ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಜರ್ಮನ್ ಅಟ್ಟಣಿಗೆ ಬಳಕೆ

By ಬಿಎಂ ಲವಕುಮಾರ್
|
Google Oneindia Kannada News

Recommended Video

ಮಹಾಮಸ್ತಕಾಭಿಷೇಕ 2018 : ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆ ನಿರ್ಮಾಣ | Oneindia Kannada

ಶ್ರವಣ ಬೆಳಗೊಳ, ಜನವರಿ 23: ಮುಂದಿನ ತಿಂಗಳು ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿರುವ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ಮಹಾಮಜ್ಜನಕ್ಕೆ ಇದೇ ಮೊದಲ ಬಾರಿಗೆ ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆಯನ್ನು ನಿರ್ಮಿಸುತ್ತಿರುವುದು ವಿಶೇಷವಾಗಿದೆ.

ದೂರದಿಂದ ಬರುವ ಯಾತ್ರಾರ್ಥಿಗಳ ವಸತಿಗೆ ಸಂಬಂಧಿಸಿದಂತೆ ತ್ಯಾಗಿ ನಗರ, ಕಳಶ ನಗರ 1 ಮತ್ತು 2, ಪಂಚ ಕಲ್ಯಾಣ ನಗರ, ಯಾತ್ರಿ ನಗರ, ಸ್ವಯಂ ಸೇವಕರ ನಗರ ಹೀಗೆ ಎಲ್ಲಾ ಕ್ಷೇತ್ರದವರನ್ನೊಳಗೊಂಡ 12 ಉಪ ನಗರಗಳನ್ನು ನಿರ್ಮಾಣ ಮಾಡಲಾಗಿದೆ. ಈ ನಗರಗಳು ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, 600 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಇವು ನಿರ್ಮಾಣವಾಗಿವೆ.

ಶ್ರವಣಬೆಳಗೊಳ : ಮಹಾಮಸ್ತಕಾಭಿಷೇಕ ಲೈವ್ ನೋಡಿಶ್ರವಣಬೆಳಗೊಳ : ಮಹಾಮಸ್ತಕಾಭಿಷೇಕ ಲೈವ್ ನೋಡಿ

ಸಕಲ ಸೌಲಭ್ಯಗಳ 12 ಉಪನಗರ

ಸಕಲ ಸೌಲಭ್ಯಗಳ 12 ಉಪನಗರ

ಈ ಉಪ ನಗರಗಳಲ್ಲಿ ಯಾತ್ರಾರ್ಥಿಗಳಿಗೆ ಅಗತ್ಯ ಶೌಚಾಲಯ, ಸ್ನಾನಗೃಹ, ಆಸ್ಪತ್ರೆ, ಪೊಲೀಸ್ ಠಾಣೆ, ಕುಡಿಯುವ ನೀರಿನ ಕೇಂದ್ರ ಸೇರಿದಂತೆ ಊಟದ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ.

ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆ ನಿರ್ಮಾಣ

ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆ ನಿರ್ಮಾಣ

ವಿಂಧ್ಯಗಿರಿ ಬೆಟ್ಟದ ಮೇಲೆ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅಟ್ಟಣಿಗೆಯಲ್ಲಿ ಸುಮಾರು 5,500 ಜನ ಕುಳಿತು ಬಾಹುಬಲಿ ಮೂರ್ತಿಯ ಅಭಿಷೇಕದ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಈ ಅಟ್ಟಣಿಗೆ ನಿರ್ಮಾಣದ ಜತೆಗೆ ಮೂರು ನವೀನ ರೀತಿಯ ಲಿಫ್ಟ್ ಗಳನ್ನು ಕೂಡ ನಿರ್ಮಿಸಲಾಗಿದೆ.

ನೂರಾರು ಕೋಟಿ ಖರ್ಚು

ನೂರಾರು ಕೋಟಿ ಖರ್ಚು

ಮಹಾಮಸ್ತಕಾಭಿಷೇಕದ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ 175 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ಇದರ ಜತೆಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಗಳಿಗೆ 89 ಕೋಟಿ ರೂ. ಖರ್ಚು ಮಾಡಲಾಗಿದೆ.

ಶ್ರವಣಬೆಳಗೊಳಕ್ಕೆ ಹತ್ತಿರವಿರುವ ಜನಿವಾರ ಕೆರೆಯಲ್ಲಿ ದೋಣಿ ವಿಹಾರ ಕೇಂದ್ರ ಅಭಿವೃದ್ಧಿಪಡಿಸಲಾಗಿದೆ. ಯಾತ್ರಾರ್ಥಿಗಳ ಸಾರಿಗೆ ಸಂಪರ್ಕಕ್ಕಾಗಿ 200 ವಿಶೇಷ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜತೆಗೆ 23 ರೈಲುಗಳನ್ನು ಈ ಸಂದರ್ಭದಲ್ಲಿ ಓಡಿಸಲು ರೈಲ್ವೇ ಇಲಾಖೆಗೆ ಮನವಿ ಮಾಡಲಾಗಿದೆ.

1081-2018

1081-2018

ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಕ್ರಿ.ಶ 1081 ರಲ್ಲಿ ಪ್ರಾರಂಭವಾಗಿದ್ದು ಈಗ ನಡೆಯುತ್ತಿರುವುದು 88ನೇ ಮಹಾಮಸ್ತಕಾಭಿಷೇಕವಾಗಿದೆ.

English summary
The next month, Mahamastakabhisheka will be held at the Vindhyagiri of Shravanabelagola. This is the first time a platform has been built using German technology to facilitate the seers and munis to perform the Mahamastakabhisheka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X