ಹಾಸನ: ಮಟ್ಕಾ ದಂಧೆ ಮೇಲೆ ದಾಳಿ, ನಾಲ್ವರ ಬಂಧನ

By: ಹಾಸನ ಪ್ರತಿನಿಧಿ
Subscribe to Oneindia Kannada

ಹಾಸನ: ನಗರದ ಪೆನ್‍ಶನ್ ಮೊಹಲ್ಲ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಪಿಎಸ್ ಐ ಆರೋಕಿಯಪ್ಪ ನೇತೃತ್ವದ ತಂಡ ನಾಲ್ವರನ್ನು ಬಂಧಿಸಿದೆ.

ರಂಗೋಲಿಹಳ್ಳದ ನಿವಾಸಿ ಹರೀಶ್ (30), ಪೆನ್‍ಶನ್ ಮೊಹಲ್ಲ ಮೋಚಿ ಕಾಲೋನಿ ನಿವಾಸಿ ಮಂಜುನಾಥ್ (36), ಹುಣಸಿನಕೆರೆ ಬೀದಿ ಸ್ಲಂ ಬೋರ್ಡ್ ನಿವಾಸಿ ಉಮೇಶ್ (27), ಅಡ್ಲಿಮನೆ ರಸ್ತೆ, ಆದರ್ಶ ನಗರ 5ನೇ ಕ್ರಾಸ್ ನಿವಾಸಿ ಕೃಷ್ಣಮೂರ್ತಿ (46) ಬಂಧಿತರು. ಆರೋಪಿಗಳಿಂದ 3 ಮೊಬೈಲ್, 6800ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Matka betting den raided, 4 arrested in Hassan

ಪಟ್ಟಣದ ಹಲವೆಡೆ ಕೆಲವರು ಮಟ್ಕಾ ದಂಧೆ ನಡೆಸುತ್ತಾರೆ ಎಂಬ ದೂರುಗಳು ಬಂದಿತ್ತು. ಈ ಹಿನ್ನಲೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತವಾಗಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪಿಎಸ್ಐ ಆರೋಕಿಯಪ್ಪ ನೇತೃತ್ವದ ತಂಡ ಭಾನುವಾರ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೆನ್‍ಶನ್ ಮೊಹಲ್ಲ ಪೊಲೀಸ್ ಠಾಣೆ ಪಿಎಸ್‍ಐ ಆರೋಕಿಯಪ್ಪ, ಸಿಬ್ಬಂದಿ ಶಿವಣ್ಣ, ಮಂಜುನಾಥ್, ಪರಮೇಶ್, ರವಿ ಇತರರು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hassan police busted a gambling racket in the city and arrested four offenders on March 13.
Please Wait while comments are loading...