ಪ್ರಧಾನಿ ಮೋದಿ ಸಾವು ಬಯಸುವ ಕಾಂಗ್ರೆಸ್‌ನ ನೀಚತನ ಖಂಡನೀಯ: ಬಸವರಾಜ ಬೊಮ್ಮಾಯಿ
ಹಾವೇರಿ, ಮೇ 02: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾವು ಬಯಸುವಷ್ಟು ನೀಚಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹಾವೇರಿ ಜಿಲ್ಲೆಯ ತಾಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಮಧ್ಯೆ ಸುದ್ದಿಗಾರರ ಜೊತೆಗೆ ಮಾತನಾಡಿದರು. ಪ್ರಧಾನಿ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗಲ್ಲಾ ಎಂಬ ಕಾಂಗ್ರೆಸ್ ಶಾಸಕ ರಾಜು ಕಾಗೇ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ರಾಜು ಕಾಗೆ ಇಂತಹ ಹೇಳಿಕೆ ಇತ್ತೀಚೆಗೆ ಕೊಡುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಸಾವನ್ನು ಬಯಸುವ ನೀಚ ಮಟ್ಟಕ್ಕೆ ಕಾಂಗ್ರೆಸ್ ಶಾಸಕರು ಇಳಿದಿದ್ದಾರೆ. ಅಂದರೆ ಇವರ ರಾಜಕೀಯ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ನೀವು ಟೀಕೆ ಮಾಡಿದಷ್ಟು ಪ್ರಧಾನಿ ದೊಡ್ಡವರಾಗಿದ್ದಾರೆ
ಯಾರೇ ಪ್ರತಿಸ್ಪರ್ದಿ ಇದ್ದರೂ ಸಾವನ್ನು ಬಯಸಬಾರದು. ಕೀಳು ಮಟ್ಟದ ಟೀಕೆ ಮಾಡಿದ್ದಷ್ಟು ಮೋದಿ ದೊಡ್ಡವರಾಗುತ್ತಲೇ ಬಂದಿದ್ದಾರೆ. ಮತ್ತೆ ಮತ್ತೆ ಗೆದ್ದು ಬಂದಿದ್ದಾರೆ. ಮೋದಿಯವರ ಆಯಸ್ಸು ಹೆಚ್ಚಾಗುತ್ತದೆ. ಆರೋಗ್ಯ ಚೆನ್ನಾಗಿ ಆಗುತ್ತದೆ. ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆ ಆಗಿದೆ. ಮೋದಿ ಅಲೆಯಲ್ಲಿ ಇವರು ಕೊಚ್ಚಿ ಹೋಗುತ್ತಾರೆ ಎಂದರು.
ಬಿಜೆಪಿ ಸಂವಿಧಾನ ಬದಲಾವಣೆ ಮಾಡಲು ಹೊರಟಿದೆ ಎಂಬ ಮಾಜಿ ಶಾಸಕ ಓಲೆಕಾರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನೆಹರೂ ಓಲೆಕಾರ್ ನಮ್ಮ ಪಕ್ಷದಲ್ಲಿ ಇದ್ದರು ಆಗೇನು ಸಂವಿಧಾನ ಬದಲಾಗಿತ್ತಾ? ಸಂವಿಧಾನ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ ಎಂದರು.
ಕ್ಷೇತ್ರದ ನನ್ನ ಸಾಧನೆ ಜನರಿಗೆ ಗೊತ್ತಿದೆ
ನಾವು ಮೀಸಲಾತಿ ಹೆಚ್ಚು ಮಾಡಿದ್ದೇವೆ. ಹಾವೇರಿ ಅಭಿವೃದ್ಧಿ ನಾನು ಮಾಡಿದ್ದೇನೆ. ಸಿದ್ದರಾಮಯ್ಯಗೂ ಮಾಡಲಿಕ್ಕೆ ಆಗಿಲ್ಲ. ಹಾವೇರಿ ಜಿಲ್ಲೆಗೆ ಮೆಗಾ ಡೈರಿ, ಮೆಡಿಕಲ್ ಕಾಲೇಜು ತಂದಿದ್ದೇನೆ. ಮೆಗಾ ಮಾರ್ಕೇಟ್ ತಂದವರು, ಲಾ ಕಾಲೇಜು, ತೋಟಗಾರಿಕೆ ಕಾಲೇಜು ತಂದವರು ಯಾರು? ಎಲ್ಲಾ ಜನರ ಮುಂದೆ ಇದೆ ಯಾರನ್ನು ಆಯ್ಕೆ ಮಾಸಬೇಕೆಂದು. ಜನ ತೀರ್ಮಾನ ಮಾಡುತ್ತಾರೆ ಎಂದರು.

ಪಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಕುರಿತು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನವರು ತಮ್ಮ ವೈಫಲ್ಯ ಮುಚ್ಚಿ ಕೊಳ್ಳಲು ಪೆನ್ ಡ್ರೈವ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದ ಮಂತ್ರಿಗಳ ಒಂದು ವರ್ಷದ ಸಾಧನೆ ಏನು?
ರಾಜ್ಯದ ಮಂತ್ರಿಗಳೇ ನಿಮ್ಮ ಒಂದು ವರ್ಷದ ಸಾಧನೆ ಏನು ರಾಜ್ಯ ಸರ್ಕಾರದ ಖಜಾನೆಯಿಂದ ಎಷ್ಟು ರೂಪಾಯಿ ಬರ ಪರಿಹಾರ ಕೊಟ್ಟಿದ್ದೀರಿ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬರಗಾಲ ಬಿದ್ದಿದ್ದು ಈ ಸರ್ಕಾರ ರೈತರಿಗೆ ತನ್ನ ಖಜಾನೆಯಿಂದ ನಯಾಪೈಸೆ ನೀಡದೆ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಇದೊಂದು ಕೂಳು ನೀರಿಲ್ಲದ ದರಿದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ರೈತರ ವಿರೋಧಿ ಸರ್ಕಾರ ತೊಲಗಿಸಬೇಕು
ಕಳೆದ ಹತ್ತು ತಿಂಗಳಿಂದ ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ದಿ ಕೆಲಸ ನಡೆದಿಲ್ಲ. ಅಭಿವೃದ್ದಿ ಮಾಡುವ ಉದ್ದೇಶ ಇವರಿಗಿಲ್ಲ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಕೊಡುತ್ತಿದ್ದ 4 ಸಾವಿರ ರೂ ಸ್ಥಗಿತಗೊಳಿಸಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದೆ. ಅದನ್ನು ನಿಲ್ಲಿಸಿದರು. ಯಶಸ್ವಿನಿ ನಿಲ್ಲಿಸಿದರು. ಇವರಿಗೆ ರೈತರೆಂದರೆ ಅಲರ್ಜಿ, ಈ ರೈತ ವಿರೋಧಿ ಸರ್ಕಾರವನ್ನು ತೊಲಗಿಸಬೇಕು ಎಂದು ಹೇಳಿದರು.












Click it and Unblock the Notifications