ಮೋದಿಜೀ, ಫಾರ್ಮರ್ಸ್ ಇಂಡಿಯಾ ಯೋಜನೆ ತನ್ನಿ: ದೇವೇಗೌಡ

Posted By:
Subscribe to Oneindia Kannada

ಹಾಸನ, ಜನವರಿ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಯೋಜನೆಯನ್ನು ಎಲ್ಲೆಡೆ ಅನುಷ್ಠಾನಗೊಳಿಸಲು ಇನ್ನೂ ಕಾಲಾವಕಾಶ ಬೇಕಿದೆ. ಡಿಜಿಟಲ್ ಇಂಡಿಯಾ ಬದಲಿಗೆ ಫಾರ್ಮರ್ಸ್ ಇಂಡಿಯಾ ಯೋಜನೆ ಜಾರಿಗೆ ತರಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಒತ್ತಾಯಿಸಿದ್ದಾರೆ.

ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಬೆನ್ನೆಲುಬಾಗಿರುವ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಫಾರ್ಮರ್ಸ್ ಇಂಡಿಯಾ ಯೋಜನೆಯನ್ನು ಪ್ರಧಾನಿ ಅನುಷ್ಠಾನಗೊಳಿಸಬೇಕೆಂದು ಎಂದು ಕೋರಿದ್ದಾರೆ.

Modiji We need Farmers India than Digital India : HD Deve Gowda

ಡಿಜಿಟಲ್ ಇಂಡಿಯಾ ಕಾರ್ಯಗತಗೊಳಿಸಲು ಹೊರಟಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಇದು ಅಧಿಕೃತವಾಗಿ ಕಾರ್ಯಗತಗೊಳ್ಳಲು ಇನ್ನೂ ನಾಲ್ಕು ವರ್ಷಗಳು ಬೇಕು. ಅಡಿಕೆ, ತೆಂಗು, ಕಾಫಿ ಸೇರಿದಂತೆ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ರೈತರು ಹೂಡಿರುವ ಬಂಡವಾಳ ಪಡೆದುಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಪ್ರಧಾನಿ ರೈತರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ನೈಸ್ ಅಕ್ರಮ ಕುರಿತು: ನೈಸ್ ಅಕ್ರಮ ಕುರಿತು ಸರ್ಕಾರ ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ. ನಾನು ಹಲವು ವರ್ಷಗಳಿಂದ ಇದರ ವಿರುದ್ಧ ಹೋರಾಡುತ್ತಲೇ ಬಂದಿದ್ದೇನೆ. ಅಲ್ಲದೆ ನಮ್ಮ ಪಕ್ಷದ ಎಚ್.ಡಿ.ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಹಲವು ಶಾಸಕರು ಇದರ ವಿರುದ್ಧ ಹಲವು ಬಾರಿ ಸದನದಲ್ಲಿ ದನಿಯೆತ್ತಿದ್ದಾರೆ. ನೈಸ್‍ಗೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ನಾನು ಸಹಕರಿಸುವುದಾಗಿ ಹೇಳಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಗರ್ಭಿಣಿಯರಿಗೆ ಆರು ಸಾವಿರ ಸಹಾಯಧನ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಗರ್ಭಿಣಿಯರಿಗೆ 10 ಸಾವಿರ ಸಹಾಯಧನ ನೀಡುವ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಆದರೆ ಮೋದಿಯ ಈ ಯೋಜನೆ ಹೊಸತೇನಲ್ಲ ಎಂದರು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We need Farmers India than Digital India urged former PM HD Deve Gowda in Hassan today. Deve Gowda said he is not against Digital India scheme but, Modi need to concentrate more on strengthening economy of farmers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ