ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದ ನವೋದಯ ಶಾಲೆ ಗೋಡೆಯ ಮೇಲೆ ಅಶ್ಲೀಲ ಬರಹ!

By Nayana
|
Google Oneindia Kannada News

ಹಾಸನ, ಜು.7: ಹಾಸನದ ನವೋದಯ ಬಾಲಕಿಯರ ಶಾಲೆಯಲ್ಲಿ ಆಶ್ಲೀಲ ಬರವಣಿಗೆ ವಿಚಾರ ಸ್ಪಷ್ಟನೆ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಹಾಸನ ನವೋದಯ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಲು ಅವಕಾಶವಿದೆ. ಮೊದಲು ಪರೀಕ್ಷೆ ಕಟ್ಟಿ ಅದರಲ್ಲಿ ಉತ್ತೀರ್ಣರಾದರೆ ಮಾತ್ರ ನವೋದಯ ಶಾಲೆಗೆ ಸೇರಲು ಅವಕಾಶ ಸಿಗುತ್ತದೆ, ಯಾರು ಬೇಕಾದರೂ ನವೋದಯ ಶಾಲೆಗೆ ಸೇರುವಂತಿಲ್ಲ.

ಕರ್ನಾಟಕ ಬಜೆಟ್‌: ರಾಜ್ಯದ 28 ಸಾವಿರ ಸರ್ಕಾರಿ ಶಾಲೆಗಳು ವಿಲೀನ ಕರ್ನಾಟಕ ಬಜೆಟ್‌: ರಾಜ್ಯದ 28 ಸಾವಿರ ಸರ್ಕಾರಿ ಶಾಲೆಗಳು ವಿಲೀನ

ಹಾಸನದ ಚನ್ನರಾಯಪಟ್ಟಣದಲ್ಲಿರುವ ನವೋದಯ ಬಾಲಕಿಯರ ಶಾಲೆಯಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿಗಳಲ್ಲಿ ಅಶ್ಲೀಲವಾಗಿ ಬರೆಯಲಾಗಿದೆ, ಈ ಕುರಿತು ಪೋಷಕರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷೇತ್ರ ಜಿಲ್ಲಾಧಿಕಾರಿಗಳಿಗೆ ದೂರು ನೀಲಡಾಗಿದೆ.

Obscene slogans on school wall: Notice to Navodaya school management

ಜಿಲ್ಲಾಧಿಕಾರಿಗಳು ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಸ್ಪಷ್ಟನೆ ಕೇಳಿದ್ದು ನೋಡಿಸ್‌ ಜಾರಿ ಮಾಡಿದ್ದಾರೆ. ಮೂರು ದಿನಗಳಲ್ಲಿ ಸ್ಪಷ್ಟನೆ ನೀಡಲು ತಿಳಿಸಿದ್ದಾರೆ, ಒಂದೊಮ್ಮೆ ಮೂರು ದಿನಗಳಲ್ಲಿ ಸ್ಪಷ್ಟನೆ ನೀಡದಿದ್ದರೆ ಶಿಕ್ಷಣ ಕಾಯ್ದೆ ಕಲಂ 39ರಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ ಮಾನ್ಯತೆಯನ್ನು ರದ್ದು ಮಾಡುವುದು ಹಾಗೂ ಅನುದಾನವನ್ನು ತಡೆಹಿಡಿಯಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

English summary
BObscene slogans and writings were found on Navodaya school building wall at Channarayapatma in Hassan district. Block education officer has issued notice to school management seeking explanation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X