ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲೆ ಶತಮಾನೋತ್ಸವ: ಕೊಠಡಿಗಳ ನಿರ್ಮಾಣಕ್ಕೆ ಆದೇಶ: ಸಿಎಂ

|
Google Oneindia Kannada News

ಹಾವೇರಿ, ಜನವರಿ 08: ತೆವರಮಳ್ಳಹಳ್ಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೀಘ್ರವೇ ನಾಲ್ಕು ಹೊಸ ಕೊಠಡಿ ನಿರ್ಮಾಣ ಮಾಡಲು ಆದೇಶ ನೀಡಲಾಗುವುದು. ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ 15 ದಿನದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಚಿವ ನಾಗೇಶ್ ಅವರು ಮಕ್ಕಳ ಹಂತಕ್ಕೆ ಹೋಗಿ ಗ್ರಾಮೀಣ ಪ್ರದೇಶದ ಎಲ್ಲ ಶಿಕ್ಷಣದ ಪರಿಸ್ಥಿತಿ ಅರಿತು ಕೆಲಸ ಮಾಡುತ್ತಿದ್ದಾರೆ. ಒಂದೇ ವರ್ಷದಲ್ಲಿ 8,100 ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟು ಪ್ರಮಾಣದ ಶಾಲಾ ಕೊಠಡಿಗಳ ನಿರ್ಮಾಣ ಕೈಗೊಳ್ಳಲಾಗಿರುವುದು.

 Haveri Tevaramellihalli Govt School centenary, Order to build new rooms for school soon

ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಬಸವರಾಜ ಬೊಮ್ಮಾಯಿಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಬಸವರಾಜ ಬೊಮ್ಮಾಯಿ

ನಮ್ಮ ಸರ್ಕಾರದ ಅವಧಿಯಲ್ಲಿ. 15,000 ಶಿಕ್ಷರನ್ನು ಏಕಕಾಲದಲ್ಲಿ ನೇಮಕ ಮಾಡಲಾಗಿದೆ. ಇನ್ನೂ 15,000 ಶಿಕ್ಷಕರ ನೇಮಕ ಈ ವರ್ಷ ಮಾಡಲಾಗುತ್ತದೆ. ಈ ಗ್ರಾಮಕ್ಕೆ 21 ಕೋಟಿ ರೂ.ಗಳನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಒಂದು ಶಾಲೆ 135 ವರ್ಷ ಆಗಿದೆ. ಈ ಶಾಲೆಯನ್ನು ಹಿರಿಯರು 135 ವರ್ಷದ ಹಿಂದೆ ಆಲೋಚನೆ ಮಾಡಿದ್ದಾರೆ. ಇಲ್ಲಿ ಪಾಠ ಮಾಡಿದ ಶಿಕ್ಷಕರು, ಇಲ್ಲಿ ಕಲಿತು ನಾಡಿನ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ನೂರು ವರ್ಷ ಸಾಧನೆ ಮಾಡಿರುವ ಈ ಶಾಲೆ ಒಂದು ವಿಶ್ವ ವಿದ್ಯಾಲಯಕ್ಕಿಂತ ದೊಡ್ಡದು. ವಿಶ್ವ ವಿದ್ಯಾಲಯದಲ್ಲಿ ಪಾಠ ಮಾಡುವ ಅಧ್ಯಾಪಕರನ್ನು ತಯಾರಿಸುವುದು ಈ ಪ್ರಾಥಮಿಕ ಶಾಲೆಗಳು, ಮಕ್ಕಳಿಗೆ ಈ ಶಾಲೆಯೇ ಬುನಾದಿ, ಇಲ್ಲಿ ಕಲಿಯುವ ಪಾಠದಿಂದ ಅರ್ಥ, ಜ್ಞಾನ ವಿಜ್ಞಾನ, ತಂತ್ರಜ್ಞಾನ ಹೀಗೆ ಶಿಕ್ಷಣ ಬೆಳೆಯುತ್ತಿದೆ ಎಂದು ತಿಳಿಸಿದರು.

ಮಕ್ಕಳು ಜೀವನದಲ್ಲಿ ಛಲದಿಂದ ನುಗ್ಗಬೇಕು
ತೆವರಮೆಳ್ಳಹಳ್ಳಿ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ. ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಬೇಕಿದೆ. 21ನೇ ಜ್ಞಾನದ ಶತಮಾನದಲ್ಲಿ ತಯಾರಿ ನೀಡಬೇಕು. ಈ ಶಾಲೆಗೆ ಚರಿತ್ರೆ ಇದೆ. ಮಕ್ಕಳಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಬೇಕಿದೆ. ಒಮ್ಮೆ ವಿದ್ಯಾರ್ಥಿಯಾದರೆ ಜೀವನ ಪರ್ಯಂತ ಕಲಿಕೆ ಇರುತ್ತದೆ. ಮಕ್ಕಳು ಜೀವನದಲ್ಲಿ ಛಲದಿಂದ ನುಗ್ಗಬೇಕು. ಆಟದಲ್ಲೂ ಗೆಲುವಿಗೆ ಛಲದಿಂದ, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

 Haveri Tevaramellihalli Govt School centenary, Order to build new rooms for school soon

ಮಕ್ಕಳು ಕಲಿತ ಶಾಲೆ, ಶಿಕ್ಷಕರು, ಊರನ್ನು ಮರೆಯಬಾರದು
ಜಗತ್ತಿನ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅದನ್ನು ಮೊದಲು ಹತ್ತಿದವರು ತೇನ್ ಸಿಂಗ್ ಅವರ ತಾಯಿ ಚಿಕ್ಕವನಿದ್ದಾಗಿನಿಂದಲೂ ಎವರೆಸ್ಟ್ ಹತ್ತುವಂತೆ ಪ್ರೇರೆಪಿಸಿದ್ದರು. ಅವನು 42 ನೇ ವಯಸ್ಸಿನಲ್ಲಿ ಎವರೆಸ್ಟ್ ಹತ್ತಿದ್ದ. ಆದರೆ 10 ನೇ ವರ್ಷದಿಂದಲೇ ಆತ ಎವರೆಸ್ಟ್ ಹತ್ತಲು ತೀರ್ಮಾನ ಮಾಡಿದ್ದ. ಅದೇ ರೀತಿ ಮಕ್ಕಳು ಮುಂದೇನಾಬೇಕೆಂದು ಈಗಿನಿಂದಲೇ ತೀರ್ಮಾನ ಮಾಡಿ ಆ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಮಕ್ಕಳು ಕಲಿತು ದೊಡ್ಡವರಾದ ನಂತರ ತಾವು ಕಲಿತ ಶಾಲೆ, ಶಿಕ್ಷಕರು ಹಾಗೂ ಊರನ್ನು ಮರೆಯಬಾರದೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬಂಕಾಪುರದ ರೇವಣಸಿದ್ದೇಶ್ವರ ಶ್ರೀಗಳು, ಸಿಂಧಗಿಯ ಸಾರಂಗ ಮಠದ ಶ್ರೀಗಳು, ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಂಸದ ಐಜಿ ಸನದಿ ಹಾಗೂ ಮತ್ತಿತರರು ಹಾಜರಿದ್ದರು.

English summary
Haveri district Tevaramellihalli Government School centenary, Order to build new rooms for school soon, says CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X