• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್, ಸೋನಿಯಾ ಬೇಲ್ ಮೇಲೆ ಹೊರಗೆ: ಕಾಂಗ್ರೆಸ್‌ನ ಭ್ರಷ್ಟಾಚಾರ ಆರೋಪಕ್ಕೆ ಬೈರತಿ ತಿರುಗೇಟು

By ಹಾವೇರಿ ಪ್ರತಿನಿಧಿ
|
Google Oneindia Kannada News

ಹಾವೇರಿ, ಅ. 02: ಬಿಜೆಪಿ 40 ಪರ್ಸೆಂಟ್ ಸರ್ಕಾರ ಅನ್ನುವ ರಾಹುಲ್ ಗಾಂಧಿ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹಾವೇರಿಯಲ್ಲಿ ಕಿಡಿಕಾರಿದರು. ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡು ಮಾತನಾಡಿದ ಸಚಿವರು, ಅವರಿಗೆ ಈ ಮಾತು ಹೇಳವುದಕ್ಕೆ ಯಾವ ನೈತಿಕತೆ ಇದೆ. ರಾಹುಲ್ ಗಾಂಧಿ ಮತ್ತು ಅವರ ತಾಯಿ ಬೇಲ್ ಮೇಲೆ ಹೊರಗಡೆ ಇದ್ದಾರೆ. ಇದಕ್ಕೆ ಪಿತಾಮಹರು ಅಂದರೆ ಕಾಂಗ್ರೆಸ್ ಪಕ್ಷದವರು ಎಂದು ಕಿಡಿಕಾರಿದ್ದಾರೆ.

ಅವರಿಗೆ ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆಯೂ ಇಲ್ಲ. ಒಂದೆ ವೇಳೆ ನೈತಿಕತೆ ಇದ್ದರೆ ದಾಖಲಾತಿಗಳನ್ನು ಒದಗಿಸಿ ಮಾತನಾಡುವಂತಹ ಕೆಲಸ ಮಾಡಬೇಕು. ಈ ರೀತಿಯಾದ ಹೇಳಿಕೆ ಕೊಡುವುದನ್ನು ನಾನು ಖಂಡಿಸುತ್ತೇನೆ. ಇಡೀ ರಾಜ್ಯದಲ್ಲಿ ನಮ್ಮ ಪಕ್ಷ ಹಾಗೂ ನಮ್ಮ ಕಾರ್ಯಕರ್ತರು ಇದರ ವಿರುದ್ಧ ಪ್ರತಿಭಟನೆಗೆ ಇಳಿಯುವ ಎಚ್ಚರಿಕೆಯನ್ನು ಕೊಡುತ್ತಾ ಇದ್ದೀನಿ ಎಂದು ಸಚಿವ ಬೈರತಿ ‌ಬಸವರಾಜು ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದರು.

ಭಾರತ್‌ ಜೋಡೋ ಯಾತ್ರೆ: ನಂಜನಗೂಡಿನ ಬದನವಾಳುಗೆ ಬಂದ ರಾಹುಲ್ ಗಾಂಧಿ ಪಾದಯಾತ್ರೆ ಭಾರತ್‌ ಜೋಡೋ ಯಾತ್ರೆ: ನಂಜನಗೂಡಿನ ಬದನವಾಳುಗೆ ಬಂದ ರಾಹುಲ್ ಗಾಂಧಿ ಪಾದಯಾತ್ರೆ

ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ಇನ್ನು ಆರ್‌ಎಸ್‌ಎಸ್‌ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಒಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಗಿದೆ. ರಾಷ್ಟ್ರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ದೇಶಭಕ್ತಿಯನ್ನು ಮೆರೆಸುವ ಕೆಲಸವನ್ನು ಮಾಡುತ್ತಿದೆ. ಆಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಅವರು ಅಸೂಯೆಯಿಂದ ಮಾತನಾಡುತ್ತಿದ್ದಾರೆ. ದೇಶ, ರಾಜ್ಯ ರಕ್ಷಣೆ ಮಾಡುವ ಬಗ್ಗೆ ಅವರು ನಮಗೆ ಹಲವಾರು ಸಲಹೆ, ಸೂಚನೆ ಕೊಡುತ್ತಾರೆ. ಅದಕ್ಕೆ ಅವರನ್ನು ಕಂಡರೆ ಕಾಂಗ್ರೆಸ್‌ನವರಿಗೆ ಎಲ್ಲೋ ಒಂದು ಕಡೆ ಅಸೂಯೆ ಭಾವ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

ಪೇ‌ ಸಿಎಂ ಅಭಿಯಾನಕ್ಕೆ ಬೈರತಿ ಪ್ರತಿಕ್ರಿಯೆ

ಇದೇ ವೇಳೆ ಪೇ‌ ಸಿಎಂ ಅಭಿಯಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್‌ನ ಪೇ ಸಿಎಂ‌ ಅಭಿಯಾನ ನಿಜಕ್ಕೂ ಕೂಡ ನಾಚಿಕೆಗೇಡಿನ ಸಂಗತಿ ಆಗಿದೆ. ಅವರು ಕೂಡ ಮುಖ್ಯಮಂತ್ರಿಗಳು ಆಗಿದ್ದವರು. ಅವರ ಬೆನ್ನನ್ನು ಅವರು ನೋಡಿಕೊಳ್ಳಬೇಕು. ಏನು ಮಾಡಿದ್ದೆ ಹಿಂದೆ, ನಾನು ಸಿಎಂ ಆಗಿದ್ದಾಗ ಏನೇನು ಆಯಿತು ಅನ್ನುವುದನ್ನು ಅವರು ನೋಡಿಕೊಳ್ಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಯಾವ ಯಾತ್ರೆ ಮಾಡಿದರೂ ಜನ ನಮ್ಮ ಪರ"

"ಅದು ಅವರಿಗೆ ಶೋಭೆ ತರುವಂಥದ್ದಲ್ಲ. ಪೇ ಸಿಎಂ ಅಂತಾ ಹಾಕಿದ ತಕ್ಷಣ ಜನ ಏನು ಇವರ ಹಿಂದೆ ಓಡಿ ಹೋಗಿ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ. ಜನರ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇವೆ" ಎಂದು ಸಚಿವರು ಹೇಳಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಣ್ಣೀರು ಹಾಕಿರುವ ವಿಚಾರವಾಗಿ ಮಾತನಾಡಿದ ಸಚಿವ ಬೈರತಿ ಬಸವರಾಜು, "ಅವರು ಏನೇ ನಾಟಕ ಮಾಡಿದರೂ ಜನರು ಇವತ್ತು ನಮ್ಮ ಪರವಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಪರವಾಗಿ ಆಶೀರ್ವಾದ ಮಾಡುತ್ತಾರೆ ಅನ್ನುವ ವಿಶ್ವಾಸವಿದೆ. ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಾವು ಜನರ ಮುಂದೆ ಹೋಗುತ್ತೇವೆ. ಇವರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳಲು ಹೋಗುತ್ತಾರೆ" ಎಂದು ಬೈರತಿ ಬಸವರಾಜು ಪ್ರಶ್ನೆ ಮಾಡಿದ್ದಾರೆ.

Sonia, Rahul Gandhi On Bail, Byrati Basavaraj Reminds Congress on Allegation of Corruption

"ಏನಾದರೂ ಮಾಡಿದ್ದರೆ ಕಳೆದ ಬಾರಿ ಯಾಕೆ 79 ಸೀಟು ಬಂತು? ಇವರು "ಜೋಡೋ ಯಾತ್ರೆ," ಪಾದಯಾತ್ರೆ, ಇನ್ನೊಂದು ಯಾತ್ರೆ ಮಾಡಲಿ ಜನರು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡಬಾರದು. ದೇಶ ಉಳಿಸುವಂತಹ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಜನರು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. 2023ಕ್ಕೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ" ಅನ್ನುವ ವಿಶ್ವಾಸವನ್ನು ಸಚಿವ ಬೈರತಿ ಬಸವರಾಜು ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ
Know all about
ಸೋನಿಯಾ ಗಾಂಧಿ
English summary
Minister Bhyrati Basavaraj has reminded congress that Sonia Gandhi and Rahul Gandhi are on bail in a corruption case. This was reaction to Congress' 40% commission allegation against BJP government. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X