ಭವಾನಿ ರೇವಣ್ಣ ಎಂಎಲ್‍ಎ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಎಚ್.ಡಿ. ರೇವಣ್ಣ

ಹಾಸನ, ಏಪ್ರಿಲ್ 25: "ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಒಂದಲ್ಲ ಒಂದು ದಿನ ಎಂಎಲ್‍ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಮಾಜಿ ಸಚಿವ ಎಚ್‍.ಡಿ. ರೇವಣ್ಣ ಹೇಳಿದ್ದಾರೆ.

ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮತ್ತು ಬಿಜೆಪಿ ಶಾಸಕ ಪ್ರೀತಂಗೌಡ ನಡುವೆ ವಾಕ್ಸಮರ ಮತ್ತೆ ಜೋರಾಗಿದೆ. ಶನಿವಾರ ಹಾಸನದಲ್ಲಿ ನಡೆದ ಶಾಸಕ ಎನ್. ಮಹೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಬಗ್ಗೆ ಟೀಕೆ ಮಾಡಿದ್ದರು.

 ದಲಿತರು ದೊಡ್ಡಗೌಡರ ಮನೆ ಒಳಗೆ ಹೋಗಿಲ್ಲ

ದಲಿತರು ದೊಡ್ಡಗೌಡರ ಮನೆ ಒಳಗೆ ಹೋಗಿಲ್ಲ

"ಒಬ್ಬ ದಲಿತ ಸಮಾಜದ ಬಂಧು ಇಲ್ಲಿಯ ತನಕ ದೊಡ್ಡಗೌಡರ ಮನೆ ಒಳಗೆ ಹೋಗಿರುವ ಒಂದು ನಿದರ್ಶನ ನಮ್ಮ ಕಣ್ಮುಂದೆ ಇಲ್ಲ. ದಲಿತ ಬಂಧುಗಳು ದೊಡ್ಡಗೌಡರ ಮನೆಗೆ ಹೋದ ವೇಳೆ ಅವರು ಮನೆಯಿಂದ ಹೊರಟಿದ್ದಾರೆ. ದಲಿತ ಸಮಾಜದ ಬಂಧುಗಳನ್ನು ನೋಡಿದರೆ ಮತ್ತೆ ಮನೆ ಒಳಗೆ ಹೋಗಿ ಸ್ನಾನ ಮಾಡಿ ಬರುವ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡಿದ್ದಾರೆ. ಅಂತಹ ನಾಯಕತ್ವ ಜೆಡಿಎಸ್‌ನದ್ದು, ಹಾಸನ ಜಿಲ್ಲೆಯಲ್ಲಿ ದಲಿತ ಸಮಾಜವನ್ನು ಯಾರು ಕೇವಲವಾಗಿ ನೋಡುತ್ತಾರೆ ಅಂದರೆ ಅದು ಜಾತ್ಯಾತೀತ ಜನತಾ ದಳದವರು," ಎಂದು ಶಾಸಕ ಪ್ರೀತಂಗೌಡ ಟೀಕೆ ಮಾಡಿದ್ದರು.

ಹಾಸನಕ್ಕೆ ಭವಾನಿ ರೇವಣ್ಣ ಬರಲಿ ಎಂದು ಆಹ್ವಾನ ನೀಡಿದ್ದ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ, "ಇವನನ್ನು ಕೇಳಿ ಯಾರೂ ಅಭ್ಯರ್ಥಿ ಮಾಡುತ್ತಾರೆ. ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಬಂತು, ಇಲ್ಲ ಅಂದಿದ್ದರೆ ಈ ಗಿರಾಕಿ ಇಲ್ಲಿ ಇರುತ್ತಿರಲಿಲ್ಲ. ಯಡಿಯೂರಪ್ಪನ ಸರ್ಕಾರ ಬಂದಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾನೆ. ನಾನು ಅವನನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ," ಎಂದು ತಿರುಗೇಟು ನೀಡಿದರು.

 ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ

ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ

"ಅವರು ದೊಡ್ಡ ವ್ಯಕ್ತಿ, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ನಾನು ಹೆಬ್ಬೆಟ್ಟು. ಅವರು ಬಾರ್‍ಅಟ್‍ಲಾ ಓದಿರುವವರು. ಯಡಿಯೂರಪ್ಪ, ಅವರ ಮಗನ ಹತ್ತಿರ ಓದಿ ಬಂದಿರುವವರು. ಭವಾನಿ ರೇವಣ್ಣ ಒಂದು ದಿನ ಎಂಎಲ್‍ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ, ಹತ್ತು ವರ್ಷ ಆಗುತ್ತೋ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ," ಎಂದು ಹೇಳಿದರು.

ಹಾಸನ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವಂತೆ ನಾನೇ ರೇವಣ್ಣ ಹಾಗೂ ಭವಾನಿ ಅಕ್ಕ ಅವರನ್ನು ಒತ್ತಾಯ ಮಾಡುತ್ತಿದ್ದೇನೆ. ರೆಡಿಯಾಗಿ ಬರಬೇಕಿರುವವರು ಅವರು, ನಾನು ರೆಡಿಯಾಗಿ ಫೀಲ್ಡ್ ಅಲ್ಲಿ ಇದ್ದೀನಿ ಎಂದು ಪ್ರೀತಂಗೌಡ ಪಂಥಾಹ್ವಾನ ನೀಡಿದ್ದರು.

 ಮೀಸಲಾತಿ ಕೊಟ್ಟಿದ್ದು ದೇವೇಗೌಡರ ಪಕ್ಷ

ಮೀಸಲಾತಿ ಕೊಟ್ಟಿದ್ದು ದೇವೇಗೌಡರ ಪಕ್ಷ

ಇದೀಗ ಪ್ರೀತಂಗೌಡ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿರುವ ಎಚ್.ಡಿ. ರೇವಣ್ಣ, "ಅವರು ದೊಡ್ಡವರು, ದಿನ ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕುತ್ತಿದ್ದಾರೆ. ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೂ ಇದ್ದರೆ ಅದು ದೇವೇಗೌಡರ ಪಕ್ಷ. ಇವರ ಯೋಗ್ಯತೆಗೆ ಅಲ್ಪಸಂಖ್ಯಾತರ ಮೇಲೆ ಆರೋಪ ಮಾಡಲು ಹೊರಟಿದ್ದಾರೆ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ ಊಟ ಹಾಕುತ್ತೇನೆ. ನಮ್ಮ ಬಗ್ಗೆ ಮಾತನಾಡದಿದ್ದರೆ ಅವರ ಹೊಟ್ಟೆಪಾಡು ನಡೆಯಲ್ಲ. ಮಾನ ಮಾರ್ಯಾದೆ ಇದ್ದರೆ ಇರುವಷ್ಟು ದಿನ ವ್ಯಾಪಾರ ಮಾಡಿಕೊಂಡು ಮನೆಯಲ್ಲಿ ಇರಲಿ," ಎಂದು ಆಕ್ರೋಶ ಹೊರಹಾಕಿದ್ದಾರೆ.

 ಹಾಸನದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ

ಹಾಸನದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ

ಹಾಸನ ಜಿಲ್ಲೆಯಲ್ಲಿ ಎರಡು ಆಯ್ಕೆ ಇದೆ. ಒಂದು ಜೆಡಿಎಸ್ ಅಥವಾ ಬಿಜೆಪಿ. ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹಾಸನ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ನಡೆದ ಶಾಸಕ ಎನ್. ಮಹೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ದಲಿತ ವಿರೋಧಿ ಕುಟುಂಬ ಎಂದು ಕುಟುಕಿದರು. ದಲಿತ ಬಂಧುಗಳು ದೊಡ್ಡಗೌಡರ ಮನೆಗೆ ದಲಿತ ಸಮಾಜದ ಬಂಧುಗಳು ಹೋಗಿ ಬಂದ ನಂತರ ಮತ್ತೆ ಸ್ನಾನ ಮಾಡಿ ಬರುವ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಪ್ರೀತಂಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

 ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ

ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರೀತಂಗೌಡ, ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ದೆಹಲಿಯಲ್ಲಿ 6 X 3 ಜಾಗ ಕೊಡಲಿಲ್ಲ. ಅದೇ ಅವರ ಗಾಂಧಿ ಕುಟುಂಬಕ್ಕೆ ಒಬ್ಬರ ಅಂತ್ಯಸಂಸ್ಕಾರ ಮಾಡಲು ಮೂವತ್ತು ಎಕರೆ, ಐವತ್ತು ಎಕರೆ ಅವರ ತಾತನ ಮನೆ ಆಸ್ತಿ ಅನ್ನುವ ರೀತಿಯಲ್ಲಿ ಘಾಟ್‍ಗಳನ್ನು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್‌ನವರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಕಾಂಗ್ರೆಸ್‌ನವರು. ಭಾರತೀಯ ಜನತಾ ಪಾರ್ಟಿ, ದಲಿತ ಸಮಾಜದ ಬಂಧುಗಳನ್ನು ಸಮಾನತೆಯಿಂದ ನೋಡುತ್ತದೆ. ಹಾಸನ ಜಿಲ್ಲೆಯಲ್ಲಿ ನಮ್ಮನ್ನೆಲ್ಲ ಕಾಪಾಡುವವರು ಯಾರೂ ಎಂಬ ಪ್ರಶ್ನೆಯಿತ್ತು. ನಿಮ್ಮ ಹಳ್ಳಿಗೆ ಹೋಗಿ ಹೇಳಿ ನರೇಂದ್ರ ಮೋದಿ, ಅಮಿತ್ ಶಾ ಇದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+