ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಗೃಹಿಣಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿ. 05 : ಸಂಸಾರದ ಗುಟ್ಟು ವ್ಯಾದಿ ರಟ್ಟು ಎಂಬ ಮಾತು ಕೇಳಿದ್ದಿರಿ. ಆದರೆ ಇಲ್ಲಿ ಮಾತ್ರ ವ್ಯಾದಿ ರಟ್ಟು ಅಷ್ಟೇ ಅಲ್ಲ ಸೀದಾ ರಾಷ್ಟ್ರಪತಿ ಭವನ ತಲುಪಿದೆ. ಇದು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರೂ, ಪುನಃ ಎರಡನೇ ಮದುವೆಯಾಗಿ ಸಂಕಷ್ಟ ಎದುರಿಸುತ್ತಿರುವವರ ವಿಚಿತ್ರ ತ್ರಿಕೋನ ಸ್ಟೋರಿ. ಒಂದು ಕಡೆ ಮೊದಲ ಗಂಡ ಬಿಟ್ಟು ಹೋದ, ಎರಡನೇ ಗಂಡನ ಜೊತೆಗೆ ಜೀವನ ಮಾಡಲು ಆತನ ಮೊದಲನೆ ಹೆಂಡತಿ ಬಿಡುತ್ತಿಲ್ಲ. ಹೀಗಾಗಿ, ರೂಪಮಾಲಾ ಎಂಬ ಗೃಹಿಣಿ ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದಾರೆ.

ನನ್ನ ಮೊದಲ ಗಂಡ ಬಿಟ್ಟು ಹೋದ, ಎರಡನೇ ಗಂಡನ ಜೊತೆಗೆ ಜೀವನ ಮಾಡಲು ಆತನ ಮೊದಲನೆ ಹೆಂಡತಿ ಬಿಡುತ್ತಿಲ್ಲ. ನನಗೆ ಮಾನಸಿಕ ಹಿಂಸೆಯಾಗುತ್ತಿದೆ ನಾನು ಗರ್ಭಿಣಿ. ಆತ್ಮಹತ್ಯೆ ಸಹ ಮಾಡಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ನನಗೆ ದಯಾಮರಣ ಕರುಣಿಸಿ ಅಂತ ರಾಷ್ಟ್ರಪತಿಗೆ ಮಹಿಳೆಯೊಬ್ಬಳು ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸಾಧನೆ ಶೂನ್ಯ: ಹುಬ್ಬಳ್ಳಿಯಲ್ಲಿ ವಿ.ಎಸ್ ಉಗ್ರಪ್ಪ ಆಕ್ರೋಶರಾಜ್ಯದಲ್ಲಿ ಬಿಜೆಪಿ ಸಾಧನೆ ಶೂನ್ಯ: ಹುಬ್ಬಳ್ಳಿಯಲ್ಲಿ ವಿ.ಎಸ್ ಉಗ್ರಪ್ಪ ಆಕ್ರೋಶ

ರಾಷ್ಟ್ರಪತಿ ಅಂಗಳಕ್ಕೆ ಕಾಲಿಟ್ಟ ಹುಬ್ಬಳ್ಳಿ ಕಥೆ

ರಾಷ್ಟ್ರಪತಿ ಅಂಗಳಕ್ಕೆ ಕಾಲಿಟ್ಟ ಹುಬ್ಬಳ್ಳಿ ಕಥೆ

ಈಗಾಗಲೇ ಮದುವೆಯಾಗಿ ಸುಖ ಸಂಸಾರ ನಡೆಸಿದ್ದಾರೆ. ಎದೆಮಟ್ಟಕ್ಕೆ ಬೆಳೆದು ನಿಂತ ಮಕ್ಕಳಿವೆ. ಇದನ್ನ ಲೆಕ್ಕಿಸಿದೆ ಎರಡನೇ ಮದುವೆಯಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ವಿಚಿತ್ರ ತ್ರಿಕೋನ ಪ್ರೇಮಕಥನ ಇದು. ದೇಶದ ಪ್ರಥಮ ಪ್ರಜೆಯ ಅಂಗಳಕ್ಕೆ ತಲುಪಿದೆ. ಇದಕ್ಕೆ ಹುಬ್ಬಳ್ಳಿಯ ಗಿರಿನಗರ ಸಾಕ್ಷಿಯಾಗಿದೆ.

ಗಿರಿನಗರದ ಎಲೆಕ್ಟ್ರಿಕಲ್ ಗುತ್ತಿಗೆದಾರ ಬಸವರಾಜ ಅವರು ಮೊದಲ ಪತ್ನಿ ರೂಪಶ್ರೀ ಎರಡನೇ ಪತ್ನಿ ರೂಪಮಾಲಾ ಸಂಸಾರದ ಗುಟ್ಟು ದಿಲ್ಲಿಯ ರಾಷ್ಟ್ರಪತಿಗಳ ಅಂಗಳಕ್ಕೂ ಸಹ ಕಾಲಿಟ್ಟಿದೆ. ಎರಡನೇ ಗಂಡನ ಜೊತೆಗೆ ಜೀವನ ನಡೆಸಲು ಅವರ ಮೊದಲ ಪತ್ನಿ ಬಿಡುತ್ತಿಲ್ಲ. ನನಗೆ ದಯಾಮರಣ ಕರುಣಿಸಿ ಎಂದು ರಾಷ್ಟ್ರಪತಿಗೆ ರೂಪಮಾಲಾ ಪತ್ರ ಬರೆದಿದ್ದಾರೆ.

ಗುತ್ತಿಗೆದಾರನನ್ನು ಮದುವೆಯಾಗಿ, ದಯಾಮರಣಕ್ಕೆ ಅರ್ಜಿ!

ಗುತ್ತಿಗೆದಾರನನ್ನು ಮದುವೆಯಾಗಿ, ದಯಾಮರಣಕ್ಕೆ ಅರ್ಜಿ!

ಅಸಲಿ ಸ್ಟೋರಿ ಏನು ಅಂದರೆ ದಯಾಮರಣ ಕರುಣಿಸಿ ಅಂತ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ ರೂಪಮಾಲಾಗೆ ಇದು ಎರಡನೇ ಮದುವೆ. 2002 ಜೂನ್ 16 ರಂದು ಬೆಂಗಳೂರು ಮೂಲದ ಮಹೇಶ್ ಎಂಬುವರನ್ನು ಮದುವೆಯಾಗಿದ್ದ ರೂಪಮಾಲಾ ಅವರ ಜೊತೆಗೆ 16 ವರ್ಷ ಸಂಸಾರ ನಡೆಸಿದ್ದರು. ಮಹೇಶ್ ಮತ್ತು ರೂಪಮಾಲಗೆ ಎರಡು ಗಂಡು ಮಕ್ಕಳು ಸಹ ಇದ್ದಾರೆ. ಬಳಿಕ ಮೊದಲ‌ ಗಂಡನಿಂದ ವಿಚ್ಚೇದನ ಪಡೆದ ರೂಪಮಾಲ 2019ರಲ್ಲಿ ಬಸವರಾಜ ಎಂಬ ಎಲೆಕ್ಟ್ರಿಕಲ್ ಗುತ್ತಿಗೆದಾರ ಬಸವರಾಜ ಎಂಬುವವರನ್ನು ಪರಸ್ಪರ ಒಪ್ಪಿ ಎರಡನೆ ಮದುವೆಯಾಗಿದ್ದರು.

ಗರ್ಭಿಣಿ ಮೇಲೆ ಹಲ್ಲೆ, ನಿಂದನೆ ಆರೋಪ

ಗರ್ಭಿಣಿ ಮೇಲೆ ಹಲ್ಲೆ, ನಿಂದನೆ ಆರೋಪ

ಇನ್ನೂ ಬಸವರಾಜನಿಗೂ ಇದು ಎರಡನೇ ಮದುವೆ. ರೂಪಶ್ರೀ ಎಂಬುವರನ್ನು 2009ರಲ್ಲಿ ಬಸವರಾಜ ಮದುವೆಯಾಗಿದ್ದರು ಇವರಿಗೂ ಸಹ ಎರಡು ಮಕ್ಕಳು. ತಮ್ಮ ಮೊದಲ ಪತ್ನಿ ರೂಪಶ್ರೀ ಜೊತೆಗೆ ಸಂಸಾರ ನಡೆಸುತ್ತಿದ್ದರೂ ಸಹ ಬಸವರಾಜ ರೂಪಮಾಲಾಗೆ ಫೆಬ್ರವರಿ 2019ರಲ್ಲಿ ತಾಳಿಕಟ್ಟಿದರು. ಇದಕ್ಕೆ ರೂಪಶ್ರೀ ಮಾತ್ರ ಬಸವರಾಜ ಮತ್ತು ರೂಪಮಾಲಾ ಜೊತೆಗೆ ಸಂಸಾರ ಮಾಡಲು ಒಪ್ಪಿರಲಿಲ್ಲ. ಮತ್ತೊಂದು ಕಡೆ ವಿಚ್ಚೇದನ ಸಹ ನೀಡಿರಲಿಲ್ಲ. ಇದನ್ನೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ರೂಪಶ್ರೀ, ರೂಪಮಾಲಾ ಮನೆಗೆ ನುಗ್ಗಿ ದಬ್ಬಾಳಿಕೆ ನಡೆಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಮಗುವನ್ನು ಸಾಯಿಸಲು ಆಗಲ್ಲ, ದಯಾಮರಣ ನೀಡಿ!

ಮಗುವನ್ನು ಸಾಯಿಸಲು ಆಗಲ್ಲ, ದಯಾಮರಣ ನೀಡಿ!

ಇದರಿಂದಾಗಿ ತೀವ್ರ ಮಾನಸಿಕವಾಗಿ ನೊಂದು‌ ರೂಪಮಾಲಾ ಆತ್ಮಹತ್ಯೆಗೂ ಸಹ ಮುಂದಾಗಿದ್ದರು, ವೈದ್ಯರ ಪ್ರಯತ್ನದಿಂದ ಬದುಕುಳಿದ್ದಾರೆ. ಸದ್ಯ ರೂಪಮಾಲಾ ತುಂಬು ಗರ್ಭಿಣಿ ಸಹ ಆಗಿದ್ದಾರೆ. ಹೀಗಾಗಿ ಒಂದು ಕಡೆ ರೂಪಶ್ರೀ ಕಾಟದಿಂದ ಬದುಕಲು ಆಗುತ್ತಿಲ್ಲ ಮತ್ತೊಂದು ಕಡೆ ಹೊಟ್ಟೆಯಲ್ಲಿರುವ ಕೂಸನ್ನು ಸಾಯಿಸಲು ಮನಸಾಗುತ್ತಿಲ್ಲ. ಇದರಿಂದ 22-11-22 ದಯಾ ಮರಣಕ್ಕಾಗಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ.

English summary
A hubballi pregnant woman has applied to the President for euthanasia. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X