Dr Rajkumar: ನಟ ಚೇತನ್ ಅಹಿಂಸಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಶುರುವಾಯ್ತು ಹಿಂಸೆ - ಅಣ್ಣಾವ್ರ ವಿಷಯವೇ ಕಾರಣ
Dr Rajkumar: ನಟ ಚೇತನ್ ಅಹಿಂಸಾ ಅವರಿಗೆ ಕೆಲವು ನೆಟ್ಟಿಗರು ಹಿಂಸೆ ಕೊಡುವುದಕ್ಕೆ ಪ್ರಾರಂಭಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ನಟ ಸಾರ್ವಭೌಮ ಹಾಗೂ ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾ.ರಾಜ್‌ಕುಮಾರ್ ಅವರ ಅಭಿಮಾನಿಗಳು ಡಾ.ರಾಜ್ ಕುಮಾರ್ ಅವರ ಸಮಾಧಿ ನಿರ್ಮಾಣಕ್ಕೆ ಅಂದಿನ ಸರ್ಕಾರ ನೀಡಿದ್ದ ಜಾಗದ ವಿಚಾರವಾಗಿ ಪ್ರಶ್ನೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಸಮಾಧಿ ನಿರ್ಮಾಣಕ್ಕೆ ಬೆಂಗಳೂರಿನ ಹೃದಯಭಾಗದಲ್ಲಿ 2.5 ಎಕರೆ ಭೂಮಿ ನೀಡಿರುವುದನ್ನು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ನೆಟ್ಟಿಗರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ನಟ ಚೇತನ್ ಅಹಿಂಸಾಗೆ ಸಿಕ್ಕಾಪಟ್ಟೆ ಶುರುವಾಗಿದೆ. ನೆಟ್ಟಿಗರು ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ.

ಗಂಗಾಧರ ಗೌಡ ಎಂಬವರು ಡಾ.ರಾಜ್‌ಕುಮಾರ್ ಅವರಿಗೆ ಕೊಟ್ಟಿರುವ ಜಾಗ ತುಂಬಾ ಕಮ್ಮಿ ಆಯಿತು. 25 ಆದರೂ ಕೊಟ್ಟು ಅವರ ಸ್ಮರಣಾರ್ಥ ವೃತ್ತಿರಂಗ ಭೂಮಿಯನ್ನು ಮರು ಸ್ಥಾಪಿಸಲಿ ಎಂದು ಆಗ್ರಹಿಸಿದ್ದಾರೆ. ಅನಿಲ್ ಕುಮಾರ್ ಜೆ ಎನ್ನುವವರು ಅಣ್ಣವ್ರು ಕನ್ನಡಕ್ಕೆ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು,ಗೋಕಾಕ ಚಳುವಳಿ ಒಂದು ಸಾಕು ಅವರ ಶಕ್ತಿ ಏನೆಂದು ಅರಿಯಲು 2.5 ಎಕರೆ ಎಷ್ಟೇ ಬೆಲೆ ಬಾಳುವಂತಾದರೂ ಕಮ್ಮಿನೆ ಎಂದಿದ್ದಾರೆ.
ಜಗನ್ನಾಥ ಬಿ.ಟಿ ಎನ್ನುವವರು ಇದೆ ಮಾತನ್ನ ಚೇತನ್ ಅವರು ಪಬ್ಲಿಕ್ ಆಗಿ ಬಂದು ಹೇಳ್ಲಿ ನೋಡೋಣ. ಜನರು ಅದರಲ್ಲೂ ಕನ್ನಡಿಗರು ಯಾವ ಭಾಷೆಯಲ್ಲಿ, ಯಾವ ರೀತಿ ಉತ್ತರ ಕೊಡ್ತಾರೆ ಅಂತ ನೋಡಿ. ಅಲ್ಲ ದಿಲ್ಲಿ ದೇಶ ಮಾರಿದೋರಿಗೆಲ್ಲ ನೂರಾರು ಜಾಗ ಕೊಟ್ಟಿಲ್ವಾ. ಅದನ್ನು ಕೇಳಿ ನೋಡಿ. ಕನ್ನಡದ ಅಸ್ಮಿತೆಯಾಗಿ ನೆಲ, ಜಲ, ಕನ್ನಡದ ಉಳಿವಿಗಾಗಿ ಹೋರಾಡಿದ ಜನಪ್ರಿಯ ನಾಯಕನಟನಿಗೆ ಗೌರವಪೂರ್ಣವಾಗಿ ಕನ್ನಡಿಗರ ಆತ್ಮ ಸಾಕ್ಷಿಯಾಗಿ ನೀಡಿದ್ದಾರೆ ಜಾಗವದು. ಅದನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎಂದಿದ್ದಾರೆ. ಇನ್ನು ಅಶೋಕ್ ಜೆ ಎಂಬವರು ಬೇರೆಯವರ ತರಹ ಡಾ.ರಾಜ್‌ಕುಮಾರ್ ಅವರು ಅಥವಾ ಅಭಿಮಾನಿಗಳು ಕಾಡಿಬೇಡಿ ಪಡೆದಿಲ್ಲ. ರಾಜ್ ಕುಮಾರ್ ಅವರಿಗೆ ಯೋಗ್ಯತೆ ಇತ್ತು. ಸರ್ಕಾರ ಮತ್ತು ಸಮಾಜ, ಎಲ್ಲರೂ ಒಮ್ಮನಸ್ಸಿನಿಂದ, ಪೂರ್ಣ ಅಭಿಮಾನ, ಪ್ರೀತಿಯಿಂದ ಕೊಡಮಾಡಿದ ಅನುಪಮ ಕೊಡುಗೆ ಅದು. ಅಯೋಗ್ಯರಿಗೆ ಅರ್ಥ ಆಗದೇ ಇರೋ ವಿಷಯ ಇದು ಎಂದೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Dr Rajkumar: ಈ ವಿಷಯದ ಪ್ರಸ್ತಾವನೆ ಬೇಡವಾಗಿತ್ತು
ಇನ್ನು ಹಲವರು ಕನ್ನಡಿಗರು ಈ ವಿಷಯದ ಪ್ರಸ್ತಾವನೆಯನ್ನು ಚೇತನ್ ಅಹಿಂಸಾ ಅವರು ಮಾಡುವುದು ಬೇಡವಾಗಿತ್ತು. ಅದೂ ಕನ್ನಡಿಗರ ಕಣ್ಮಣಿ ಡಾ.ರಾಜ್‌ಕುಮಾರ್ ಅವರ ಜನ್ಮದಿನದಂದೇ ಈ ವಿಚಾರ ಪ್ರಸ್ತಾಪಿಸಿರುವುದಕ್ಕೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.













Click it and Unblock the Notifications