• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾತಿನ ಭರದಲ್ಲಿ ರಾಹುಲ್ ಗಾಂಧಿಯನ್ನು ಸಾಯಿಸಿದ ಈಶ್ವರ ಖಂಡ್ರೆ!

|

ಹಾವೇರಿ, ಮಾರ್ಚ್ 9: ಹಾವೇರಿ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಬಲಿದಾನ ಬಣ್ಣಿಸುವ ಭರದಲ್ಲಿ ಹಾಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಾಯಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಭಾಷಣದಲ್ಲಿ ಹೆಸರಿನ ಒಂದು ವ್ಯತ್ಯಾಸದಿಂದ ಇಡೀ ಕಾಂಗ್ರೆಸ್ ಪಕ್ಷಕ್ಕೆ ಇರಿಸುಮುರಿಸು ಉಂಟಾಯಿತು.

ಲೋಕಸಭಾ ಚುನಾವಣೆಗೆ ಹಾವೇರಿಯಲ್ಲಿ ಕಾಂಗ್ರೆಸ್ ಪರಿವರ್ತನೆ ಕೂಗು

ಖಂಡ್ರೆ ಅವರು ತಮ್ಮ ಭಾಷಣದ ಭರಾಟೆಯಲ್ಲಿ, "ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರೆ ಆಧುನಿಕ ಭಾರತದ ರೂವಾರಿ ರಾಹುಲ್‌ ಗಾಂಧಿ ಅವರು ಉಗ್ರರಿಗೆ ಬಲಿಯಾದರು' ಎಂದು ಹೇಳಿದ್ದಾರೆ.

ತಮ್ಮ ಮಾತಿನ ಭರದಲ್ಲಿ ಆದ ಪ್ರಮಾದವನ್ನು ಅರಿತುಕೊಳ್ಳುವ ವೇಳೆಗೆ ಖಂಡ್ರೆ ಅವರ ವಾಕ್‌ ಚಾತುರ್ಯ ಮತ್ತು ಅವರ ಪಕ್ಷ ನಾಯಕತ್ವ ತೀವ್ರ ಇರಿಸುಮುರಿಸಿಗೆ ಗುರಿಯಾಗಿತ್ತು.

ಗಾಂಧಿ ಕುಟುಂಬ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನವನ್ನು ಕೊಂಡಾಡುವ ಭರದಲ್ಲಿ ಕಾಂಗ್ರೆಸ್‌ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಈ ಸಮಾರಂಭದಲ್ಲಿ ಈ ಸಮಾರಂಭದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಬಾಯಿ ತಪ್ಪಿ ಆಡಿದ ಮಾತಿನಿಂದ ಅವರ ಪಕ್ಷಕ್ಕೂ, ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೂ ತೀವ್ರ ಮುಜುಗರ ಉಂಟಾಯಿತು.

English summary
Senior congress leader Eshwar khandre says that Rahul Gandhi died in terror attack. This statement came during Haveri Congress rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X