• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಲ್ಲಾ ಪಂಚಾಯತ್ ಸದಸ್ಯರನ್ನೂ ಬಲ್ಲ ಗೌಡ್ರಿಗೆ, ಪ್ರೀತಂ ಗೌಡ ಯಾರೆಂದು ಗೊತ್ತಿಲ್ಲವಂತೆ!

|
   ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಯಾರು ಅಂತ ಎಚ್ ಡಿ ದೇವೇಗೌಡ್ರಿಗೆ ಗೊತ್ತಿಲ್ವಂತೆ | Oneindia Kannada

   ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಜೆಡಿಎಸ್ಸಿನ ಸುಭದ್ರ ಕೋಟೆ ಹಾಸನದಲ್ಲಿ, ಅದೂ ಹಾಸನ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡಿದ್ದು, ದೇವೇಗೌಡರ ಕುಟುಂಬ ಮತ್ತು ಕಾಂಗ್ರೆಸ್ ಮುಖಂಡ ಎ ಮಂಜು ಕೈಕೈ ಹಿಸುಕಿಕೊಳ್ಳುವಂತೆ ಮಾಡಿತ್ತು.

   ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ, ಯುವ ಮುಖಂಡ ಪ್ರೀತಂ ಗೌಡ, ಜೆಡಿಎಸ್ಸಿನ ಎಚ್ ಎಸ್ ಪ್ರಕಾಶ್ ಅವರನ್ನು 13,006 ಮತಗಳ ಅಂತರದಿಂದ ಸೋಲಿಸಿ, ಹಾಸನ ರಾಜಕೀಯ ಸಮೀಕರಣವನ್ನೇ ಸ್ವಲ್ಪ ಮಟ್ಟಿಗೆ ಬದಲಾಗುವಂತೆ ಮಾಡಿದ್ದರು. ಹಾಸನ ಫಲಿತಾಂಶ, ತಾಲೂಕು ಪಂಚಾಯತಿಯಿಂದ ಹಿಡಿದು, ರಾಷ್ಟ್ರ ರಾಜಕಾರಣದವರೆಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ದೇವೇಗೌಡ್ರಿಗೂ ತಲೆಬಿಸಿ ಮಾಡಿತ್ತು.

   ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿರುವುದೇನು?

   ವಿಚಾರಕ್ಕೆ ಬರುವುದಾದರೆ, ಆಪರೇಷನ್ ಕಮಲದ ವಿಚಾರದಲ್ಲಿ ಮಾಧ್ಯಮಗಳಿಗೆ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಆಡಿಯೋ ಟೇಪ್ ನಲ್ಲಿ ಹಾಸನದ ಶಾಸಕ ಪ್ರೀತಂ ಗೌಡ ಅವರದ್ದು ಎನ್ನಲಾಗುತ್ತಿರುವ ಧ್ವನಿಯೂ ಇತ್ತು. ಅದರಲ್ಲಿ ಗೌಡ್ರ ಕುಟುಂಬದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗಿತ್ತು.

   ಎಚ್‌ಡಿಕೆ-ರೇವಣ್ಣ ವಿರುದ್ಧ ಕೊಲೆ ಸಂಚಿನ ಆರೋಪ ಹೊರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ

   ಇದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿ, ಹಾಸನದಲ್ಲಿರುವ ಪ್ರೀತಂ ಗೌಡ ಅವರ ಮನೆಯ ಮೇಲೆ ದಾಳಿ ಮಾಡುವ ತನಕ ಹೋಗಿತ್ತು. ಇದು, ಆಡಿಯೋ ಪ್ರಕರಣವನ್ನು ಯಾವ ತನಿಖಾ ಸಂಸ್ಥೆಗೆ ವಹಿಸಬೇಕು ಎನ್ನುವ ಚರ್ಚೆಯ ಗತಿಯನ್ನೇ ಬದಲಾಯಿಸಿ, ಶಾಸಕರ ಮನೆದಾಳಿಯ ವಿಚಾರದ ಕಡೆಗೆ ತಿರುಗಿತ್ತು. ಈ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ, ಗೌಡ್ರು ಖಾರವಾಗಿ ಉತ್ತರಿಸಿದ್ದಾರೆ.

   ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ ಮಾಧ್ಯಮದವರ ಪ್ರಶ್ನೆ

   ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ ಮಾಧ್ಯಮದವರ ಪ್ರಶ್ನೆ

   ಹದಿನಾರನೇ ಲೋಕಸಭೆಯ ಕೊನೆಯ ದಿನದ ಅಧಿವೇಶನದಲ್ಲಿ ಭಾಗಿಯಾಗಲು ಜೆಡಿಎಸ್ ವರಿಷ್ಠ ದೇವೇಗೌಡ್ರು ನವದೆಹಲಿಯಲ್ಲಿ ಇದ್ದರು. ಪ್ರಧಾನಿಯವರ ಭಾಷಣದ ನಂತರ ಸಂಸತ್ತಿನಿಂದ ಹೊರಬಂದ ಗೌಡ್ರನ್ನು, ಹಾಸನದ ಶಾಸಕರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು. ಇದಕ್ಕೆ ಗೌಡ್ರು ಕೆಂಡಾಮಂಡಲವಾದರು.

   ಯಾವನ್ರೀ ಅವನು ಪ್ರೀತಂ ಗೌಡ, ನನಗೆ ಅವರು ಯಾರೆಂದೇ ಗೊತ್ತಿಲ್ಲ

   ಯಾವನ್ರೀ ಅವನು ಪ್ರೀತಂ ಗೌಡ, ನನಗೆ ಅವರು ಯಾರೆಂದೇ ಗೊತ್ತಿಲ್ಲ

   ಯಾವನ್ರೀ ಅವನು ಪ್ರೀತಂ ಗೌಡ, ನನಗೆ ಅವರು ಯಾರೆಂದೇ ಗೊತ್ತಿಲ್ಲ ಎಂದು ಖಾರವಾಗಿ ಗೌಡ್ರು ಉತ್ತರಿಸಿದರು. ನಾನು ಪಾರ್ಲಿಮೆಂಟ್ ನಿಂದ ಈಗ ತಾನೇ ಹೊರಗೆ ಬಂದಿದ್ದೇನೆ. ಈ ಬಗ್ಗೆ ನನಗೇನು ಗೊತ್ತಿಲ್ಲ. ಯಾರೇ ಆದರೂ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಹಾಸನ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ದೇವೇಗೌಡರು ಉತ್ತರಿಸಿದರು.

   ದೇವೇಗೌಡ ಬಗ್ಗೆ ಆಕ್ಷೇಪಾರ್ಹ ಮಾತು: ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆ

   ರಾಜ್ಯ ರಾಜಕಾರಣದ ಮೇಲೆ ಸದಾ ಕಣ್ಣಿಟ್ಟಿರುವ ಗೌಡ್ರು

   ರಾಜ್ಯ ರಾಜಕಾರಣದ ಮೇಲೆ ಸದಾ ಕಣ್ಣಿಟ್ಟಿರುವ ಗೌಡ್ರು

   ಗೌಡ್ರು, ದೆಹಲಿಯಲ್ಲಿರಲಿ ಕರ್ನಾಟಕದಲ್ಲಿರಲಿ, ರಾಜ್ಯ ರಾಜಕಾರಣದ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಅದು ಬೇರೆ ರಾಜ್ಯದಲ್ಲಿ ಕುಮಾರಣ್ಣನ ಸರಕಾರವಿದೆ. ಜೆಡಿಎಸ್ ಕಾರ್ಯಕರ್ತರಿಂದ ಆದ ದಾಂಧಲೆ ಇದು, ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಡು ಸದನದಲ್ಲಿ ಗಲಾಟೆ ಆರಂಭಿಸಿರುವುದು.. ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುವಾಗ, ಗೌಡ್ರಿಗೆ, ಪ್ರೀತಂ ಗೌಡ ಯಾರೆಂದು ಗೊತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತಾ ಎನ್ನುವ ಸಂಶಯ ಕಾಡದೇ ಇರದು.

   ಪ್ರೀತಂ ಗೌಡ ಗೆಲುವು ಕಳೆದ ಚುನಾವನಣೆಯ ಅಚ್ಚರಿಯ ಫಲಿತಾಂಶ

   ಪ್ರೀತಂ ಗೌಡ ಗೆಲುವು ಕಳೆದ ಚುನಾವನಣೆಯ ಅಚ್ಚರಿಯ ಫಲಿತಾಂಶ

   ಹಾಸನ ಜಿಲ್ಲಾ ವ್ಯಾಪ್ತಿಯ ಏಳು ಅಸೆಂಬ್ಲಿ ಕ್ಷೇತ್ರಗಳ ಪೈಕಿ, ಹಾಸನ ಸೀಟೊಂದನ್ನು ಬಿಟ್ಟು ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿತ್ತು. ತ್ರಿಕೋಣ ಸ್ಪರ್ಧೆಯ ಲಾಭ ಪಡೆದಿದ್ದ ಬಿಜೆಪಿಯ ಪ್ರೀತಂ ಗೌಡ, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. ಕಳೆದ ಅಸೆಂಬ್ಲಿ ಚುನಾವಣೆಯ ಅಚ್ಚರಿಯ ಫಲಿತಾಂಶ ಇದಾಗಿತ್ತು.

   ತಮ್ಮ ಮೊಮ್ಮಗನಿಗೆ ಎಂಟ್ರಿ ಕೊಡಿಸಲು ಸಜ್ಜಾಗಿರುವ ಗೌಡ್ರು

   ತಮ್ಮ ಮೊಮ್ಮಗನಿಗೆ ಎಂಟ್ರಿ ಕೊಡಿಸಲು ಸಜ್ಜಾಗಿರುವ ಗೌಡ್ರು

   ಹಾಸನ, ದೇವೇಗೌಡ್ರ ಕರ್ಮಭೂಮಿ ಮತ್ತು ಅಲ್ಲಿನ ಲೋಕಸಭಾ ಸದಸ್ಯ. ಈ ಬಾರಿ ಅಲ್ಲಿಂದ ತಮ್ಮ ಮೊಮ್ಮಗನಿಗೆ ಎಂಟ್ರಿ ಕೊಡಿಸಲು ಸಜ್ಜಾಗಿರುವ ಗೌಡ್ರಿಗೆ, ಒಂದೆಡೆ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಅಸಹಾಕಾರ, ಜೊತೆಗೆ ಬಿಜೆಪಿಯ ಬಲವೃದ್ದನೆಗೊಳ್ಳುತ್ತಿರುವುದು ತಲೆನೋವಿನ ಸಂಗತಿಯಾಗುತ್ತಿದೆ. ಹೀಗಿರುವಾಗ, ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕ ಪ್ರೀತಂ ಗೌಡ ಗೊತ್ತಿಲ್ಲಾಂದ್ರೆ? ಅವರೂ ಕೂಡಾ ಗೌಡ್ರ ಸಮುದಾಯದವರೇ?

   ಪ್ರಜ್ವಲ್ ರೇವಣ್ಣ ರಂಗಪ್ರವೇಶಕ್ಕೆ ಎದುರಾಯಿತು ಹೊಸ ವಿಘ್ನ: ಈ ಬಾರಿ ಯಾರಿಂದ?

   English summary
   BJP MLA Preetham Gowda faces wrath in Hassan by JDS caders. Former PM and JDS Supremo Deve Gowda reacted and said, I don't know who is Preetham Gowda.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X