ಹಾವೇರಿ : ಯಡಿಯೂರಪ್ಪಗೆ ಸವಾಲ್ ಹಾಕಿದ ಸಿದ್ದರಾಮಯ್ಯ

Posted By:
Subscribe to Oneindia Kannada
   ಹಾವೇರಿಯಲ್ಲಿ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಸವಾಲ್ | Oneindia Kannada

   ಹಾವೇರಿ, ಡಿಸೆಂಬರ್ 06 : ಹಾವೇರಿಯ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಮುಖಂಡರು ವಿರೋಧ ಪಕ್ಷಗಳ ಮೇಲೆ ಹರಿಹಾಯ್ದರು.

   2018ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸುವುದಾಗಿ ಅಬ್ಬರಿಸಿದ ಸಿದ್ದರಾಮಯ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ತಮ್ಮದೇ ಶೈಲಿಯಲ್ಲಿ ಗೇಲಿ ಮಾಡಿ, ಬಿಜೆಪಿ ಮಿಷನ್ 150 ಟುಸ್‌ಸ್‌ ಎನ್ನಲಿದೆ ಎಂದರು.

   ಚುನಾವಣೆ ಹೊಸ್ತಿಲಲ್ಲಿ ಜಗಳ್ ಬಂದಿ, ಜನರಿಗೆ ಪುಕ್ಕಟೆ ಮನರಂಜನೆ!

   ವ್ಯಂಗ್ಯ, ಮೊನಚು ಮಾತು, ಗೇಲಿ ಕಾಂಗ್ರೆಸ್ ಸಾಧನೆ ಪಟ್ಟಿ ಎಲ್ಲವೂ ಇದ್ದ ಸಿದ್ದರಾಮಯ್ಯ ಭಾಷಣಕ್ಕೆ ಕಾಂಗ್ರೆಸ್ ಕಾರ್ಯತರು ಚಪ್ಪಾಳೆಗಳ ಸುರಿಮಳೆಗೈದರು. ಸಿದ್ದರಾಮಯ್ಯ ಅವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಕೂಡ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.

   ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಬಿಎಸ್ ವೈ

   ಸಿದ್ದರಾಮಯ್ಯ ಅವರನ್ನು ಹೊಗಳಿದ ಎಸ್.ಆರ್.ಪಾಲೀಲ್ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು. ಸಿದ್ದರಾಮಯ್ಯ ಅವರ ಭಾಷಣದ ಮುಖ್ಯಾಂಶಗಳನ್ನು ತಿಳಿಯಲು ಮುಂದೆ ಓದಿರಿ...

   ನುಡಿದಂತೆ ನಡೆಯಲಿ

   ನುಡಿದಂತೆ ನಡೆಯಲಿ

   ಮಹದಾಯಿ ವಿಚಾರವಾಗಿ ಮಾತನಾಡಿದ ಸಿ.ಎಂ ಅವರು ಯಡಿಯೂರಪ್ಪನವರು ಮಹದಾಯಿ ವಿವಾದವನ್ನ ಕೇಂದ್ರ ಸರಕಾರದ ಸಹಾಯದಿಂದ ಒಂದೇ ತಿಂಗಳಲ್ಲಿ ಬಗೆಹರಿಸುತ್ತೆನೆಂದು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳು ಸಹಜ. ಯಡಿಯೂರಪ್ಪನವರು ಮಾತಿಗೆ ತಕ್ಕಹಾಗೇ ಮಹದಾಯಿ ವಿವಾದವನ್ನ ಬಗೆಹರಿಸಲಿ ಎಂದು ಬಿ ಎಸ್.ವೈ ಗೆ ಸವಾಲೆಸೆದರು.

   ಜನವರಿಯಲ್ಲಿ ಪಟ್ಟಿ ಬಿಡುಗಡೆ

   ಜನವರಿಯಲ್ಲಿ ಪಟ್ಟಿ ಬಿಡುಗಡೆ

   ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರು. ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿಸೆಂಬರ್ 15 ರಂದು ಬಿಡುಗಡೆ ಮಾಡುತ್ತಿದೆ. ಬಿಜೆಪಿಯು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದೆ.

   ಮೀಸಲಾತಿ ಹೆಚ್ಚು ಮಾಡಲು ಶಿಫಾರಸ್ಸು

   ಮೀಸಲಾತಿ ಹೆಚ್ಚು ಮಾಡಲು ಶಿಫಾರಸ್ಸು

   ಜಾತಿವಾರು ಸಮೀಕ್ಷೆ ಬಿಡುಗಡೆ ಆಗದಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು 'ಜಾತಿವಾರು ಸಮಿಕ್ಷೆ ಬಿಡುಗಡೆಯಾಗಲು ತಡವಾಗಿರುವುದು ಸತ್ಯ. ಮಿಸಲಾತಿ ಹೆಚ್ಚುಮಾಡಲು ಶಿಫಾರಸ್ಸು ಮಾಡಿದ ಕಾರಣ ಆ ಕುರಿತು ಚರ್ಚೆ ನಡೆಯುತ್ತಿದೆ, ನಿರ್ಧಾರಕ್ಕೆ ಬಂದ ಕೂಡಲೇ ಸಮೀಕ್ಷ ಹೊರ ಬರಲಿದೆ ಎಂದು ಭರವಸೆ ನೀಡಿದರು.

   ವರ್ತೂರು ಏನೂ ಮಾಡೋಕಾಗಲ್ಲ

   ವರ್ತೂರು ಏನೂ ಮಾಡೋಕಾಗಲ್ಲ

   'ನಮ್ಮ ಕಾಂಗ್ರೆಸ್' ಎಂಬ ಹೊಸ ಪಕ್ಷ ಕಟ್ಟುತ್ತಿರುವ ಕೋಲಾರ ಶಾಸಕ ವರ್ತೂರು ವರ್ತೂರ ಪ್ರಕಾಶಗೆ ಟಾಂಗ್ ನೀಡಿದ ಸಿದ್ದರಾಮಯ್ಯ ' ಕಾಂಗ್ರೇಸ್ ಪಕ್ಷದಲ್ಲಿದ್ದು ಹೊರ ಹೋಗಿ ಹೊಸ ಪಕ್ಷ ಕಟ್ಟಿದವರು ಇನ್ನೂ ಏನು ಮಾಡೊಕೆ ಆಗಿಲ್ಲ. ವರ್ತೂರು ಪ್ರಕಾಶ್ ಕೂಡ ಕಡೆಗೆ ಏನು ಆಗದೆ ಉಳಿದುಬಿಡುತ್ತಾರೆ' ಎಂದರು.

   ಕೋಮುದಳ್ಳುರಿ ಹೊತ್ತಿಸುವ ಯತ್ನ

   ಕೋಮುದಳ್ಳುರಿ ಹೊತ್ತಿಸುವ ಯತ್ನ

   ಬ್ಯಾರಿಕೆಟ್ ಗುದ್ದಿ ದರ್ಪ ತೋರಿದ ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ "ಪ್ರತಾಪ್ ಸಿಂಹ ಹಾಳಾಗಿ ಹೋಗಿದ್ದಾರೆ' ಎಂದರು. ಅಭಿವೃದ್ಧಿಯಿಂದ ಜನಗಳ ದೃಷ್ಠಿಯನ್ನು ಬೇರೆಡೆ ಸೆಳೆಯಲು ಹೀಗೆ ಕೋಮುದಳ್ಳರು ಹೊತ್ತಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ಜರಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   CM Siddaramaiah lambasted BS Yeddyurappaa, Prathap Simha and Varthur Prakash in congress party workers gathering at Haveri district Shiggav. He also announce that congress will release its candidates list on January.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ