ಬೆಳಕು ನೀಡುವ ಹೆಸ್ಕಾಂಗೆ ಆರ್ಥಿಕ ಸಂಕಷ್ಟ: 647.47 ಕೋಟಿ ರೂ ಬಾಕಿ ಉಳಿಸಿಕೊಂಡ ಸರ್ಕಾರಿ ಸಂಸ್ಥೆಗಳು

ಹುಬ್ಬಳ್ಳಿ, ಜೂನ್‌ 13: ಪ್ರತಿಯೊಂದು ಮನೆ ಹಾಗೂ ಇಲಾಖೆಯಲ್ಲಿ ಬೆಳಕು ಚೆಲ್ಲುವ ಹೆಸ್ಕಾಂ ಇಲಾಖೆಗೆ ಈಗ ಕತ್ತಲು ಆವರಿಸುವಂತಾಗಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು 2023ರ ಏಪ್ರಿಲ್‌ವರೆಗೆ ಹೆಸ್ಕಾಂಗೆ ಪಾವತಿಸಬೇಕಾದ ಬರೋಬ್ಬರಿ 647.47 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ.

ಹೆಸ್ಕಾಂ ವ್ಯಾಪ್ತಿಗೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ವಿಜಯಪುರ, ಹಾವೇರಿ ಜಿಲ್ಲೆಗಳು ಒಳಪಡುತ್ತವೆ. ಈ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು (ಗ್ರಾಮ ಪಂಚಾಯಿತಿ) ನೀರು ಸರಬರಾಜು ಮತ್ತು ಬೀದಿ ದೀಪಗಳಿಗೆ ಬಳಸಿದ ವಿದ್ಯುತ್ ಬಿಲ್ ಪಾವತಿಸಬೇಕಿವೆ.

647.47 Crores of Hescom Bill Outstanding By Government Institutions

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೀರು ಸರಬರಾಜಿಗೆ ಬಳಸಿದ ವಿದ್ಯುತ್ ಬಿಲ್ ಬಾಕಿ 47.51 ಕೋಟಿ.ರೂ. ಬೀದಿ ದೀಪಗಳಿಗೆ ಬಳಸಿದ ವಿದ್ಯುತ್ ಬಿಲ್ 9.76 ಕೋಟಿ ರೂ., ನವಲಗುಂದ ಪುರಸಭೆ 14 ಲಕ್ಷ, ಅಣ್ಣಿಗೇರಿ ಪುರಸಭೆ 9 ಲಕ್ಷ ಸೇರಿ ಒಟ್ಟು ಧಾರವಾಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ 57.5 ಕೋಟಿ ರೂ. ಹಾಗೂ ಜಿಲ್ಲೆಯ 144 ಗ್ರಾಪಂಗಳು 72.75 ಕೋ.ರೂ. ಬಾಕಿ ಬಿಲ್ ಪಾವತಿಸಬೇಕಿದೆ.

ಗದಗ ನಗರಸಭೆ 4.22 ಕೋಟಿ ರೂ, ನರಗುಂದ ಪುರಸಭೆ 1.11 ಕೋಟಿ ರೂ, ಇನ್ನುಳಿದ 2 ಪುರಸಭೆ, 4 ಪಟ್ಟಣ ಪಂಚಾಯಿತಿಗಳ 72 ಲಕ್ಷ ಸೇರಿ ಒಟ್ಟು 6.05 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 122 ಗ್ರಾಪಂಗಳು ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ 1.16 ಕೋಟಿ ರೂ, ಶಿರಸಿ ನಗರಸಭೆ 1.66 ಕೋಟಿ ರೂ, ಇನ್ನುಳಿದ 3 ಪುರಸಭೆ, 3 ಪಟ್ಟಣ ಪಂಚಾಯಿತಿ 1 ನಗರಸಭೆಯ ಬಾಕಿ 89 ಲಕ್ಷ ಸೇರಿ ಒಟ್ಟು 3.71 ಕೋಟಿ ರೂ ಹಾಗೂ 230 ಗ್ರಾಪಂಗಳು 3.85 ಕೋಟಿ ರೂ ಪಾವತಿಸಿಲ್ಲ.

ಹಾವೇರಿ ನಗರಸಭೆ 14 ಲಕ್ಷ ರೂ , ರಾಣೆಬೆನ್ನೂರು ನಗರಸಭೆ 1.21 ಕೋಟಿ ರೂಪಾಯಿ , ಇನ್ನುಳಿದ 5 ಪುರಸಭೆ, 1 ಪ.ಪಂ.ಗಳ 23 ಲಕ್ಷ ಸೇರಿ ಒಟ್ಟು 1.58 ಕೋಟಿ ರೂಪಾಯಿ ಹಾಗೂ 223 ಗ್ರಾಮ ಪಂಚಾಯತ್‌ಗಳ 194.69 ಕೋಟಿ ರೂಪಾಯಿ ಬಿಲ್ ಬಾಕಿ ಇದೆ.

ಒಟ್ಟಿನಲ್ಲಿ ಇಂತಹದೊಂದು ಬಹುದೊಡ್ಡ ಮೊತ್ತ ಬಾಕಿ ಇರುವ ಹಿನ್ನೆಲೆಯಲ್ಲಿ ಹೆಸ್ಕಾಂ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಮಂಡಳಿ ಹಾಗೂ ಸರ್ಕಾರ ಸೂಕ್ತ ನಿರ್ದೇಶನದ ಮೂಲಕ ಹೆಸ್ಕಾಂ ಆರ್ಥಿಕ ಸಂಕಷ್ಟ ಬಗೆಹರಿಸುವ ಕಾರ್ಯವನ್ನು ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+