾವಣೆಯಿಂದ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಆದರೆ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಎಲ್ಲಿದೆಯೋ ಅಲ್ಲಿ ಮಾತ್ರ ಒಳ್ಳೆ ಕೆಲಸಗಳು ಆಗಿವೆ. ಹೀಗಾಗಿ, ಜನ ದೆಹಲಿಯಲ್ಲಿ ಡಬಲ್ ಇಂಜಿನ್ ಸರ್ಕಾರ ತಂದಿದ್ದಾರೆ. ದೆಹಲಿ ಜನ ಮೋದಿ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ.
ದೆಹಲಿಯನ್ನು ಅಭಿವೃದ್ದಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆದರೆ, ರಾಹುಲ್ ಗಾಂಧಿ ಇರುವವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ. ಆದರೆ, ಬಿಜೆಪಿಯಲ್ಲವೂ ಎಲ್ಲವೂ ಸರಿ ಇಲ್ಲ. ಭಿನ್ನಮತಕ್ಕೆ ನಾಯಕರು ಇತಿಶ್ರೀ ಹಾಕಲಿದ್ದಾರೆ. ಅಧ್ಯಕ್ಷರ ಚುನಾವಣೆ ಬಂದಿದ್ದು, ಸರ್ವಾನುಮತದಿಂದ ಅಧ್ಯಕ್ಷರ ಆಯ್ಕೆ ಆಗಬೇಕು. ಚುನಾವಣೆ ಎನ್ನುವುದು ಒಂದು ಪ್ರಕ್ರಿಯೆ ಅಷ್ಟೇ ಎಂದಿದ್ದಾರೆ.
ಇನ್ನು ದೆಹಲಿ ವಿಧಾನಸಭೆಯಲ್ಲಿ ಒಟ್ಟು 70 ಸೀಟುಗಳಿದ್ದು, 36 ಮ್ಯಾಜಿಕ್ ನಂಬರ್ ಆಗಿದೆ.












Click it and Unblock the Notifications