'ಅವರು ದಿನಕ್ಕೆ 6 ಬಾರಿ ಕಿರುಚುತ್ತಾರೆ, ನಾವು ವರ್ಷಕ್ಕೊಮ್ಮೆ ಗಣೇಶನ ಹಬ್ಬಕ್ಕೆ ಡಿಜೆ ಹಚ್ಚಲು ನೂರೆಂಟು ರೂಲ್ಸ್'- ಯತ್ನಾಳ್
ಹಾವೇರಿ ಸೆಪ್ಟೆಂಬರ್ 28: ಇದೆನು ಭಾರತನಾ? ಅಥವಾ ಪಾಕಿಸ್ತಾನನಾ? ಗಣೇಶ ಉತ್ಸವ ಮಾಡೋಕೆ ಪರವಾನಿಗೆ ಪಡೆಯುವ ಪರಿಸ್ಥಿತಿ ಇದೆ. ಡಿಜೆ ಹಚ್ಚುವಾಗ ಶಬ್ಬಕ್ಕೆ ಇಂತಿಷ್ಟೇ ಮಿತಿ ಇರಬೇಕು. ಅವರು ದಿನಕ್ಕೆ ಆರು ಬಾರಿ ಕಿರುಚುತ್ತಾರೆ. ಅವರಿಗೆ ಏನು ಎನ್ನುವುದಿಲ್ಲ. ನಾವು ವರ್ಷಕ್ಕೊಮ್ಮೆ ಹಬ್ಬ ಮಾಡ್ತೀವಿ. ನಮಗೆ ರೂಲ್ಸ್ ಹಾಕ್ತೀರಾ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಹಾವೇರಿಯಲ್ಲಿ ಹಾವೇರಿಕಾ ರಾಜಾ ಗಣಪತಿ ಉತ್ಸವದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. 2024ರ ಚುನಾವಣೆಯಲ್ಲಿ ಮತ್ತೆ ಮೋದಿಯನ್ನು ಬೆಂಬಲಿಸಬೇಕು. ಮುಂದಿನ 25 ವರ್ಷ ದೇಶ ನಮ್ಮ ಕೈಯಲ್ಲೇ ಇರುತ್ತದೆ. ಇಂದು ನಾವೆಲ್ಲಾ ಹಸಿರು ಬಾವುಟ ಹಾರಿಸಲು ಇಷ್ಟೊಂದು ಕಷ್ಟಪಡುತ್ತಿದ್ದೇವೆ. ಮುಂದಿನ ದಿನದಲ್ಲಿ ಹಸಿರು ಬಾವುಟ ಇಲ್ದಂಗೆ ಮಾಡಿ ಬಿಡ್ತೀವಿ ಎಂದು ಗರಂ ಆದರು.

ಭರತನಿಂದ ಭಾರತ ಆಗಿದೆ. ಇಂಡಿಯಾ ಅಂತಾ ಇಟ್ಟವರು ಬ್ರಿಟಿಷರು. ನೀವು ಭಾರತೀಯರ? ಅಥವಾ ಬ್ರಿಟಿಷರಿಗೆ ಹುಟ್ಟಿದ್ದೀರಾ? ನಾವು ಭಾರತೀಯರು ನಮ್ಮ ಭಾರತದ ಒಂದು ಟವರ್ ಮೇಲೆ ಒಂದು ಧ್ವಜ ಹಾರಿಸಿದಕ್ಕೆ ಉರಿಯುತ್ತದೆ. ನಿಮ್ಮ ಅಪ್ಪಂದಿರಿಗೆ ಹುಟ್ಟ್ಇದ್ದೀರಾ? ನಾವು ಚಂದ್ರನ ಮೇಲೆ ತ್ರಿವಣಧ್ವಜ ಹಾರಿಸಿದ್ದೇವೆ. ನಿಮ್ಮಂಪ್ಪನಿಗೆ ಹುಟ್ಟಿದ್ರೆ ಅಲ್ಲಿ ಹೋಗಿ ಧ್ವಜ ಹಾರಿಸಿ. ಅನ್ನ ತಿನ್ನೋದು ಭಾರತದ್ದು, ನೀರು ಕುಡಿಯುವುದು ಭಾರತದ್ದು.ಮತ್ತೆ ಪಾಕಿಸ್ತಾನಕ್ಕೆ ಜೈ ಅಂತೀರಾ ಅಲ್ಲ, ಯಾರಿಗೆ ಹುಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನಾನು ಈ ಹಿಂದೆ ಸ್ವತಂತ್ರವಾಗಿ ಪರಿಷತ್ ಸ್ತಾನಕ್ಕೆ ಆಯ್ಕೆ ಆಗಿದ್ದೆ. ಯಾಕೆಂದರೆ ಸಮ್ಮಲ್ಲೂ ಕೆಲವು ಸಲ ನಮ್ಮಂತವರಿಗೆ ಟಿಕೆಟ್ ಕೊಡಲ್ಲ. ಯಾಕೆಂದರೆ ವಂಶ ಬೆಳೆಸಬೇಕಲ್ಲ, ಮಕ್ಕಳಿಗೆ ಮೊಮ್ಮಕ್ಕಳಿಗೆ ಅಧಿಕಾರ ಕೊಡಬೇಕಲ್ಲ. ಹೀಗಾಗಿ ನಮ್ಮಲ್ಲ ಕೆಲವು ಸಲ ಟಿಕೆಟ್ ಕೊಡಲ್ಲ. ನನಗೆ ಎರಡೇ ತಿಂಗಳು ಗೃಹ ಸಚಿವ ಮಾಡಿ ನೋಡಿ. ಉತ್ತರ ಪ್ರದೇಶದ ಬಗ್ಗೆ ಗೊತ್ತಲ್ಲ. ಆ ರೀತಿ ಕರ್ನಾಟಕ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.
ಪೊಲೀಸರ ಕೈಯಲ್ಲಿ ಗುಂಡು ಕೊಟ್ಟು ಅದನ್ನು ಹಾರಿಸಬಾರದು ಎನ್ನುತ್ತಾರೆ. ಹಾಗಾದರೆ ಪೊಲೀಸರ ಕೈಗೆ ಗನ್ ಯಾಕೆ ಕೊಡ್ತೀರಿ ಎಂದು ಅವರು ಪ್ರಶ್ನೆ ಮಾಡಿದರು. ಉಪಮುಖ್ಯಮಂತ್ರಿಗೆ ಸಂವಧಾನಾತ್ನಕ ಯಾವುದೇ ಅಧಿಕಾರವಿಲ್ಲ. ಹಿಂದೂ ಕಾರ್ಯಕ್ರಮದಲ್ಲಿ ಪೊಲೀಸ್ ಡ್ಯಾನ್ಸ್ ಮಾಡಿದರೆ ಕಠಿಣ ಕ್ರಮ ಅಂತಾರೆ. ಅವರಿಗೆ ಅಭಿಮಾನ ಇರೋದು ತಪ್ಪಾ? ಇಂತಹ ನರಸತ್ತ ಸಿಎಂ ಬಂದರೆ ಹೀಗೆ ಆಗೋದು ಎಂದು ಯತ್ನಾಳ್ ಆಕ್ರೋಶಗೊಂಡರು.












Click it and Unblock the Notifications