Anushka Sharma: ವೈರಲ್ ಆಯ್ತು 'ವಿರುಷ್ಕಾ' ಕ್ಯೂಟ್ ಮೊಮೆಂಟ್ಸ್

Anushka Sharma: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಏಪ್ರಿಲ್ 24) ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊಹ್ಲಿ ಭರ್ಜರಿ ಜಯ ತಂದುಕೊಟ್ಟರು. ಈ ಪಂದ್ಯದ ವೇಳೆ ಅನುಷ್ಕಾ ಶರ್ಮಾ ವಿಶಿಷ್ಟವಾಗಿ ಸಂಭ್ರಮಿಸಿದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

ವಿರಾಟ್ ಕೊಹ್ಲಿ ಕೇವಲ 44 ಎಸೆತಗಳಲ್ಲಿ 81 ರನ್ ಬಾರಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ಗಳಿದ್ದವು. ಇವರೊಂದಿಗೆ ದೇವದತ್ ಪಡಿಕ್ಕಲ್ (55 ರನ್) ಕೂಡ ಉತ್ತಮ ಸಾಥ್ ನೀಡಿದರು. ಇವರಿಬ್ಬರ 115 ರನ್‌ಗಳ ಜೊತೆಯಾಟದಿಂದ ಆರ್‌ಸಿಬಿ ಭರ್ಜರಿ ಜಯ ಸಾಧಿಸಿತು.

Virat Kohli 81 Powers RCB Win Anushka Sharma s Cute Celebration Goes huge Viral on Social Media

ಮುಗುಳ್ನಕ್ಕು ನಾಚಿಕೊಂಡ ಅನುಷ್ಕಾ ಶರ್ಮಾ

ಪಂದ್ಯದ ಹೈಲೈಟ್ ಎಂದರೆ ಕ್ರೀಡಾಂಗಣದಲ್ಲಿದ್ದ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ಪ್ರತಿಕ್ರಿಯೆ. ವಿರಾಟ್ ಬಾರಿಸಿದ ಪ್ರತಿಯೊಂದು ಬೌಂಡರಿ ಮತ್ತು ಸಿಕ್ಸರ್‌ಗಳಿಗೆ ಅವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು. ವಿಶೇಷವಾಗಿ ಕೊಹ್ಲಿ ಸತತ ಎರಡು ಸಿಕ್ಸರ್ ಸಿಡಿಸಿದಾಗ ಅನುಷ್ಕಾ ಅವರು ಹಣ ಚಿಮ್ಮುವಂತೆ ಕೈ ಸನ್ನೆ ಮಾಡಿ ಸಂಭ್ರಮಿಸಿದರು. ಕ್ಯಾಮೆರಾ ತಮ್ಮತ್ತ ತಿರುಗುತ್ತಿದ್ದಂತೆ ಮುಗುಳ್ನಕ್ಕು ನಾಚಿಕೊಂಡ ಅವರ ವೀಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಾಖಲೆಗಳ ವೀರನಾದ ವಿರಾಟ್‌ ಕೊಹ್ಲಿ

ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 800ಕ್ಕೂ ಬೌಂಡರಿಗಳನ್ನು ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ಒಂದೇ ಫ್ರಾಂಚೈಸಿ ಪರ 300 ಸಿಕ್ಸರ್ ಬಾರಿಸಿದ ಸಾಧನೆಯನ್ನೂ ಅವರು ಮಾಡಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದು, ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿದೆ.

ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ

ಗುಜರಾತ್ ಟೈಟಾನ್ಸ್‌ 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಆಸರೆಯಾದರು. ಜೇಕಬ್ ಬೆಥೆಲ್ ಬೇಗನೇ ವಿಕೆಟ್‌ ಒಪ್ಪಿಸಿದರು. ಆರಂಭಿಕ ಆಘಾತದ ಹೊರತಾಗಿಯೂ ಕೇವಲ 44 ಎಸೆತಗಳಲ್ಲಿ 81 ರನ್ ಸಿಡಿಸಿದ ಕೊಹ್ಲಿ, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಪಡಿಕ್ಕಲ್ ಮತ್ತು ಕೊಹ್ಲಿ ಉತ್ತಮ ಜೊತೆಯಾಟ

ಆರಂಭದಲ್ಲೇ ಜೇಕಬ್ ಬೆಥೆಲ್ ಅವರ ವಿಕೆಟ್ ಉರುಳಿದರೂ, ನಂತರ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಕೊಹ್ಲಿ ಜೊತೆಗೂಡಿ ರನ್ ವೇಗವನ್ನು ಹೆಚ್ಚಿಸಿದರು. ಈ ಜೋಡಿಯ ಸ್ಫೋಟಕ ಆಟದ ನೆರವಿನಿಂದ ಆರ್‌ಸಿಬಿ ಕೇವಲ 7 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 70 ರನ್ ಕಲೆಹಾಕಿತು.

ಅನುಷ್ಕಾ ಶರ್ಮಾ ಸಂಭ್ರಮದ ದೃಶ್ಯಗಳು ವೈರಲ್‌

ಪತಿ ವಿರಾಟ್‌ ಕೊಹ್ಲಿ ಸಿಡಿಸಿದ ಸಿಕ್ಸರ್‌ಗಳನ್ನ ಕಂಡು ಗ್ಯಾಲರಿಯಲ್ಲಿದ್ದ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅತ್ಯಂತ ಉತ್ಸಾಹದಿಂದ ಎದ್ದು ನಿಂತು ಸಂಭ್ರಮಿಸಿದರು. ಅವರ ಈ ಸಂಭ್ರಮದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಆರ್‌ಸಿಬಿ ಮ್ಯಾಚ್ ಸಮಯದಲ್ಲಿ ಅನುಷ್ಕಾ ಅವರು ಹಾಜರಿರುವ ಮೂಲಕ ಪತಿ ವಿರಾಟ್‌ ಕೊಹ್ಲಿ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಪ್ರಮುಖ ಸಾಕ್ಷಿಯಾಗಿದೆ. ಮತ್ತೊಂದೆಡೆ, ಇವರ ಜೋಡಿ ಹೀಗೆಯೇ ಯಾವಾಗಲೂ ಸಂತೋಷದಿಂದ ಇರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+