ಕುಮಾರಸ್ವಾಮಿ ಜೆಡಿಸ್ ಭದ್ರಕೋಟೆ ಹಾಸನಕ್ಕೆ ಕೊಟ್ಟಿದ್ದೇನು?

Recommended Video

      ಕುಮಾರಸ್ವಾಮಿ ಜೆಡಿಸ್ ಭದ್ರಕೋಟೆ ಹಾಸನಕ್ಕೆ ಕೊಟ್ಟಿದ್ದೇನು? | Oneindia Kannada

      ಬೆಂಗಳೂರು, ಜುಲೈ 05 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಚೊಚ್ಚಲ ಬಜೆಟ್ ಮಂಡನೆ ಮಾಡಿದರು. 'ಇದು ರಾಮನಗರದ ಅಣ್ಣ-ಹಾಸನದ ತಮ್ಮನ ಬಜೆಟ್' ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.

      ಗುರುವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ಅವರು ಹಲವು ಯೋಜನೆಗಳನ್ನು ಘೋಷಣೆ ಮಾಡಿದರು.

      ಬಜೆಟ್ ಮಂಡನೆ ಬಳಿಕ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, 'ಇದು ರಾಮನಗರ ಎಚ್.ಡಿ.ಕುಮಾರಸ್ವಾಮಿ, ಹಾಸನ ಎಚ್.ಡಿ.ರೇವಣ್ಣ ಬಜೆಟ್' ಎಂದು ವಾಗ್ದಾಳಿ ನಡೆಸಿದರು. ಹಾಗಾದರೆ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ...

      Karnataka Buget 2018 : What Hassan gets from Kumaraswamy budget

      * ಹಾಸನ ನಗರಕ್ಕೆ 30 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣ
      * ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ. ಮೀಸಲು
      * ಬೇಲೂರು, ಹಳೆಬೀಡಿನಲ್ಲಿ ಬೇರೆ-ಬೇರೆ ಭಾಷೆಯಲ್ಲಿ ಗೈಡ್‌ಗಳಿಗೆ ತರಬೇತಿ ನೀಡಲು ಕೇಂದ್ರ ಸ್ಥಾಪನೆ

      * ಹಾಸನದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ
      * ಹಾಸನ ಜಿಲ್ಲೆಯನ್ನು ಸ್ನಾನಗೃಹ‌‌‌ ನೆಲಹಾಸು ಮತ್ತು ‌ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯಾಗಿ ಅಭಿವೃದ್ದಿ ಮಾಡುವುದು.
      * ಹೇಮಾವತಿ ನದಿಯಿಂದ ಹಾಸನದ ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯಲ್ಲಿನ 160 ಕೆರೆಗೆ ಕುಡಿಯುವ ನೀರು ತುಂಬಿಸಲು 70 ಕೋಟಿ ಅನುದಾನ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+