ಹಾಸನದಲ್ಲಿ ಮತ್ತೆ ಮದುವೆಯಾದ ಎಚ್ ಡಿ ರೇವಣ್ಣ
ಹಾಸನ, ಡಿಸೆಂಬರ್ 24: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕುಟುಂಬ ಹಾಗೂ ಬಂಧು ಮಿತ್ರ ಇಂದು ಇಲ್ಲಿನ ಜ್ಞಾನಾಕ್ಷಿ ಕನ್ವೆನ್ಷನ್ ಸೆಂಟರ್ ನಲ್ಲಿ ಮದುವೆ ಸಂಭ್ರಮದಲ್ಲಿ ತೊಡಗಿದ್ದರು.
ಮಾಜಿ ಸಚಿವ, ಜೆ.ಡಿ.ಎಸ್. ನಾಯಕ ಎಚ್.ಡಿ. ರೇವಣ್ಣ ಮತ್ತೆ ಮದುವೆಯಾಗಿದ್ದಾರೆ. 60ನೇ ವಸಂತಕ್ಕೆ ಕಾಲಿಸಿರಿಸಿದ ರೇವಣ್ಣ ಅವರ ಷಷ್ಠಿಪೂರ್ತಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಪತ್ನಿ ಭವಾನಿ ರೇವಣ್ಣ ಅವರನ್ನು ಮತ್ತೊಮ್ಮೆ ಸಂಪ್ರದಾಯಬದ್ಧವಾಗಿ ಮದುವೆಯಾಗುವ ಮೂಲಕ ಸಂಭ್ರಮಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಚನ್ನಮ್ಮ ದೇವೇಗೌಡ, ರೇವಣ್ಣ ಅವರ ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿದಂತೆ ಬಂಧುಮಿತ್ರರು ಆಪ್ತೇಷ್ಟರು ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಸೂರಜ್ ರೇವಣ್ಣ ಅವರ ನಿಶ್ಚಿತಾರ್ಥ ನೆರವೇರಿದ್ದನ್ನು ಇಲ್ಲಿ ಸ್ಮರಿಸಬಹುದು.

1987ರಲ್ಲಿ ಎಚ್.ಡಿ.ರೇವಣ್ಣ ಅವರು ಹಳೇಕೋಟೆ ಕ್ಷೇತ್ರದಿಂದಲೇ ಜಿಲ್ಲಾ ಪರಿಷತ್ಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು.

ಇದೇ ಕ್ಷೇತ್ರದಿಂದ ಭವಾನಿ ಅವರು ರಾಜಕೀಯಕ್ಕೆ ಅಧಿಕೃತ ಎಂಟ್ರಿ ಪಡೆದುಕೊಂಡರು. ರೇವಣ್ಣ ದಂಪತಿ ಪುತ್ರ ಪ್ರಜ್ವಲ್ ಅವರು ಜೆಡಿಎಸ್ ನ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.












Click it and Unblock the Notifications