ಹಾಸನ: ಪೋಷಕರ ಜೊತೆ ಬಂದು ಮತ ಚಲಾಯಿಸಿದ ಪ್ರೀತಂ ಗೌಡ

ಹಾಸನ, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ ಬಹುತೇಕ ಶಾಂತಯುತವಾಗಿ ನಡೆಯುತ್ತಿದೆ. ಹಾಸನದಲ್ಲಿ ಕೇಸರಿ ಶಾಲು ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಚಕಮಕಿ ನಡೆದಿದೆ. ಹಾಸನ ಕ್ಷೇತ್ರದ ಶಾಸಕರಾಗಿರುವ ಪ್ರೀತಂ ಗೌಡ, ಪತ್ನಿ ಸಮೇತರಾಗಿ ಬಂದು ಮತ ಚಲಾಯಿಸಿದ್ದಾರೆ.

ಹಾಸನ ನಗರದ ಬಿಜಿ ರಸ್ತೆಯ ಬಿಜಿಎಸ್ ಕಾಲೇಜಿನ, ಮತಗಟ್ಟೆ ಸಂಖ್ಯೆ 90ರಲ್ಲಿ ಪ್ರೀತಂ ಗೌಡ, ಅವರ ತಂದೆ, ತಾಯಿ ಮತ್ತು ಪತ್ನಿ ಜೊತೆ ಬಂದು ಮತ ಚಲಾಯಿಸಿದ್ದಾರೆ.

Hassan MLA Preetham Gowda Casted Their Vote

ರಾಜ್ಯದ ಜಿದ್ದಾಜಿದ್ದಿನ ಕಣಗಳಲ್ಲಿ ಒಂದಾಗಿರುವ ಹಾಸನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಜೆಡಿಎಸ್ಸಿನಿಂದ ಸ್ವರೂಪ್ ಎಚ್.ಎಸ್. ಪ್ರಕಾಶ್, ಬಿಜೆಪಿಯಿಂದ ಪ್ರೀತಂ ಗೌಡ, ಕಾಂಗ್ರೆಸ್ಸಿನಿಂದ ಬನವಾಸಿ ರಂಗಸ್ವಾಮಿ, ಆಪ್ ನಿಂದ ಅಗಿಲೆ ಯೋಗೀಶ್ ಕಣದಲ್ಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನವೇ ಸುದ್ದಿಯಲ್ಲಿದ ಕ್ಷೇತ್ರದಲ್ಲಿ ಒಂದು ಹಾಸನ. ಕಾರಣ, ಜೆಡಿಎಸ್ ಟಿಕೆಟ್ ಬೇಕೆಂದು ದೇವೇಗೌಡ್ರ ಸೊಸೆ ಭವಾನಿ ರೇವಣ್ಣ ಹಠಕ್ಕೆ ಬಿದ್ದಿದ್ದರಿಂದ ಜೆಡಿಎಸ್ ಟಿಕೆಟ್ ಯಾರಿಗೆ ಎನ್ನುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.

ಶಾಸಕ ಮತ್ತು ಹಿರಿಯ ಮುಖಂಡ ಎಚ್.ಡಿ.ರೇವಣ್ಣ ಕೂಡಾ ತಮ್ಮ ಪತ್ನಿಗೆ ಟಿಕೆಟ್ ನೀಡಬೇಕೆಂದು ಹಠಕ್ಕೆ ಬಿದ್ದಿದ್ದರು. ಕೊನೆಗೆ, ಇದು ದೇವೇಗೌಡ್ರ ಮಧ್ಯಪ್ರವೇಶಿಸಿದ ನಂತರ ರೇವಣ್ಣ ಕುಟುಂಬ ಶಾಂತವಾಗಿತ್ತು.

ಸ್ವರೂಪ್ ಪ್ರಕಾಶ್ ನಾಮಪತ್ರ ಸಲ್ಲಿಸಿದ ನಂತರ ರೇವಣ್ಣ ಕುಟುಂಬ ಸಂಪೂರ್ಣವಾಗಿ ಪ್ರಚಾರದ ವಿಚಾರದಲ್ಲಿ ಸಹಕರಿಸಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಕೂಡಾ ಖುದ್ದಾಗಿ ಬಂದು ಪ್ರಚಾರ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+