ನೇಕಾರರ 50 ಸಾವಿರ ರೂ. ಸಾಲ ಮನ್ನಾ : ಸಚಿವರ ಘೋಷಣೆ

Posted By: Gururaj
Subscribe to Oneindia Kannada

ಹಾವೇರಿ, ನವೆಂಬರ್ 07 : ಸಹಕಾರ ಸಂಘಗಳಲ್ಲಿ ನೇಕಾರರು ಪಡೆದಿರುವ 50 ಸಾವಿರ ರೂ. ವರೆಗಿನ ಅಲ್ಪಾವಧಿ ಸಾಲವನ್ನು ಕರ್ನಾಟಕ ಸರ್ಕಾರ ಮನ್ನಾ ಮಾಡಲಿದೆ. ಸುಮಾರು 55.17 ಕೋಟಿ ರೂ.ಗಳ ಸಾಲ ಮನ್ನಾವಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಪತ್ರಿಕಾಗೋಷ್ಠಿ ನಡೆಸಿದ ಜವಳಿ ಸಚಿವ ರುದ್ರಪ್ಪ ಲಮಾಣಿ ಸೋಮವಾರ ಈ ಕುರಿತು ಘೋಷಣೆ ಮಾಡಿದರು. 'ಸಾಲ ಮನ್ನಾದಿಂದ ರಾಜ್ಯದ 9 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ' ಎಂದು ಹೇಳಿದರು.

ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ

Karnataka waives Rs 55.17 crore worth Weavers loan

'ರಾಜ್ಯದಲ್ಲಿ ಸ್ಪಿನ್ನಿಂಗ್ ಮಿಲ್‌ಗಳ ರೂ.199 ಕೋಟಿ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಲಾಗಿದೆ. ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ವಿದ್ಯಾ ವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 65 ಲಕ್ಷ ಮೀಟರ್ ಹಾಗೂ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ 15 ಲಕ್ಷ ಮೀಟರ್ ಬಟ್ಟೆ ಉತ್ಪಾದನೆಗೆ ಅನುಮತಿ ನೀಡಲಾಗಿದೆ' ಎಂದರು.

'ಕೈಮಗ್ಗ ನೇಕಾರರಿಗೆ ಮಿನಿ ಯಂತ್ರ ನೀಡಲು ಉದ್ದೇಶಿಸಲಾಗಿದೆ. ಇದನ್ನು ಉನ್ನತೀಕರಿಸಿದ ಕೈಮಗ್ಗ ಎಂದು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಇದರಿಂದ ಸಣ್ಣಯಂತ್ರ ಬಳಕೆ ಮಾಡುವವರನ್ನು ಕೈಮಗ್ಗದಾರರು ಎಂದು ಪರಿಗಣಿಸಿ ಸೌಲಭ್ಯ ನೀಡಲು ಅನುಕೂಲವಾಗಲಿದೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minister for Textiles Rudrappa Lamani said Karnataka government will waives Rs 55.17 crore worth of weavers loan soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ