ರಾಜ್ಯಕ್ಕೆ ರಾಜ್‌ಕುಮಾರ್ ಇದ್ದಂತೆ ದೇಶಕ್ಕೆ ಮೋದಿ ಶಕ್ತಿ: ತಾರಾ

ಹಾಸನ, ಏಪ್ರಿಲ್ 1: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು. ಕರ್ನಾಟಕದಲ್ಲಿ ಡಾ. ರಾಜ್‌ಕುಮಾರ್ ಹೆಸರು ಹೇಗೆ ಒಂದು ಶಕ್ತಿಯಾಗಿದೆಯೋ, ಹಾಗೆಯೇ ದೇಶದಲ್ಲಿ ನರೇಂದ್ರ ಮೋದಿ ಅವರು ಒಂದು ಶಕ್ತಿಯಾಗಿದ್ದಾರೆ ಎಂದು ನಟಿ, ಬಿಜೆಪಿ ನಾಯಕಿ ತಾರಾ ಹೇಳಿದರು.

ಹಾಸನದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ಎ. ಮಂಜು ಅವರ ಪರ ಪ್ರಚಾರ ನಡೆಸಲು ಬಂದಿದ್ದ ಅವರು ಮೋದಿ ಗುಣಗಾನ ಮಾಡಿದರು.

ಇದು ದೇಶಕ್ಕೆ ನಡೆಯುವ ಚುನಾವಣೆ. ಇಲ್ಲಿ ಹೆಚ್ಚಿನವರು ಮೋದಿ ಮತ್ತೆ ಗೆದ್ದುಬರಬೇಕು ಎಂದು ಬಯಸಿದ್ದಾರೆ. ಮೋದಿ ಅವರ ಅಲೆ ಕಡಿಮೆ ಆಗಿದೆ ಎನ್ನುವುದು ಸುಳ್ಳು. ವಾಸ್ತವವಾಗಿ 2014ಕ್ಕಿಂತಲೂ ಹೆಚ್ಚು ಬೆಂಬಲ ಮೋದಿ ಅವರಿಗೆ ವ್ಯಕ್ತವಾಗುತ್ತಿದೆ ಎಂದರು.

Lok Sabha elections 2019: BJP leader, actress Thara said Dr Raj name is a power in Karnataka, Modi is for Nation

ರಾಜ್ಯದಲ್ಲಿ ಡಾ. ರಾಜ್‌ಕುಮಾರ್ ಅವರ ಹೆಸರು ಹೇಗೆ ಒಂದು ಶಕ್ತಿಯಾಗಿದೆಯೋ ಹಾಗೆಯೇ ದೇಶದಲ್ಲಿ ಮೋದಿ ಅವರ ಹೆಸರು ಒಂದು ಶಕ್ತಿ. ಮೋದಿ ಅವರ ಹೆಸರಿನಲ್ಲಿಯೇ ಮೋಡಿ ಇದೆ. ಹೀಗಾಗಿ ಅವರ ಹೆಸರನ್ನು ನಾವು ಎಲ್ಲ ಕಡೆ ಬಳಸುತ್ತಿದ್ದೇವೆ. ಅವರು ಪ್ರಧಾನಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಸಾಕಷ್ಟು ಹೆಸರು ಬಂದಿದೆ, ಹೆಚ್ಚಿನ ಗೌರವ ಸಿಗುತ್ತಿದೆ. ಜಗತ್ತಿನಲ್ಲಿರುವ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಹೆಸರು ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ದೇಶದ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿಗೆ ನೀಡಿರುವ ಐದು ವರ್ಷದ ಅವಕಾಶ ಸಾಲದು. ಮತ್ತೆ ಐದು ವರ್ಷ ಬೇಕು. ಅದಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ಪರವಾಗಿ ಅರಕಲಗೂಡು, ಹಳೆ ಮೈಸೂರು ಭಾಗಗಳಲ್ಲಿ ಪ್ರಚಾರ ಮಾಡುತ್ತೇನೆ. ಹಾಸನದಲ್ಲಿ ಈ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುವುದು ನಿಶ್ಚಿತ. ಪಕ್ಷದ ನಾಯಕರು ಸೂಚನೆ ನೀಡಿದರೆ ಮಂಡ್ಯದಲ್ಲಿ ಸುಮಲತಾ ಅವರ ಪರವೂ ಪ್ರಚಾರ ಮಾಡಲಿದ್ದೇನೆ. ಸುಮಲತಾ ಮತ್ತು ನಿಖಿಲ್ ಇಬ್ಬರೂ ಸಿನಿಮಾ ರಂಗಕ್ಕೆ ಸಂಬಂಧಿಸಿದವರು. ಆದರೆ, ಪಕ್ಷ ಯಾರ ಪರ ಪ್ರಚಾರ ಮಾಡುವಂತೆ ಸೂಚನೆ ನೀಡುತ್ತದೆಯೋ ಅವರ ಪರ ಪ್ರಚಾರಕ್ಕೆ ಇಳಿಯುತ್ತೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+