Get Updates
Get notified of breaking news, exclusive insights, and must-see stories!

ಹಾಸನದಿಂದ ತಾಯಿಗೆ ಜೆಡಿಎಸ್‌​ ಟಿಕೆಟ್​ಗಾಗಿ ಪ್ರಜ್ವಲ್ ರೇವಣ್ಣ ರಾಜೀನಾಮೆ ಅಸ್ತ್ರ?

ಹಾಸನ, ಮಾರ್ಚ್‌ 30: ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಡಿಸಲೇಬೆಕೆಂಬ ಹಠಕ್ಕೆ ಬಿದ್ದಿರುವ ರೇವಣ್ಣ ಅವರ ಮಗ ಪ್ರಜ್ವಲ್‌ ರೇವಣ್ಣ ಅವರು ತಮ್ಮ ಅಮ್ಮನಿಗೆ ಟಿಕೆಟ್‌ ನೀಡದಿದ್ದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಈಗಾಗಲೇ 93 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿರುವ ಜೆಡಿಎಸ್‌, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಇನ್ನೂ ಟಿಕೆಟ್‌ ಘೋಷಿಸಿಲ್ಲ. ಹಾಸನದಿಂದ ತಮ್ಮನ್ನು ಕಣಕ್ಕೆ ಇಳಿಸುವುದಾಗಿ ಮಾತು ಕೊಟ್ಟಿದ್ದ ಎಚ್‌ಡಿ ಕುಮಾರಸ್ವಾಮಿ ಸೂಚನೆಯಂತೆ ಎಚ್‌ಪಿ ಸ್ವರೂಪ್‌ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ತಮಗೆ ಟಿಕೆಟ್‌ ನೀಡಬೇಕೆಂದು ಭವಾನಿ ರೇವಣ್ಣ ಪಟ್ಟುಹಿಡಿದಿದ್ದಾರೆ.

 Prajwal Revannas resignation is a weapon for Hassans JDS ticket for bhavani revanna

ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಚುನಾವಣೆ ದಿನಾಂಕ ಘೊಷಣೆಯಾಗಿದೆ, ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಬೇಕು ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ, ಅವರ ಇಬ್ಬರು ಗಂಡು ಮಕ್ಕಳು ಸಹ ಮೊದಲೇ ಬೇಡಿಕೆ ಇಟ್ಟಿದ್ದಾರೆ. ಹಾಸನದಲ್ಲಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವಿನ ಟಿಕೆಟ್​ ಫೈಟ್​ ಮಗಿಯದಂತಾಗಿದೆ. ಭವಾನಿ ರೇವಣ್ಣ ಅವರಿಗೆ ಯಾವ ಕಾರಣಕ್ಕೂ ಹಾಸನದ ಟಿಕೆಟ್​ ನೀಡಲ್ಲ ಎಂದು ಎಚ್.​ಡಿ ಕುಮಾರಸ್ವಾಮಿ ಈಗಾಗಲೇ ಹೇಳುತ್ತಿದ್ದಾರೆ. ಆದರೆ ರೇವಣ್ಣ ಕುಟುಂಬ ಮಾತ್ರ ಟಿಕೆಟ್​ ಬೇಡಿಕೆ ಪಟ್ಟನ್ನು ಸಡಿಲಗೊಳಿಸುತ್ತಿಲ್ಲ.

ಈ ಪ್ರಯತ್ನದ ಭಾಗವಾಗಿ ಭವಾನಿ ಅವರಿಗೆ ಟಿಕೆಟ್​ ಕೊಡಿಸಲು ರೇವಣ್ಣರ ಇಡೀ ಕುಟುಂಬವೆ ಪಣತೊಟ್ಟಂತಿದೆ. ಈ ಮಧ್ಯೆ ತಾತ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾಗಿರುವ ಪ್ರಜ್ವಲ್‌ ಅವರು ತಾಯಿ ಭವಾನಿಗೆ ಟಿಕೆಟ್ ಕೊಡಬೇಕು. ಇಲ್ಲವೇ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Prajwal Revannas resignation is a weapon for Hassans JDS ticket for bhavani revanna

ಸಂಸದರಾಗಿರುವ ಪ್ರಜ್ವಲ್​ ರೇವಣ್ಣ ದೇವೇಗೌಡರ ಭೇಟಿ ಬೆನ್ನಲ್ಲೇ ಹಾಸನ ಟಿಕೆಟ್​ ಗೊಂದಲದ ಬಗ್ಗೆ ಎಚ್.​ಡಿ ಕುಮಾರಸ್ವಾಮಿ ಮತ್ತದೇ ಹಳೆಯ ಸಂದೇಶವವನ್ನು ರವಾನಿಸಿದ್ದಾರೆ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣೆಗೆ ಟಿಕೆಟ್​ ಇಲ್ಲ ಎಂದಿದ್ದಾರೆ. ಕಡ್ಡಿ ಮುರಿದಂತೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ನನಗಿಲ್ಲಿ ಪಕ್ಷದ ಬೆಳವಣಿಗೆ, ಕಾರ್ಯಕರ್ತರು ಮುಖ್ಯ. ಮೊದಲಿಂದಲು ಹೇಳುತ್ತಿದ್ದೇನೆ. ಅನಿವಾರ್ಯ ಇದ್ದ ಕಡೆ ಕುಟುಂಬದವರು ತಲೆ ಕೊಡುತ್ತೀವಿ. ಟೀಕೆಗಳಿಗೆ ಎದರುವುದಿಲ್ಲ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ನಾವು ಸುಮ್ಮನೆ ಸಾರ್ವಜನಿಕರಾಗಿ ಟೀಕೆಗೆ ಒಳಗಾಗೋದು ಬೇಡ. ನನ್ನ ತೀರ್ಮಾನ ಏನಿದೆ ಅದೇ ತೀರ್ಮಾನದಲ್ಲಿದ್ದೇನೆ ಎಂದು ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಹಾಗೂ ಪ್ರಜ್ವಲ್​ ನಡುವಿನ ಹಗ್ಗಜಗ್ಗಾಟದ ನಡುವೆ ರೇವಣ್ಣ ಹಾಸನ ಟಿಕೆಟ್​ ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಪತ್ರಿಕಾಗೋಷ್ಠಿ ವೇಳೆ ಸ್ವರೂಪ್​ ಅವರು ಕುಮಾರಸ್ವಾಮಿರನ್ನ ಭೇಟಿಯಾಗಿದ್ದಾರೆಂದು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಅದ್ಯಾರೋ ನನಗೆ ಗೊತ್ತಿಲ್ಲ, ಹಾಸನದಲ್ಲಿ ಅದ್ಯಾವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್​ ನೀಡ್ತಾರೋ ಗೊತ್ತಿಲ್ಲ. ಅನ್ನೋ ಮೂಲಕ ಇನ್ನೂ ಟಿಕೆಟ್​ ಗೊಂದಲ ಬಗೆಹರಿದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಕುಮಾರಣ್ಣ ಅವರು ಹೇಳಿದರಲ್ಲ, ಆ ಸಾಮಾನ್ಯ ಕಾರ್ಯಕರ್ತರು ಯಾರೆಂದು ನನಗೆ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಕಳೆದ 25 ವರ್ಷದಿಂದ ಶಾಸಕನಾಗಿದ್ದೀನಿ. ಈ ಜಿಲ್ಲೆಯದು ಏನಿದೆ ಅಂತಾ ಗೊತ್ತಿದೆ. ನಮ್ಮ ಮುಖಂಡರಗಳ ಹತ್ತಿರ ಕುಳಿತುಕೊಂಡು ಮಾತನಾಡುತ್ತಿನಿ. ಯಾವ ದಾಕ್ಷಣ್ಯ ಇಲ್ಲ ಇದರಲ್ಲಿ. ನಾನೇನು ಹೆದರಿಕೊಂಡು ಓಡಿ ಹೋಗಲ್ಲ ಎಂದು ಎಚ್‌ಡಿ ರೇವಣ್ಣ ತಿಳಿಸಿದ್ದಾರೆ.

ಹಾಸನ ವಿಧಾನಸಭಾ ಟಿಕೆಟ್‌ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲೇ ಭಿನ್ನಧ್ವನಿಗಳು ಕೇಳಿ ಬರುತ್ತಿದೆ. ಇದು ಜೆಡಿಎಸ್​ ಪಾಳಯಕ್ಕೆ ಇರುಸು ಮುರುಸು ಉಂಟಾಗಿದೆ. ಹಾಸನ ಟಿಕೆಟ್​​ ವಿಚಾರದಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮವೇ ಅಥವಾ ರೇವಣ್ಣ ಕುಟುಂಬದ ಪಟ್ಟಿಗೆ ದೊಡ್ಡಗೌಡರು ಕಟ್ಟುಬೀಳಲಿದ್ದಾರಾ ಎಂದು ಕಾದು ನೋಡ್ಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+