ರೈತರ ಸಮಸ್ಯೆ ಕುರಿತು ದೆಹಲಿಯಲ್ಲಿ ಆಂದೋಲನ: ಅಣ್ಣಾ ಹಜಾರೆ

Posted By: ಧಾರವಾಡ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ 2 : ರೈತರ ಸಮಸ್ಯೆ ಕುರಿತು ದೊಡ್ಡ ಮಟ್ಟದ ಆಂದೋಲನವನ್ನು ಮಾರ್ಚ್ 23 ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದರು.

ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಅಣ್ಣಾ ಹಜಾರೆ ಬಹಿರಂಗ ಸಭೆ

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಆಂದೋಲನ ಕುರಿತಾಗಿ ದೇಶವನ್ನು ಸುತ್ತುತ್ತಿದ್ದೇನೆ, ಮೋದಿ ಅವರು 3 ವರ್ಷಗಳಲ್ಲಿ ರೈತರ ಬಗ್ಗೆ ಏನನ್ನೂ ಮಾಡಿಲ್ಲ. ಮಹಾದಾಯಿ, ಕಳಬಾ ಬಡೂರಿ ಯೋಜನೆ ನೀರು ವಿವಾದದ ಕುರಿತು ಅಗತ್ಯ ಬಿದ್ದರೆ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದರು.

Agitation over farmers problem on March 23 in Delhi by Anna Hazare

ಜನಲೋಕಪಾಲ್ ಮಸೂದೆಯನ್ನು ಮೋದಿ ಬಲಹೀನ ಮಾಡಿದ್ದಾರೆ. ಬೆಳಗಾವಿ ಗಡಿ ವಿವಾದ ವಿಚಾರ ಭಾರತ, ಪಾಕಿಸ್ತಾನದ ಹೋರಾಟ ಅಲ್ಲ. 2 ರಾಜ್ಯಗಳ ಮಧ್ಯೆ ಸಹಬಾಳ್ವೆ ಇರಬೇಕು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಿರಣ್ ಬೇಡಿ ಅವರು ನನ್ನ ಜತೆಗೆ ರೈತರ ಪರವಾಗಿ ಹೋರಾಟ ಮಾಡಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ಕಾಲಿಟ್ಟಿದ್ದಾರೆ ಆದರೆ ಅವರ ಮನಸ್ಸಿನಲ್ಲಿ ಏನಿದೆ ಎನ್ನವುದು ತಿಳಿದಿಲ್ಲ. ಹೀಗಾಗಿ ಈ ಬಾರಿ ಹೋರಾಟಕ್ಕೆ ಸೇರುವವರಿಗೆ 100 ರೂ. ಅಫಿಡೆವಿಟ್ ಮಾಡಿಕೊಂಡಿದ್ದು ಈಗಾಗಲೇ 4 ಸಾವಿರ ಅಫಿಡೆವಿಟ್ ಅರ್ಜಿಗಳು ಬಂದಿವೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social reformer Anna Hazare is starting fresh agitation over farmers problems at Delhi. he accused prime minister modi that he diluted Janlokpal Bill.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ