ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಏನಿದು ಹಾಸನ ಟ್ರಕ್ ಟರ್ಮಿನಲ್ ವಿವಾದ?

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಮೇ 01; ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಟ್ರಕ್ ಟರ್ಮಿನಲ್ ವ್ಯಾಪ್ತಿಯ 2 ಕಿ. ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಶನಿವಾರ ಟ್ರಕ್ ಟರ್ಮಿನಲ್ ಪರ-ವಿರೋಧ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷೆನ್ ಜಾರಿಗೊಳಲಾಗಿದೆ. ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ವಿವಾದಿತ ಸ್ಥಳದಲ್ಲಿ ಯಾವುದೇ ಧರಣಿ ಹೋರಾಟ, ಪ್ರತಿಭಟನೆ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಬಿಜೆಪಿ, ಜೆಡಿಎಸ್ ಪ್ರತಿಷ್ಠೆಯ ಕಾಳಗಕ್ಕೆ ಕಾರಣವಾಗಿದ್ದ ಉದ್ದೇಶಿತ ಟ್ರಕ್ ಟರ್ಮಿನಲ್ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರದಂತೆ ನಿರ್ಬಂಧ ಹೇರಲಾಗಿದೆ.

 ಹಾಸನ: ಜನತಾ ಜಲಧಾರೆಯಲ್ಲಿ ಎಚ್‌ಡಿಕೆ ಕಣ್ಣೀರಧಾರೆ ಹಾಸನ: ಜನತಾ ಜಲಧಾರೆಯಲ್ಲಿ ಎಚ್‌ಡಿಕೆ ಕಣ್ಣೀರಧಾರೆ

Truck Terminal Issue Section 144 Issued In Land At Hassan

ಶನಿವಾರ ಮಧ್ಯಾಹ್ನದಿಂದ ಜೆಡಿಎಸ್, ಬಿಜೆಪಿ ನಡುವೆ ಈ ವಿಚಾರದಲ್ಲಿ ಪರ ವಿರೋಧಿ ಹೋರಾಟ ನಡೆದಿತ್ತು. ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರ ವಿಕೋಪಕ್ಕೆ ಹೋಗುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ.

Breaking; ರೇವಣ್ಣ ನಂಬರ್‌ ಗೇಮ್‌ ಟ್ವೀಟ್‌ ಮಾಡಿದ ಅಶ್ವಥ್ ನಾರಾಯಣ Breaking; ರೇವಣ್ಣ ನಂಬರ್‌ ಗೇಮ್‌ ಟ್ವೀಟ್‌ ಮಾಡಿದ ಅಶ್ವಥ್ ನಾರಾಯಣ

ರೇವಣ್ಣ, ಪ್ರಜ್ವಲ್ ರೇವಣ್ಣ ಭೇಟಿ; ಟ್ರಕ್ ಟರ್ಮಿನಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್. ಡಿ. ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜಿಲ್ಲಾಧಿಕಾರಿ ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ಜಾರಿಗೊಳಿಸಿದ ಬಳಿಕ ಮಾತನಾಡಿದ ಎಚ್. ಡಿ. ರೇವಣ್ಣ, "ಕಾಮಗಾರಿ ನಡೆಸಬಾರದು ಎಂದು ಷರತ್ತು ವಿಧಿಸಿ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾಡಳಿತ ಹೇಳಿರುವುದಕ್ಕೆ ತಲೆ ಭಾಗುತ್ತೇವೆ. ಮುಂದಿನ ನಿರ್ಣಯ ಮಾಡುವವರೆಗು ಕೆಲಸ ಮಾಡುವ ಹಾಗಿಲ್ಲ" ಎಂದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಂದ ಹಾಸನ ಜಿಲ್ಲೆಗೆ ಅನ್ಯಾಯ; ಎಚ್.ಡಿ. ರೇವಣ್ಣಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಂದ ಹಾಸನ ಜಿಲ್ಲೆಗೆ ಅನ್ಯಾಯ; ಎಚ್.ಡಿ. ರೇವಣ್ಣ

"ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೌರವ ಕೊಟ್ಟು ಶಾಂತ ರೀತಿಯಿಂದ ನಡೆದುಕೊಂಡಿದ್ದೇವೆ. ಹೆಣ್ಣುಮಕ್ಕಳ ಹಿತದೃಷ್ಟಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರೂ ಕಾಮಗಾರಿ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಹೇಳಿದರು.

"ನ್ಯಾಯಯುತವಾಗಿ ಇಓ ಅವರನ್ನು ಸಸ್ಪೆಂಡ್ ಮಾಡಬೇಕು. ತಾಲೂಕು ಪಂಚಾಯಿತಿ ಇಓಗೂ ಟರ್ಮಿನಲ್‌ಗೂ ಏನು ಸಂಬಂಧ?. ದೇವರಾಜು ಅರಸು ನಿಗಮದಿಂದ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 30 ಎಕರೆ ಕೇಳಿದ್ದಾರೆ. ಕೆಲವರು ನಾನು ಯಾರು ಅಂತ ಹೇಳುತ್ತಾರೆ?. ನನಗೆ 7 ಹಳ್ಳಿ ಸೇರುತ್ತವೆ" ಎಂದು ತಿಳಿಸಿದರು.

English summary
Hassan deputy commissioner imposed section 144 at truck terminal land in Hassan. Truck terminal become political issue between JD(S) and BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X