ಹುಬ್ಬಳ್ಳಿಯಲ್ಲಿ 10 ರೂ. ನಾಣ್ಯ ವದಂತಿ ಬಗ್ಗೆ ಬ್ಯಾಂಕ್ ಸ್ಪಷ್ಟನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 05 : ನಗರದಲ್ಲಿ 10 ರೂ. ನಾಣ್ಯ ಚಲಾವಣೆ ಇಲ್ಲ ಎಂಬ ಊಹಾಪೋಹಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಕಳೆದ ನವೆಂಬರ್ 8ರಂದು 500 ಮತ್ತು 1000 ರೂ. ನೋಟ್ ಬ್ಯಾನ್ ಆದ ನಂತರ ಕ್ರಮೇಣ ಮತ್ತಿನ್ನೇನು ಕಾದಿದೆಯೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ವ್ಯಕ್ತಿಗಳು 10 ರೂ. ನಾಣ್ಯ ನಡೆಯುವುದಿಲ್ಲವಂತೆ ಎಂಬ ಗಾಳಿ ಸುದ್ದಿ ಹಬ್ಬಿಸಿದ್ದರು.

10 rs coin rumours in hubballi sbi officer clarification

ಇದರಿಂದಾಗಿ ಕೆಲವೊಂದು ಪೆಟ್ರೋಲ್ ಪಂಪ್ ಗಳಲ್ಲಿ ಮತ್ತು ಅಂಗಡಿಗಳಲ್ಲಿ 10 ರೂ. ನಾಣ್ಯವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವ್ಯಾಪಾರಿಗಳು ನಾವು 10 ರೂ. ನಾಣ್ಯ ತೆಗೆದುಕೊಳ್ಳುತ್ತೇವೆ. 100 ರೂಪಾಯಿಗೆ 90 ರೂ. ಕೊಡುತ್ತೇವೆ ಎಂದು ಆಮೀಷ ತೋರಿಸಿ ದುಡ್ಡು ಮಾಡಿಕೊಳ್ಳುತ್ತಿದ್ದರು.

ಈ ಬಗ್ಗೆ ಹಲವಾರು ಬಾರಿ ಬ್ಯಾಂಕ್ ಗಳೂ ಕೂಡ ಸ್ಪಷ್ಟನೆ ನೀಡಿದ್ದವು. ಆದರೆ, ಕೆಲ ಗ್ರಾಮೀಣ ಪ್ರದೇಶದ ಜನರು ಹುಬ್ಬಳ್ಳಿಯಲ್ಲಿ 10 ರೂ. ನಾಣ್ಯ ನಡೆಯುವುದಿಲ್ಲವಂತೆ ಎಂಬ ಗಾಳಿಸುದ್ದಿಯನ್ನು ನಂಬಿ ತಮ್ಮ ಹಳ್ಳಿಗಳಲ್ಲಿಯೂ ಹಬ್ಬಸಿದ್ದರು.

ಹೀಗಾಗಿ ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಕೂಡ 10 ರೂ. ನಾಣ್ಯ ನಡೆಯುವುದಿಲ್ಲವೆಂಬ ಸುದ್ದಿ ಹಬ್ಬಿಕೊಂಡಿತ್ತು. ಇದರಿಂಗಾಗಿ ಕೆಲವರು ತಮ್ಮಲ್ಲಿದ್ದ 10 ರೂ. ನಾಣ್ಯಗಳನ್ನು ಕಡಿಮೆ ಹಣಕ್ಕೆ ಬದಲಾವಣೆ ಮಾಡಿಕೊಂಡಿದ್ದರು.

ಈ ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲ ಚಾಲಾಕಿ ವ್ಯಾಪಾರಿಗಳು ಮುಗ್ಧ ಹಳ್ಳಿ ಜನರನ್ನು 10 ರೂ. ನಾಣ್ಯ ನಡೆಯುವುದಿಲ್ಲ ಇಟ್ಟುಕೊಂಡು ಏನ್ ಮಾಡ್ತೀರಿ ನಮಗೆ ಕೊಟ್ಟು ಹೋಗಿ ನಾವು ಅದರಲ್ಲಿರುವ ತಾಮ್ರವನ್ನು ತೆಗೆಯಿಸುತ್ತೇವೆ ಎಂದು ಪಡೆದುಕೊಳ್ಳುತ್ತಿದ್ದರು.

ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ಪುಸ್ತಕ ವ್ಯಾಪಾರಿ ಪ್ರಶಾಂತ್, ನಾನು ತುಂಬುತ್ತಿರುವ ಪಿಗ್ಮಿ ಕಲೆಕ್ಟರ್ ಕೂಡ 10 ರು ನಾಣ್ಯವನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. ಇದಿರಂದ 'ನಾನಂತೂ 10 ರೂ. ನಾಣ್ಯ ತೆಗೆದುಕೊಳ್ಳುತ್ತಿಲ್ಲ ಎಂದರು.

ಈ ಕುರಿತು ಮಾಹಿತಿ ನೀಡಿದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ 10 ರೂ. ನಾಣ್ಯ ಹೊರಗಡೆ ನಡೆಯದಿದ್ದರಿಂದ ಎಸ್ಬಿಐ ಅಥವಾ ಯಾವುದೇ ಬ್ಯಾಂಕ್ ಗಳಲ್ಲಿ ಜಮಾ ಮಾಡಬಹುದು ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
10 rs coin rumours in hubballi, State bak of india hubballi officer clarification about 10 rs coin.
Please Wait while comments are loading...