ಹಾಸನ ಜಿಲ್ಲೆಯಲ್ಲಿನ ತಾಲೂಕುವಾರು ಮಳೆ ವರದಿ
ಹಾಸನ, ಸೆ.20: ಹಾಸನ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 2.2 ಮಿ.ಮೀ., ಗೊರೂರು 0.3 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಹಾನುಬಾಳು 1.6 ಮಿ.ಮೀ., ಬಾಳ್ಳುಪೇಟೆ 3 ಮಿ.ಮೀ., ಸಕಲೇಶಪುರ 4.2 ಮಿ.ಮೀ., ಬೆಳಗೋಡು 2.4 ಮಿ.ಮೀ., ಯಸಳೂರು 10.2 ಮಿ.ಮೀ., ಹೆತ್ತೂರು 16.4 ಮಿ.ಮೀ., ಹೊಸೂರು 2.6 ಮಿ.ಮೀ., ಶುಕ್ರವಾರಸಂತೆ 7 ಮಿ.ಮೀ., ಮಾರನಹಳ್ಳಿ 10.5 ಮಿ.ಮೀ. ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 1 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 0.2 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ 1 ಮಿ.ಮೀ. ಮಳೆಯಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು 1.4 ಮಿ.ಮೀ., ಹಗರೆ 0.6 ಮಿ.ಮೀ, ಅರೆಹಳ್ಳಿ 2 ಮಿ.ಮೀ., ಬೇಲೂರಿನಲ್ಲಿ 0.8 ಮಿ.ಮೀ. ಮಳೆಯಾಗಿದೆ.
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಚದುರಿದಂತೆ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications