ಹಾವೇರಿ ಜಿಲ್ಲೆಯ 6 ಕ್ಷೇತ್ರಗಳ ಬಿಜೆಪಿ-ಕಾಂಗ್ರೆಸ್‌ ಇತರೆ ಪಕ್ಷಗಳ ಅಭ್ಯರ್ಥಿಗಳು ಇವರು, ರಂಗೇರಿದ ರಣಕಣ, ವರದಿ ಇಲ್ಲಿದೆ

ಹಾವೇರಿ, ಏಪ್ರಿಲ್ 12: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮಧ್ಯ ಕರ್ನಾಟಕ ಜಿಲ್ಲೆಯಾದ ಏಲಕ್ಕಿ ಕಂಪನಿ ನಾಡು ಹಾವೇರಿಯಲ್ಲಿಚುನಾವಣಾ ಕಣ ರಂಗೇರುತ್ತಿದೆ. ಒಂದೆರಡು ಕ್ಷೇತ್ರಗಳ ಹೊರತುಪಡಿಸಿದರೆ ಉಳಿದೆಲ್ಲ ಕ್ಷೇತ್ರಗಳಿಂದ ಅಭ್ಯರ್ಥಿಗಳು ಅಂತಿಮವಾಗಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿಯು ಒಟ್ಟು 198 ಕ್ಷೇತ್ರದ ಟಿಕೆಟ್ ಫೈನಲ್ ಮಾಡಿದೆ. ಇನ್ನೂ ಕಾಂಗ್ರೆಸ್ 166 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಿದೆ. ಜೆಡಿಎಸ್ ಮೊದಲ ಹಂತದಲ್ಲಿ 92 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾವೇರಿ, ಹಾನಗಲ್, ಶಿಗ್ಗಾಂವ್, ಹಿರೇಕೆರೂರು, ರಾಣಿಬೆನ್ನೂರು ಹಾಗೂ ಬ್ಯಾಡಗಿ ಸೇರಿ ಒಟ್ಟು 06 ವಿಧಾನಸಭಾ ಕ್ಷೇತ್ರಗಳಿವೆ.

Karnataka Polls 2023: Haveri District Assembly Constituencies Party-wise Candidates List here

ಹಾಗಾದರೆ ಹಾವೇರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಯಾವ ಯಾವ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ. ಪೈಪೋಟಿ ಹೇಗಿರಲಿದೆ. ಯಾವ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಬಾಕಿದೆ ಎಂದು ಇಲ್ಲಿ ತಿಳಿಯೋಣ.

ಶಿಗ್ಗಾಂವ್ ಕ್ಷೇತ್ರ:

ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಕ್ಷೇತ್ರ 'ಶಿಗ್ಗಾಂವ್' ನಿಂದಲೇ ಸ್ಪರ್ಧೆಗೆ ಇಳಿಯಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ಟಿಕೆಟ್ ಘೊಷಣೆ ಆಗಬೇಕಿದೆ. ಮೂಲಗಳ ಪ್ರಕಾರ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡಕ್ಕೆ ಪ್ರವೇಶ ಸಿಗದಿದ್ದರೆ ಶಿಗ್ಗಾಂವ್ ನಲ್ಲಿ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಹೀಗಾಗಿಯೇ ಇಲ್ಲಿಗೆ ಕಾಂಗ್ರೆಸ್‌ ಟಿಕೆಟ್ ಅಂತಿಮವಾಗಿಲ್ಲ.

ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿ ಎಎಪಿ ಅಭ್ಯರ್ಥಿ

ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ ಅಭ್ಯರ್ಥಿ ಜೆಡಿಎಸ್‌ ಅಭ್ಯರ್ಥಿ ಎಎಎಪಿ ಅಭ್ಯರ್ಥಿ
ಹಾನಗಲ್ ಶ್ರೀನಿವಾಸ ಮಾನೆ ಸಾಯಿಕುಮಾರ್
ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ ಬಸವರಾಜ ಶಿವಣ್ಣನವರ ಎಂ.ಎನ್.‌ ನಾಯಕ
ಹಾವೇರಿ ರುದ್ರಪ್ಪ ಲಮಾಣಿ
ಹಿರೇಕೆರೂರು ಬಿ.ಸಿ.ಪಾಟೀಲ್ ಯು.ಬಿ.ಬಣಕಾರ್
ರಾಣಿಬೆನ್ನೂರು ಅರುಣ್ ಪೂಜಾರ್ ಪ್ರಕಾಶ್ ಕೆ,ಕೋಳಿವಾಡ
ಹಿರೇಕೆರೂರು ಬಿ.ಸಿ.ಪಾಟೀಲ್ ಯು.ಬಿ.ಬಣಕಾರ್ ಹನುಮಂತಪ್ಪ ಕಬ್ಬಾರ
ಶಿಗ್ಗಾಂವ್ ಬಸವರಾಜ ಬೊಮ್ಮಾಯಿ

ಆದರೆ ಯಾರೇ ಸ್ಪರ್ಧಿಸಿದರೂ ಬಿಜೆಪಿಗೆ ಜನರ ಆರ್ಶೀವಾದ ಎಂದು ಮುಖ್ಯಮಂತ್ರಿಗಳು ಗುಡುಗಿದ್ದಾರೆ. ಜೆಡಿಎಸ್‌ನಿಂದ ಸದ್ಯಕ್ಕೆ ಯಾರ ಹೆಸರು ಶಿಗ್ಗಾಂವ್‌ ಘೋಷಣೆ ಆಗಿಲ್ಲ. ಆಮ್‌ ಆಮ್‌ ಆದ್ಮಿ ಪಕ್ಷಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಧೈರ್ಯ ಮಾಡಿಲ್ಲ.

Karnataka Polls 2023: Haveri District Assembly Constituencies Party-wise Candidates List here

ಹಾನಗಲ್ ಕ್ಷೇತ್ರ:

ಹಾನಗಲ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನು ಫೈನಲ್ ಆಗಿಲ್ಲ. ಇತ್ತ ಕಾಂಗ್ರೆಸ್‌ನಿಂದ ಕಳೆದ ಉಪಚುನಾಣೆಯಲ್ಲಿ (2021ರಲ್ಲಿ) ಜಯಭೇರಿ ಬಾರಿಸಿದ್ದ ಶ್ರೀನಿವಾಸ್ ಮಾನೆ ಅವರನ್ನೇ ಕಣಕ್ಕಿಳಿಸಿದೆ. ಬಿಜೆಪಿಗೆ ಕ್ಷೇತ್ರ ದಕ್ಕದಂತೆ ಕಾಂಗ್ರೆಸ್ ಸೆಡ್ಡು ಹೊಡೆಯಲಿದೆ. ಆಮ್ ಆದ್ಮಿ ಪಕ್ಷದಿಂದ ಹಾನಗಲ್ ಕ್ಷೇತ್ರದಲ್ಲಿ ಸಾಯಿಕುಮಾರ್ ಎಂಬುವವರು ಅದೃಷ್ಟ ಪರೀಕ್ಷೆ ಇಳಿಯಲಿದ್ದಾರೆ. ಜೆಡಿಎಸ್‌ ಇಲ್ಲಿ ಅಭ್ಯರ್ಥಿಯನ್ನು ಹಾಕಿಲ್ಲ.

ರಾಣಿಬೆನ್ನೂರು ಕ್ಷೇತ್ರ:

ಈ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಬಲ ನಾಯಕರಾಗಿದ್ದ ಕೆ.ಬಿ.ಕೋಳಿವಾಡ ಅವರ ಪುತ್ರ ಪ್ರಕಾಶ್ ಕೆ,ಕೋಳಿವಾಡ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನೂ ಬಿಜೆಪಿಯಿಂದ ಅರುಣ್ ಕುಮಾರ್ ಪೂಜಾರ್ ಅವರು ಸ್ಪರ್ಧಿಸಲಿದ್ದಾರೆ. ಅವರು ಕಳೆದ ಬಾರಿ ಗೆಲುವಿನ ನಗೆ ಬೀರಿದ್ದರು. ಆಮ್‌ ಆದ್ಮಿ ಪಕ್ಷದಿಂದ ಹನುಮಂತಪ್ಪ ಕಬ್ಬಾರ ಅವರು ತೀವ್ರ ಪೈಪೋಟಿ ಒಡ್ಡಲಿದ್ದಾರೆ.

ಬ್ಯಾಡಗಿ ಕ್ಷೇತ್ರ:

ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಸವರಾಜ ಎನ್‌ ಶಿವಣ್ಣನವರ ಮತ್ತು ಬಿಜೆಪಿಯಿಂದ ವಿರೂಪಾಕ್ಷಪ್ಪ ಬಳ್ಳಾರಿ ಅವರು ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇಲ್ಲಿ ಬಿರುಸಿನ ಪ್ರಚಾರ ಆರಂಭವಾಗಿದ್ದು, ತೀವ್ರ ಹಣಾಹಣಿ ನಡೆಯಲಿದೆ ಎಂಬ ನಿರೀಕ್ಷೆ ಇದೆ. ಜೆಡಿಎಸ್ ಇಲ್ಲಿಗೆ ಯಾರನ್ನು ಅಂತಿಮಗೊಳಿಸಿಲ್ಲ. ಆಮ್‌ ಆದ್ಮಿ ಪಕ್ಷದಿಂದ ಎಂ. ಎನ್.‌ ನಾಯಕ ಅವರು ರಾಷ್ಟ್ರೀಯ ಪಕ್ಷಗಳಿಗೆ ಅಖಾಡದಲ್ಲಿ ಎದುರಾಳಿಯಾಗಿದ್ದಾರೆ.

ಹಿರೇಕೆರೂರು ಕ್ಷೇತ್ರ:

ಆಡಳಿತಾರೂಢ ಬಿಜೆಪಿಯಿಂದ ಹಾಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರಿಗೆ ಟಿಕೆಟ್ ಲಭಿಸಿದೆ. ಕ್ಷೇತ್ರದಲ್ಲಿ ಅತ್ಯಧಿಕ ಪ್ರಭಾವ ಹೊಂದಿದವರಾಗಿದ್ದಾರೆ. ಕಾಂಗ್ರೆಸ್‌ನಿಂದ ಯು.ಬಿ.ಬಣಕಾರ್ ಸ್ಪರ್ಧಿಸಲಿದ್ದಾರೆ. ಮೊದಲಿಂದಲೂ ಈ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಇತ್ತು. ಈ ಚುಣಾವಣೆಯಲ್ಲಿ ಅದು ಇನ್ನೂ ಹೆಚ್ಚಾಗಲಿದೆ. ಇವರ ಜಿದ್ದಾ ಜಿದ್ದಿಯಿಂದ ಹಿರೇಕೆರೂರು ಕ್ಷೇತ್ರ ರಂಗೇರಲಿದೆ.

ಹಾವೇರಿ ಕ್ಷೇತ್ರ:

ಇಲ್ಲಿ ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋಲುಂಡಿದ್ದ ರುದ್ರಪ್ಪ ಲಮಾಣಿ ಅವರೇ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಭರ್ಜರಿ ಪ್ರಚಾರವನ್ನು ರಂಭಿಸಿದ್ದಾರೆ. ಎಎಪಿ ಮತ್ತು ಜೆಡಿಎಸ್‌ನಿಂದ ಯಾರು ಕಣಕ್ಕಿಳಿದಿಲ್ಲ. ಆದರೆ ಬಿಜೆಪಿಯಿಂದ ಇಲ್ಲಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಆಗಬೇಕಿದೆ. ಪ್ರಬಲ ನಾಯಕನ್ನು ಹಾವೇರಿಗೆ ಇಳಿಸದೇ ಹೋದರೆ ಬಿಜೆಪಿ ಕ್ಷೇತ್ರ ಕಳೆದುಕೊಳ್ಳುತ್ತದೆ ಎನ್ನಲಾಗಿದೆ. ಹಾಲಿ ಬಿಜೆಪಿ ಶಾಸಕ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+