ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ರೇವಣ್ಣ ಸೋಲಿಸಲು ಸಿದ್ದರಾಮಯ್ಯ ತಂತ್ರ!

|
Google Oneindia Kannada News

Recommended Video

ಎಚ್ ಡಿ ರೇವಣ್ಣ ವಿರುದ್ಧ ಸಿದ್ದು ಮಾತನಾಡಿರುವ ಆಡಿಯೋ ಬಹಿರಂಗ | Oneindia Kannada

ಹಾಸನ, ಮಾರ್ಚ್ 19 : ತಮ್ಮ ಆಪ್ತ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸೋಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ. ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಪಿ.ಮಂಜೇಗೌಡ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿ.ಪಿ.ಮಂಜೇಗೌಡ ನಡುವಿನ ಫೋನ್ ಸಂಭಾಷಣೆ ವಿವರ ಸೋಮವಾರ ಬಹಿರಂಗವಾಗಿದೆ. 'ಮಂಜೇಗೌಡರನ್ನು ಹೊಳೆನರಸೀಪುರಕ್ಕೆ ಕ್ಯಾಂಡಿಡೇಟ್ ಮಾಡುತ್ತೇವೆ. ಅವರನ್ನು ಗೆಲ್ಲಿಸಿ' ಎಂದು ಸಿದ್ದರಾಮಯ್ಯ ಹೇಳಿರುವುದು ರೆಕಾರ್ಡ್‌ ಆಗಿದೆ.

ಹೊಳೆನರಸೀಪುರ : ರೇವಣ್ಣ ಪಾರುಪತ್ಯ ಮುಂದುವರೆಯಲಿದೆಯೇ?ಹೊಳೆನರಸೀಪುರ : ರೇವಣ್ಣ ಪಾರುಪತ್ಯ ಮುಂದುವರೆಯಲಿದೆಯೇ?

Siddaramaiah master plan to win Holenarasipur constituency

ಪೋನ್ ಸಂಭಾಷಣೆ ವಿವರ ಇಲ್ಲಿದೆ...

ಸಿದ್ದರಾಮಯ್ಯ : ಏಯ್ ಮಂಜೇಗೌಡ ರಾಜೀನಾಮೆ ಕೊಡ್ತೀನಿ ಅಂತ ಹೇಳಿದೆ. ಕೊಟ್ಟೇ ಇಲ್ಲ.

ಮಂಜೇಗೌಡ : ಬೆಳಗ್ಗೆ ಬಂದಿದ್ದೆ. ನೀವು ಇರಲಿಲ್ಲ. ಈಗ ಹೊಳೆನರಸೀಪುರದಲ್ಲಿ ಇದ್ದೇನೆ

ಸಿದ್ದರಾಮಯ್ಯ : ಆಫೀಸರ್‌ ಗೆ ಫೋನ್ ಕೊಡು ರಾಜೀನಾಮೆ ಸ್ವೀಕಾರ ಮಾಡಲು ಹೇಳುವೆ.

ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ಸೋಮಣ್ಣ : ನಮಸ್ಕಾರ ಸಾರ್

ಸಿದ್ದರಾಮಯ್ಯ : ಮಂಜೇಗೌಡನ ಈ ಸಲ ಕ್ಯಾಂಡಿಡೇಟ್ ಮಾಡುತ್ತೇವೆ. ಎಲ್ಲಾ ಸೇರಿ ಗೆಲ್ಲಿಸಿ, ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು.

ಸೋಮಣ್ಣ : ನೀವು ಸಹಕಾರ ಮಾಡಿದ್ರೆ ಆಗುತ್ತೆ. ಮೊದಲಿನಿಂದಲೂ ಅವರಿಗೆ ಸಹಕಾರ ಕೊಟ್ಟುಕೊಂಡು ಬಂದಿದ್ದೀರಿ.

ಸಿದ್ದರಾಮಯ್ಯ : ಮೊದಲು ಅವರ ಜತೆಲಿ ಇದ್ದಾಗ ಅಷ್ಟೆ

ಸೋಮಣ್ಣ : ಈ ಸಲನೂ ಮಾಡಿದ್ದೀರಿರಲ್ಲ ಒಂದು ರಸ್ತೆನೂ ಬಿಡದಂಗೆ ಮುಚ್ಚಾಕವ್ರೆ

ಸಿದ್ದರಾಮಯ್ಯ : ಕ್ಷೇತ್ರದ ಕೆಲಸಗಳಿಗಷ್ಟೆ ದುಡ್ಡು ಕೊಟ್ಟಿದ್ದೇನೆ ಹೊರತು ರಾಜಕೀಯವಾಗಿ ಬೆಂಬಲ ಇಲ್ಲ.

English summary
B.P.Manje Gowda may contest for Karnataka assembly elections 2018 from Holenarasipur assembly constituency, Hassan. Manje Gowda president of Karnataka State Government Employees Association. JD(S) leader H.D.Revanna sitting MLA of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X