ಕರ್ನಾಟಕ ಚುನಾವಣೆ: ಹಾವೇರಿ ಜಿಲ್ಲೆಯ ಮತದಾರರ, ಮತಗಟ್ಟೆಗಳ ಸಂಪೂರ್ಣ ವಿವರ

ಹಾವೇರಿ, ಏಪ್ರಿಲ್‌ 4: ಭಾರತ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ವೇಳಾಪಟ್ಟಿ ಪ್ರಕಟಿಸಿದೆ. ಹೀಗಾಗಿ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜಿಲ್ಲೆಯಾದ್ಯಂತ 24 ಗಂಟೆಯೊಳಗೆ ಫ್ಲೆಕ್ಸ್‌, ಬ್ಯಾನರ್ ತೆರವುಗೊಳಿಸಲಾಗಿದ್ದು, ಈಗಾಗಲೇ ಕಟ್ಟುನಿಟ್ಟಿನ ಕ್ರಮ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

Karnataka assembly Elections 2023: Haveri District Voters Details

ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕ್ಷೇತ್ರದಲ್ಲಿ ಕ್ಷೇತ್ರವಾರು ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗಿನ ಮಾಹಿತಿಯಂತೆ 6,60,270 ಪುರುಷ ಹಾಗೂ 6,30,879 ಮಹಿಳಾ ಮತದಾರರು ಹಾಗೂ ಇತರೆ 45 ಮತದಾರರು ಸೇರಿ ಒಟ್ಟಾರೆ 12,91,194 ಮತದಾರರಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ 1,84,534 ಮತದಾರರಿದ್ದಾರೆ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅಧಿಕ 2,35,074 ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 32,043 ಮತದಾರರಿದ್ದು, 22,297 ವಿಶೇಷ ಚೇತನ ಮತದಾರರಿದ್ದಾರೆ. 909 ಸೇವಾ ಮತದಾರರಿದ್ದಾರೆ. 18 ರಿಂದ 19 ವರ್ಷದ 31,384 ಮತದಾರರಿದ್ದಾರೆ ಎಂದು ಮತದಾರರ ಮಾಹಿತಿಯನ್ನು ವಿವರಿಸಿದರು.

ಕ್ಷೇತ್ರವಾರು ಮತದಾರರ ವಿವರ

ಹಾನಗಲ್ ಕ್ಷೇತ್ರದಲ್ಲಿ 1,07,842 ಪುರುಷ, 1,01,958 ಮಹಿಳಾ ಹಾಗೂ ಇತರೆ ೦೪ ಮತದಾರರು ಸೇರಿ 2,09,804 ಮತದಾರರಿದ್ದಾರೆ. ಶಿಗ್ಗಾಂವ ಕ್ಷೇತ್ರದಲ್ಲಿ 1,15,453 ಪುರುಷ, 1,08,321 ಮಹಿಳಾ ಹಾಗೂ ಇತರೆ 10 ಮತದಾರರು ಸೇರಿ 2,23,784 ಮತದಾರರಿದ್ದಾರೆ. ಹಾವೇರಿ(ಎಸ್ಸಿ) ಕ್ಷೇತ್ರದಲ್ಲಿ 1,18,187 ಪುರುಷ, 1,12,616ಮಹಿಳಾ ಹಾಗೂ ಇತರೆ 07 ಮತದಾರರು ಸೇರಿ 2,30,810 ಮತದಾರರಿದ್ದಾರೆ. ಬ್ಯಾಡಗಿ ಕ್ಷೇತ್ರದಲ್ಲಿ 1,05,453 ಪುರುಷ, 1,10,730 ಮಹಿಳಾ ಹಾಗೂ ಇತರೆ 05 ಮತದಾರರು ಸೇರಿ 2,07,188 ಮತದಾರರಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ 94,621ಪುರುಷ, 89,909 ಮಹಿಳಾ ಹಾಗೂ ಇತರೆ 04 ಮತದಾರರು ಸೇರಿ 1,84,534 ಮತದಾರರಿದ್ದಾರೆ. ರಾಣೇಬೆನ್ನೂರು ಕ್ಷೇತ್ರದಲ್ಲಿ 1,18,714 ಪುರುಷ, 1,16,345 ಮಹಿಳಾ ಹಾಗೂ ಇತರೆ 15 ಮತದಾರರು ಸೇರಿ 2,35,074 ಮತದಾರರಿದ್ದಾರೆ ಎಂದು ತಿಳಿಸಿದರು.

80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನ ಮತದಾರರಿಗೆ ಅವರು ಬಯಸಿದರೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಈ ಪ್ರಯೋಗ ಜಿಲ್ಲೆಯಲ್ಲಿ ಹಾನಗಲ್ ಉಪ ಚುನಾವಣೆ ಸಂದರ್ಭದಲ್ಲಿ ನಡೆಸಲಾಗಿತ್ತು. ಈ ಮತದಾರರು ಆಯೋಗಕ್ಕೆ ಮಾಹಿತಿ ನೀಡಿದರೆ ಚುನಾವಣೆ ಅಧಿಸೂಚನೆ ಹೊರಡುವ ದಿನಾಂಕ ಐದು ದಿನಗಳವರೆಗೆ 11ಡಿ ಫಾರಂ ನೀಡಲಾಗುವುದು. ಈ ಫಾರಂನಲ್ಲಿ ಭರ್ತಿಮಾಡಿಕೊಟ್ಟರೆ ಚುನಾವಣಾ ಅಧಿಕಾರಿಗಳ ತಂಡ ಮನೆಯಲ್ಲೇ ಮತದಾನ ಪ್ರಕ್ರಿಯೆ ವ್ಯವಸ್ಥೆ ಮಾಡಲಿದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ ಎರಡು ಸಖಿ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನರ ಮತಗಟ್ಟೆ, ಯುವಕರ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆ ಸೇರಿ ಐದು ಯುನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 998 ಸ್ಥಳಗಳಲ್ಲಿ 1,471ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಪೈಕಿ 18 ದುರ್ಬಲ ಹಾಗೂ 321 ಸೂಕ್ಷ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಶೇ.90 ರಷ್ಟು ಮತದಾನವಾದ ಹಾಗೂ ಒಬ್ಬರೇ ಅಭ್ಯರ್ಥಿಗೆ ಶೇ75ಕ್ಕಿಂತ ಹೆಚ್ಚು ಮತದಾನವಾದ ಮತಗಟ್ಟೆಗಳನ್ನು ಸೂಕ್ಷ ಮತಗಟ್ಟೆ ಎಂದು ಪರಿಗಣಿಸಲಾಗಿದೆ. ಮತದಾನಕ್ಕೆ ಅವಶ್ಯಕವಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಕುಡಿಯುವ ನೀರು, ವಿದ್ಯುತ್, ಶೌಚಾಲಯ, ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈಗಾಗಲೇ ಎಲ್ಲ ಮತಗಟ್ಟೆಗಳನ್ನು ಪರಿಶೀಲಿಸಿ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗಿದ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+