ಐಎಎಸ್ ಅಧಿಕಾರಿಗಳ ವರ್ಗಾವಣೆ; ಹಾಸನಕ್ಕೆ ಮಹಿಳಾ ಡಿಸಿ

ಹಾಸನ, ಆಗಸ್ಟ್ 21; ಕರ್ನಾಟಕ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಹಾಸನ ಜಿಲ್ಲಾಧಿಕಾರಿಯಾಗಿದ್ದ ಆರ್. ಗಿರೀಶ್ ವರ್ಗಾವಣೆಗೊಂಡಿದ್ದಾರೆ.

ಶನಿವಾರ ಕರ್ನಾಟಕ ಸರ್ಕಾರ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹಾಸನ ಜಿಲ್ಲಾಧಿಕಾರಿಯಾಗಿ ಎಂ. ಎಸ್. ಅರ್ಚನಾ ನೇಮಕ ಮಾಡಲಾಗಿದೆ.

ಹಾಸನ ಜಿಲ್ಲಾಧಿಕಾರಿಯಾಗಿದ್ದ ಆರ್. ಗಿರೀಶ್‌ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ಆಗಿ ಆರ್‌. ಗಿರೀಶ್ ನೇಮಕ ಮಾಡಲಾಗಿದೆ.

 IAS Officer

ಹಾನಸಕ್ಕೆ ಮತ್ತೆ ಮಹಿಳೆಯೊಬ್ಬರು ಜಿಲ್ಲಾಧಿಕಾರಿಯಾಗಿದ್ದಾರೆ. ಎಂ. ಎಸ್. ಅರ್ಚನಾರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಅರ್ಚನಾ ರಾಮನಗರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು.

ರೋಹಿಣಿ ಸಿಂಧೂರಿ ಮತ್ತು ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಈಗ ಪುನಃ ಜಿಲ್ಲೆಯ ಆಡಳಿತ ಮಹಿಳಾ ಅಧಿಕಾರಿಯ ಕೈಗೆ ಸಿಕ್ಕಿದೆ.

ಹೆಚ್ಚುವರಿ ಹೊಣೆ; 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕರ್ನಾಟಕ ಸರ್ಕಾರ ಕಪಿಲ್ ಮೋಹನ್‌ಗೆ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಎಸ್. ಸೆಲ್ವಕುಮಾರ್‌ಗೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆ ನೀಡಿದೆ.

vidhana soudha

ಕಪಿಲ್ ಮೋಹನ್ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜವಾವ್ದಾರಿ ಹೊಂದಿದ್ದರು. ಸೆಲ್ವಕುಮಾರ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜವಾಬ್ದಾರಿ ಜೊತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹೆಚ್ಚುವರಿ ಹೊಣೆ ಹೊಂದಿದ್ದರು.

ವರ್ಗಾವಣೆಗೊಂಡ ಅಧಿಕಾರಿಗಳು; ಎಸ್. ಆರ್. ಉಮಾಶಂಕರ್ - ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ. ವಿ. ಪೊನ್ನುರಾಜ್ - ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ. ಆರ್. ಗಿರೀಶ್ - ಸಿಇಒ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ.

ಎನ್. ಶಿವಶಂಕರ್ - ನಿರ್ದೇಶಕರು ಪ್ರೌರಾಡಳಿತ ನಿರ್ದೇಶನಾಲಯ. ಎಂ. ಎಸ್. ಅರ್ಚನಾ - ಜಿಲ್ಲಾಧಿಕಾರಿ ಹಾಸನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+