• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಂಬು ಗರ್ಭಿಣಿಯಾದರೂ ಕೆಲಸಕ್ಕೆ ಹಾಜರಾದ ಲೇಡಿ ಇನ್ಸ್‌ಪೆಕ್ಟರ್

|

ಹುಬ್ಬಳ್ಳಿ, ಮಾರ್ಚ್ 6; ತುಂಬು ಗರ್ಭಿಣಿಯಾದರೂ ಕೂಡ ಕರ್ತವ್ಯಕ್ಕೆ ಹಾಜರಾಗುವದರ ಮೂಲಕ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ರೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಹೌದು. ಹುಬ್ಬಳ್ಳಿ ಶಹರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಪದ್ಮಮ್ಮ ಅವರು ಗರ್ಬಿಣಿಯಾದರೂ ಕೆಲಸಕ್ಕೆ ಹಾಜರಾಗಿದ್ದಾರೆ. ಮೂಲತ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದವರಾದ ಪದ್ಮಮ್ಮ ಅವರು ಶಹರ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೆರಿಗೆ ಸಮಯ ಚಿಕಿತ್ಸೆ ಫಲಿಸದೇ ಮಹಿಳಾ ಪೇದೆ ಸಾವು

ಇವರೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ‌ ಕೂಡ ಅದ್ಯಾವುದನ್ನು ಲೆಕ್ಕಿಸದೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಂತೆ ಡ್ಯೂಟಿ ಮಾಡುತ್ತಿದ್ದಾರೆ.

ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ‌ಪರ ವಾದ ಮಂಡಿಸಲು ಬಂದಿದ್ದ ವಕೀಲರ ತಂಡಕ್ಕೆ ಪದ್ಮಮ್ಮ ರಕ್ಷಣೆ ನೀಡುವ ಜವಾಬ್ದಾರಿಯನ್ನು ಶುಕ್ರವಾರ ಹೊತ್ತಿದರು.

ಇದು ನನ್ನ ಕೆಲಸ. ಇಷ್ಟಪಟ್ಟು ಮಾಡುತ್ತಿದ್ದೇನೆ. ಇದರಲ್ಲಿ ಏನು ವಿಶೇಷ ಇಲ್ಲ. ನಮ್ಮ ಠಾಣೆಯ ಸಿಬ್ಬಂದಿ ಸಹಕಾರ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಆದ್ರೆ ಪದ್ಮಮ್ಮ ಅವರ ಕರ್ತವ್ಯ ‌ಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

English summary
A Pregnant Lady Inspector Attended To Her Duty In Hubballi. Lady Inspector Padhamma 8 months Pregnant and she attended her regular work. public appreciate it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X