ಮಾ.21ರ ತನಕ ರೋಹಿಣಿ ಸಿಂಧೂರಿ ವರ್ಗಾವಣೆ ಇಲ್ಲ

Posted By: Gururaj
Subscribe to Oneindia Kannada
   ರೋಹಿಣಿ ಸಿಂಧೂರಿಗೆ ಮಾರ್ಚ್ 21ರ ತನಕ ತಾತ್ಕಾಲಿಕ ರಿಲೀಫ್ | Oneindia Kannada

   ಹಾಸನ, ಮಾರ್ಚ್ 13 : ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಕುರಿತು ಮಾ.21ರ ತನಕ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸಿಎಟಿ ಆದೇಶ ನೀಡಿದೆ. ಹಾಸನ ಜಿಲ್ಲಾಧಿಕಾರಿಯಾಗಿ ಅವರು ಮುಂದುವರೆಯಲಿದ್ದಾರೆ.

   ಮಂಗಳವಾರ ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿ ಈ ಕುರಿತು ಆದೇಶ ಹೊರಡಿಸಿದೆ. ಸಿಎಟಿ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಮಾರ್ಚ್ 21ರಂದು ಅಂತಿಮ ಆದೇಶವನ್ನು ಪ್ರಕಟಿಸಲಿದೆ.

   ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆ

   ರೋಹಿಣಿ ಸಿಂಧೂರಿ ಅವರು 2017ರ ಜುಲೈ 14ರಂದು ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಅವಧಿಗೂ ಮೊದಲೇ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದ್ದರಿಂದ, ಅವರು ಸಿಎಟಿಯಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದರು.

   Hassan DC Rohini Sindhuri transfer : CAT reserves order

   ಮಾರ್ಚ್ 7ರಂದು ಕರ್ನಾಟಕ ಸರ್ಕಾರ ರೋಹಿಣಿ ಸಿಂಧೂರಿ ಸೇರಿದಂತೆ 11 ಐಎಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಮಾರ್ಚ್ 8ರಂದು ರೋಹಿಣಿ ಸಿಂಧೂರಿ ಅವರು ಈ ಆದೇಶವನ್ನು ಸಿಎಟಿಯಲ್ಲಿ ಪ್ರಶ್ನಿಸಿದ್ದರು.

   ಡಿಸಿ ರೋಹಿಣಿ ವರ್ಗಾವಣೆ ಮಾಡದಂತೆ ಸಾರ್ವಜನಿಕರ ಆಗ್ರಹ

   ಮಾರ್ಚ್ 13ರ ತನಕ ವರ್ಗಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಸಿಎಟಿ ಆದೇಶ ನೀಡಿತ್ತು. ಮಂಗಳವಾರ ಮಾರ್ಚ್ 21ರ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ ಮತ್ತು ಅಂದು ಅಂತಿಮ ತೀರ್ಪನ್ನು ಪ್ರಕಟಿಸಲಿದೆ.

   ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರಣದೀಪ್ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Central Administrative Tribunal (CAT) on March 13, 2018 reserved its orders in transfer of Hassan Deputy Commissioner Rohini Sindhuri. On March 8 Rohini Sindhuri posted as commissioner of employment and training in Bengaluru. Rohini Sindhuri will continue as Hassan DC till March 21, 2018.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ