• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರ ಬೀಳಲ್ಲ, ನಾನೇ ಜ್ಯೂತಿಷ್ಯ ಹೇಳ್ತೀನಿ: ಎಚ್‌.ಡಿ.ರೇವಣ್ಣ

|

ಹಾಸನ, ಜನವರಿ 02: ಸಂಪುಟ ವಿಸ್ತರಣೆಯಿಂದ ಎದ್ದಿರುವ ಅಸಮಾಧಾನಗಳೆಲ್ಲಾ ಜನವರಿ 3 ರಿಂದ 13 ರ ಒಳಗೆ ಎಲ್ಲವೂ ಸರಿಹೋಗುತ್ತವೆ ಎಂದು ಸಚಿವ ಎಚ್‌.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಸುಳ್ಳು ಆರೋಪ ಮಾಡಿದ್ರೆ ಕಾಂಗ್ರೆಸ್‌ನವರು ಏಟು ತಿಂತಾರೆ: ರೇವಣ್ಣ

ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ, ನಾನೇ ಜ್ಯೋತಿಷ್ಯ ಹೇಳ್ತೀನಿ ಎಂದು ರೇವಣ್ಣ ಹೇಳಿದ್ದಾರೆ.

ಪರಮೇಶ್ವರ್ ಗೃಹಖಾತೆ ಬದಲಿಸಬಾರದಿತ್ತು: ರೇವಣ್ಣ ಸಹಾನುಭೂತಿ

ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು, ಯಾವುದೇ ಸಣ್ಣ ವಿಷಯಕ್ಕೆ ಅವರಿಗೆ ಬೇಸರವಾಗಿದೆ. ಎಲ್ಲ ಸಚಿವರು ಅವರ ಕಾರ್ಯಗಳನ್ನು ನಿರ್ವಹಿಸುತ್ತಾರೆ ನಮ್ಮ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಹೇಳಿದರು.

ಹಾಸನದಿಂದ ಪ್ರಜ್ವಲ್ ರೇವಣ್ಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆಯೋ ಇಲ್ಲವೋ ಎಂಬುದನ್ನು ಪಕ್ಷದ ವರಿಷ್ಠರು ನಿರ್ಣಯಿಸುತ್ತಾರೆ ಎಂದರು.

English summary
Minister HD Revanna said our government will complete 5 years. He also said all problems will solve before January 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X