ಮಲೆನಾಡಾಯ್ತು, ಈಗ ಹಾಸನಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ಹಾಸನ, ಮಾರ್ಚ್ 09: ಹಾಸನದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದ್ದು, ಅಲ್ಲಿಗೆ ಮಂಗನ ಕಾಯಿಲೆ ಮಲೆನಾಡು ಭಾಗದಿಂದ ಹಾಸನಕ್ಕೂ ಕಾಲಿಟ್ಟಂತಾಗಿದೆ.

625 ಉಣ್ಣೆ ಸ್ಯಾಂಪಲ್ ನಲ್ಲಿ, 2 ಉಣ್ಣೆ ಕೀಟದಲ್ಲಿ ಪಾಸೀಟಿವ್ ಅಂಶ ಸಾಬೀತಾಗಿದೆ. ಹಾಸನ ತಾಲೂಕಿನ ಚಿಕ್ಕಬಸವನಹಳ್ಳಿ, ಸಕಲೇಶಪುರ ತಾಲೂಕಿನ ಬಸವನಗುಡಿ ಗ್ರಾಮದಲ್ಲಿ ವೈರಸ್ ಪತ್ತೆಯಾಗಿರುವುದು ತಿಳಿದು ಬಂದಿದೆ.

ಎರಡು ಗ್ರಾಮಗಳಲ್ಲಿ ಕರುಗಳ ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ಇದೀಗ ವೈರಸ್ ಪತ್ತೆಯಾದ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ವಿಜಯ್ ಹಾಗೂ ಡಿಎಚ್ ಓ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Monkey fever disease virus has been detected in Hassan

ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಳ್ಳಿಗಳ ಜನಕ್ಕೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಮನೆ ಮನೆಗೆ ಔಷಧ ನೀಡಿ, ಬಿತ್ತಿ ಪತ್ರ ಹಂಚಲು ಗ್ರಾಮದಲ್ಲೇ ಬೀಡು ಬಿಟ್ಟಿದೆ. ಸದ್ಯ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+