KSRTC:ಮಹಿಳಾ ಸಿಬ್ಬಂದಿ ನೇಮಕ ನಿಲ್ಲಿಸಿ, ನಿಗಮ ನಿರ್ದೇಶಕರಿಗೆ ಪತ್ರ
ಹಾಸನ, ಜು.4: ಮಹಿಳೆಯರು ಪುರುಷರ ಸರಿಸಮನಾಗಿ ನಿಂತಿರುವ ಈ ಸಮಯದಲ್ಲಿ ಮಹಿಳೆಯರ ನೇಮಕವೇ ಬೇಡ ಎಂದು ಹಾಸನದ ಕೆಎಸ್‌ಆರ್‌ಟಿಸಿ ಡಿಪೋದ ಅಧಿಕಾರಿಯೊಬ್ಬರು ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇದು ಇದೀಗ ಮಹಿಳಾ ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿರುವ ಒಟ್ಟಾರೆ ಮಹಿಳಾ ಸಿಬ್ಬಂದಿಯಿಂದ ಶೇ.40ರಷ್ಟು ಕೆಲಸವಾಗುತ್ತಿಲ್ಲ, ಹೀಗಾಗಿ ಕೆಲಸಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ತಾಂತ್ರಿಕ ಮತ್ತಿತರೆ ಕಠಿಣ ಕೆಲಸಕ್ಕೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವುದು ಬೇಡ ಎಂದು ತಿಳಿಸಿದ್ದಾರೆ.
ಹಾಸನ ವಿಭಾಗದಲ್ಲಿ 140 ಮಹಿಳಾ ಸಿಬ್ಬಂದಿ ಇದ್ದು, 70 ಮಂದಿ ಮೆಕ್ಯಾನಿಕ್ ವಿಭಾಗದಲ್ಲಿದ್ದಾರೆ. ಅವರಲ್ಲಿ ಹಲವು ಅನಾರೋಗ್ಯ, ಹೆರಿಗೆ ರಜೆ ಹೀಗೆ ನಾನಾ ಕಾರಣಗಳಿಂದ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ ಮಹಿಳಾ ಸಿಬ್ಬಂದಿಯಿಂದ ಟೈರ್ ಎತ್ತಲು ಆಗುವುದಿಲ್ಲ, ಜಾಕ್ ಅಳವಡಿಸುವ ಕೆಲಸವಂತೂ ಸಾಧ್ಯವೇ ಇಲ್ಲ ಹೀಗಿರುವಾಗ ಅಂತಹ ಕೆಲಸಗಳಿಗೆ ಮಹಿಳಾ ನೇಮಕ ಬೇಡ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಯಶ್ವಂತ್‌ಕುಮಾರ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಪತ್ರವು ಮಹಿಳಾ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಅವರಿಗೆ ಕೆಲಸ ತೆಗೆದುಕೊಳ್ಳುವುದು ಗೊತ್ತಿಲ್ಲ, ಇದು ಮಹಿಳೆಯರ ಹಕ್ಕನ್ನು ಇನ್ನಷ್ಟು ದುರ್ಬಲಗೊಳಿಸಲು ನಡೆಸುತ್ತಿರುವ ಹುನ್ನಾರವಾಗಿದೆ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ.











Click it and Unblock the Notifications