• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ್ದು ಶೂನ್ಯ ಸಾಧನೆ : ಎಚ್ಕೆ ಪಾಟೀಲ್

|

ಗದಗ, ಏಪ್ರಿಲ್ 16: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲರು ಗದಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಅಭ್ಯರ್ಥಿ ಡಿ ಆರ್ ಪಾಟೀಲ್ ಜೊತೆಗೂಡಿ, ಚಿಂಚಲಿ ಗ್ರಾಮದ ವಡರಗೇರಿ, ಕಲ್ಲೂರು ಗ್ರಾಮ, ನೀಲಗುಂದ ಗ್ರಾಮ ದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ನಂತರ ಸಂಜೆ ಮುಂಡರಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಮಿತ್ ಶಾ ಮೇಲೆ ನೋಟು ವಿನಿಮಯ ಆರೋಪ ಹೊರೆಸಿದ ಪಾಟೀಲ್

ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕಳೆದ 5 ವರ್ಷಗಳಲ್ಲಿ ಶೂನ್ಯ ಸಾಧನೆಯನ್ನು ಮಾಡಿರುವ ಬಿಜೆಪಿ ಸರಕಾರ, ವಿರೋಧ ಪಕ್ಷಗಳ ಮೇಲೆ ಆರೋಪ ಹೊರೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಇನ್ನಿಲ್ಲದ ಸುಳ್ಳುಗಳನ್ನು ಹೇಳುತ್ತಿದ್ದು, ಸುಳ್ಳುಗಳ ಮೇಲೆ ಬಿಜೆಪಿ ಮತಯಾಚಿಸುತ್ತಿದೆ. ಸಂವಿಧಾನ ಬದಲಾಯಿಸುವುದಾಗಿ ಹೇಳಿರುವ ಬಿಜೆಪಿಯನ್ನು ಬೆಂಬಲಿಸಿದರೆ. ಭಾರತ ದೇಶ ಅಧೋಗತಿಯಲ್ಲಿ ಸಾಗುವುದು ಸ್ಪಷ್ಟ ಎಂದರು.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕಾಂಗ್ರೆಸ್ ಅಭ್ಯರ್ಥಿ ಡಿ ಆರ್ ಪಾಟೀಲ್ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಬಹಳಷ್ಟು ಕೊಡುಗೆಯನ್ನು ನೀಡಿದೆ. ಈ ಅಭಿವೃದ್ದಿಯ ಪರ್ವ ಮುಂದುವರೆಯಲು ಕಾಂಗ್ರೆಸ್ ಗೆ ಮತ ನೀಡುವುದು ಮುಖ್ಯ. ಕೇಂದ್ರ ದಲ್ಲಿ ಕಾಂಗ್ರೆಸ್ ಕೈ ಬಲಪಡಿಸಲು ನಾವೆಲ್ಲರೂ ಒಂದಾಗಿ ಬಿಜೆಪಿ ವಿರುದ್ದವಾಗಿ ಮತ ಚಲಾಯಿಸೋಣ ಎಂದು ಕರೆ ನೀಡಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೋನರೆಡ್ಡಿ ಸೇರಿದಂತೆ ಹಲವರು ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇಶದಲ್ಲಿ ಕೋಮುವಾದಿಗಳ ಸಂಸ್ಕೃತಿ ಹೆಚ್ಚಾಗುತ್ತಿದೆ

ದೇಶದಲ್ಲಿ ಕೋಮುವಾದಿಗಳ ಸಂಸ್ಕೃತಿ ಹೆಚ್ಚಾಗುತ್ತಿದೆ

ದೇಶದಲ್ಲಿ ಕೋಮುವಾದಿಗಳ ಸಂಸ್ಕೃತಿ ಹೆಚ್ಚಾಗುತ್ತಿದೆ. ಯಾವುದೇ ಭರವಸೆಗಳನ್ನು ಈಡೇರಿಸದ ಪ್ರಧಾನಿ ಮೋದಿ, ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸುವುದರಲ್ಲೆ ಮಗ್ನರಾಗಿದ್ದಾರೆ.

ಯಾವುದೆ ಧರ್ಮ ಅಥವಾ ಜಾತಿ ಆಧಾರದ ಮೇಲೆ ಮತ ಕೇಳದೆ, ಎಲ್ಲಾ ವರ್ಗದ ಅಭಿವೃದ್ದಿಗೂ ಬೇಕಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮತ ಕೇಳಿದೆ ಎಂದು ಹೆಳಿದರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಗೆ ನೆನಪು

ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಗೆ ನೆನಪು

ನಿವೃತ್ತಿ ವೇತನ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮತ್ತು ರಾಮಮಂದಿರ ನಿರ್ಮಾಣದಂತಹ ಪ್ರಸ್ತಾವನೆಗಳು ಕೇವಲ ಚುನಾವಣೆ ಬಂದಾಗ ನೆನಪಾಗೋ ಸಂಗತಿಯಾಗಿದ್ದು ಕಳೆದ 5 ವರ್ಷದಲ್ಲಿ ಇದರ ನೆನಪು ಇರಲಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.

ಎಚ್ಕೆ ಪಾಟೀಲ್ ಚಾಣಾಕ್ಷತನ, ಯಡಿಯೂರಪ್ಪ ಆಪ್ತ ಈಗ ಕಾಂಗ್ರೆಸ್ ಪಾಲು

ಬಡವರ ಬಗ್ಗೆ ಕಾಂಗ್ರೆಸ್ಸಿಗೆ ಕಾಳಜಿ ಇದೆ

ಬಡವರ ಬಗ್ಗೆ ಕಾಂಗ್ರೆಸ್ಸಿಗೆ ಕಾಳಜಿ ಇದೆ

ಬಡವರ ಬಗ್ಗೆ ಕಾಂಗ್ರೆಸ್ ಪಕ್ಷ ಇಂದು ನಿನ್ನೆಯಿಂದ ಕಾಳಜಿ ತೋರಿಸುತ್ತಿಲ್ಲ. ನಮಗೆ ಬಡವರ ಕಲ್ಯಾಣದ ಬಗ್ಗೆ ಬದ್ಧತೆ ಇದೆ. ಇಂದಿರಾಗಾಂಧಿ ಅವರು ಬಡವರ ಏಳ್ಗೆಗಾಗಿ ಗರೀಬಿ ಹಠಾವೋ ದಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ಬಡಜನರಿಗಾಗಿ ಕ್ಷೀರಭಾಗ್ಯ, ಅನ್ನಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ ಸೇರಿದಂತೆ ಹಲವಾರು ಭಾಗ್ಯಗಳನ್ನು ನೀಡಿದ್ದಾರೆ. ಹೀಗಾಗಿ, ಜನಪರ ಯೋಜನೆ ನೀಡುವಲ್ಲಿ ಕಾಂಗ್ರೆಸ್ ಮುಂದಿದೆ.

ಡಿಆರ್ ಪಾಟೀಲ್ ನಮಗೆಲ್ಲ ಮಾರ್ಗದರ್ಶಕರು

ಡಿಆರ್ ಪಾಟೀಲ್ ನಮಗೆಲ್ಲ ಮಾರ್ಗದರ್ಶಕರು

ಹಾವೇರಿಯ ಲೋಕಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಿ.ಆರ್.ಪಾಟೀಲ್ ಅವರು ನಮಗೆಲ್ಲಾ ಮಾರ್ಗದರ್ಶಕರಾಗಿದ್ದಾರೆ. ಅವರು ಪಕ್ಷ ಸಂಘಟನೆಯಲ್ಲಿ, ರೈತರನ್ನು ರಕ್ಷಣೆ ಮಾಡುವಲ್ಲಿ, ಬಡವರಿಗೆ ಕಾರ್ಯಕ್ರಮ ರೂಪಿಸುವಲ್ಲಿ ಮತ್ತು ಪಂಚಾಯ್ತಿ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿ.ಆರ್.ಪಾಟೀಲರಿಗೆ ಮತ ಹಾಕಿದರೆ ಪಕ್ಷದ ಶಕ್ತಿ ಹೆಚ್ಚುತ್ತದೆ ಮತ್ತು ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗಲು ಸಾಧ್ಯವಾಗುತ್ತದೆ.

'ಮೈತ್ರಿ ಒಪ್ಪಂದ ಅರೇಂಜ್ಡ್ ಕಮ್ ಹಳ್ಳಿ ಲವ್ ಮ್ಯಾರೇಜು': ಎಚ್ಕೆ ಪಾಟೀಲ್

English summary
Elections 2019: KPCC campaign Committee chairman HK Patil alleged that BJP government is built on false promises and government has not achieved anything in any field. He was campaigning for Congress candidate D.R Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more