• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ವಿರುದ್ಧ ಕದನದ ಬಳಿಕ ಮತ್ತೆ ಮೈತ್ರಿಯ ಮಾತಾಡಿದ ದೇವೇಗೌಡ

|

ಹಾಸನ, ಆಗಸ್ಟ್ 24: ಸಿದ್ದರಾಮಯ್ಯ ವಿರುದ್ಧ ಕೆಲವು ದಿನಗಳ ಹಿಂದಷ್ಟೆ ತೀವ್ರ ಆಕ್ರೋಶ ಹೊರಹಾಕಿದ್ದ ದೇವೇಗೌಡ ಅವರು ಮತ್ತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾತನ್ನಾಡಿದ್ದಾರೆ.

ಇಂದು ಹಾಸನ, ಹೊಳೆನರಸೀಪುರದ ರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಅವರು ನಂತರ ಸುದ್ದಿಗಾರರೊಂದಿಗೆ ರಾಜ್ಯ ರಾಜಕಾರಣ ಕುರಿತು ಮಾತನಾಡಿದರು.

ಸೋನಿಯಾ ಗಾಂಧಿ ಅವರು ಹೇಳಿದರೆ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಿದ್ಧ ಎಂದು ದೇವೇಗೌಡ ಅವರು ಈ ಸಮಯದಲ್ಲಿ ಹೇಳಿದರು.

ಸೋನಿಯಾಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಎಂದಿದ್ದಾರೆ. ಮುಂದೆ ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದರು.

ಸೋನಿಯಾಗಾಂಧಿ ಅವರು ಹೊಸ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಎಂದಿದ್ದಾರೆ. ಮುಂದೆ ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದರು.

ದೇವೇಗೌಡರ 'ಹಳೆಯ ಆಟ' ನೆನಪಿಸಿ, ಮತ್ತೆ ಬೆಂಕಿಯುಗುಳಿದ ಸಿದ್ದರಾಮಯ್ಯ

ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಯಾರ್ಯಾರೊ ಬಂದರು, ಆದರೆ ಹಾಗೆ ಬಂದವರೆಲ್ಲಾ ಅವರೇ ಅಂತ್ಯವಾಗಿ ಹೋದರು ಎಂದು ಸಿನಿಮೀಯ ರೀತಿಯ ಡೈಲಾಗ್ ಹೊಡೆದ ದೊಡ್ಡಗೌಡರು, ಮಾಜಿ ಸಿಎಂ ಸಿದ್ದರಾಮಯ್ಯ ಏನು ಮಾತನಾಡಿದರು ಎಂಬುದರ ಬಗ್ಗೆ ನಾನು ಯಾಕೆ ಚಿಂತೆ ಮಾಡಬೇಕು, ಜನರಿಗೆ ಎಲ್ಲವೂ ಗೊತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ- ದೇವೇಗೌಡರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆನ್ನುವ 23 ವರ್ಷದ ಹಗೆತನ

ಮೊನ್ನೆಯಷ್ಟೆ ತಮ್ಮ ಹಾಗೂ ನಿಖಿಲ್ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದಿದ್ದ ದೇವೇಗೌಡರು, ಇಂದು ಹೇಳಿಕೆ ಬದಲಾಯಿಸಿ, ಸೋಲಿಗೆ ಯಾರನ್ನೂ ಕಾರಣ ಮಾಡುವುದಿಲ್ಲ. ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

English summary
JDS president Deve Gowda said 'if Sonia Gandhi said i am ready to coalition with congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X