ಹಾಸನದಲ್ಲಿ 15 ಮಂದಿ ರೋಡ್ ರೋಮಿಯೋಗಳ ಬಂಧನ

By: ಹಾಸನ ಪ್ರತಿನಿಧಿ
Subscribe to Oneindia Kannada

ಹಾಸನ, ಡಿಸೆಂಬರ್. 08 : ಬೀದಿ ಬದಿಯಲ್ಲಿ ನಿಂತು ರಸ್ತೆಯಲ್ಲಿ ಹೋಗುವ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಚುಡಾಯಿಸುತ್ತಾ ಕಿರುಕುಳ ನೀಡುತ್ತಿದ್ದ ಪುಂಡರಿಗೆ ಹಾಸನ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಕೆಲವು ಪುಂಡರು ನಗರದ ಪ್ರಮುಖ ರಸ್ತೆ, ಕಾಲೇಜುಗಳ ಪಕ್ಕ ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುತ್ತಾ, ಯುವತಿಯರನ್ನು ಚುಡಾಯಿಸುತ್ತಾ ಕಿರುಕುಳ ನೀಡುತ್ತಿದ್ದರು.

ಈ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಗುರುವಾರ ನಗರದಲ್ಲಿ ಸಂಚರಿಸಿ, ಪ್ರಮುಖ ರಸ್ತೆ, ಶಾಲಾ, ಕಾಲೇಜುಗಳ ಬಳಿ ಬೈಕ್ ವೀಲಿಂಗ್ ಮಾಡುತ್ತಾ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಸುಮಾರು 15 ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

Hassan police arrest 15 Youths alleged harassment and ragging

ಇನ್ನೂ ಮೀಸೆಮೂಡದ ಪುಂಡರು ನಗರದ ಆರ್.ಸಿ. ರಸ್ತೆ, ಎ.ವಿ.ಕೆ. ಕಾಲೇಜು ರಸ್ತೆ ಮತ್ತು ಹಳೆ ಬಸ್ ನಿಲ್ದಾಣದ ರಸ್ತೆಗಳಲ್ಲಿ ಸಿಗರೇಟ್ ಸೇದುತ್ತಾ ರಸ್ತೆಗೆ ಅಡ್ಡಲಾಗಿ ನಿಂತು ಒಂಟಿಯಾಗಿ ಬರುವ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಹಿಂಸೆ ನೀಡುತ್ತಿದ್ದರು. ಆದರೆ, ಯುವತಿಯರು ದೂರು ನೀಡದೆ ಸಹಿಸಿಕೊಂಡಿದ್ದರು.

ಇದೇ ಚಾಳಿಯನ್ನು ಮುಂದುವರೆಸಿಕೊಂಡು ಬಂದ ಪುಂಡರು ತಮ್ಮ ಹಾವಳಿಯನ್ನು ಜಾಸ್ತಿ ಮಾಡಿದ್ದರಲ್ಲದೆ, ಇವರಿಂದಾಗಿ ಹೆಣ್ಣು ಮಕ್ಕಳು ನೆಮ್ಮದಿಯಾಗಿ ನಡೆದಾಡುವುದೇ ಕಷ್ಟವಾಗ ತೊಡಗಿತ್ತು.

ಇದನ್ನು ಅರಿತ ಪೊಲೀಸರು ಯುವಕರನ್ನು ಬಂಧಿಸಿ ಇವರಿಂದ 7 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
15 youths have been taken into custody by the Hassan police in the city on Thursday, on alleged harassment and ragging of a college students girles case.
Please Wait while comments are loading...