• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನ: ಗಂಡನ ಲೈಂಗಿಕ ಹಿಂಸೆಗೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ನವವಧು ಆತ್ಮಹತ್ಯೆ

|

ಹಾಸನ, ನವೆಂಬರ್ ೦5: ಮದುವೆಯಾಗಿ ಮೊದಲ ರಾತ್ರಿ ಮುಗಿದ ಮರುದಿನವೇ ಸೆಲ್ಫಿ ವಿಡಿಯೋ ಒಂದನ್ನು ಮಾಡಿ ದುಖಃ ಹೇಳಿಕೊಂಡ ನವವಧು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ಹಾಸನದ ನೇಹಾ ಷರಿಫ್‌ (19) ಐದು ತಿಂಗಳ ಹಿಂದಷ್ಟೆ ಸಂಬಂಧಿ ಸಕಲೇಶಪುರದ ಆದಿಲ್‌ ಶಾ ನೊಂದಿಗೆ ಮದುವೆ ಆಗಿತ್ತು. ಆದರೆ ಗಂಡನ ಲೈಂಗಿಕ ಕಿರುಕುಳ ತಾಳಲಾರದೆ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮುನ್ನಾ ಸೆಲ್ಫಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಿಯಕರನಿಗೆ ತನ್ನ ಪ್ರೀತಿಯನ್ನು ಸಾಬೀತು ಪಡಿಸಲು ಯುವತಿ ಮಾಡಿದ್ದೇನು?

ನನ್ನ ಗಂಡ ನನಗೆ ಪ್ರತಿ ರಾತ್ರಿ ಲೈಂಗಿಕ ಹಿಂಸೆ ನೀಡುತ್ತಿದ್ದಾನೆ, ಅವನ 'ಲೈಂಗಿಕ ಪ್ರತಾಪಕ್ಕೆ' ನನ್ನ ದೇಹದ ಒಳಗಿನ ಭಾಗಗಳೆಲ್ಲಾ ಜರ್ಜರಿತವಾಗಿಬಿಟ್ಟಿವೆ ಎಂದು ನೇಹಾ ಶರೀಫ್‌ ಅಳುತ್ತಾ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ನನ್ನ ಅತ್ತೆ ಮಾವ ನನ್ನನ್ನು ಪ್ರತಿದಿನ ಹೊಡೆಯುತ್ತಾರೆ, ನನಗೆ ಇಲ್ಲಿ ಲೈಂಗಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ. ನಾನು ಎರಡು ತಿಂಗಳ ಗರ್ಭಿಣಿ ಎಂದು ಗೊತ್ತಿದ್ದರು ನನಗೆ ಹಿಂಸೆ ನೀಡಿದ್ದಾರೆ' ಎಂದು ನೇಹಾ ವಿಡಿಯೋದಲ್ಲಿ ಹೇಳಿದ್ದಾರೆ. ವಿಡಿಯೋ ಮಾಡುವಾಗ ವಿಷದ ಬಾಟಲಿಯನ್ನು ಕೈಯಲ್ಲೇ ಹಿಡಿದುಕೊಂಡಿದ್ದರು ನೇಹಾ.

ಗೂಳಿಪುರದಲ್ಲಿ ನ್ಯಾಯಾಲಯದಿಂದ ನೋಟೀಸ್ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ

ಗಂಡನ ಸಹೋದರರು ನನಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ, ತವರಿನಿಂದ ಹಣ ತರಲು ಪೀಡಿಸಿದ್ದಾರೆ. ಪ್ರಕರಣ ದಾಖಲಿಸಿ ಹೋರಾಡುವಷ್ಟು ಹಣಬಲ ನನಗೆ ಇಲ್ಲ, ಅಪ್ಪ-ಅಮ್ಮ ಕೂಡಾ ಬಡವರು ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ನೇಹಾ ಶರೀಫ್‌ ವಿಡಿಯೋದಲ್ಲಿ ಹೇಳಿದ್ದಾಳೆ.

ಕುಂದಾಪುರದಲ್ಲಿ ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆಗೆ ಶರಣು: ಸಾವಿಗೆ ಕಾರಣ ಉಗ್ರ ಸಂಘಟನೆ?

ಅತ್ತೆ ಆಸಿಯಾ, ಮಾವ ಏಜಾಜ್‌ ಅಹಮದ್‌, ಮೊಕ್ತಿಯಾರ್ ಪಾಷಾ, ಫೌಸಿಯಾ, ಶಾವರ್, ನುಸ್ರತ್‌ ಮತ್ತು ನನ್ನ ಪತಿ ಆದಿಲ್‌ ಷಾ ಇವರೆಲ್ಲರೂ ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ನಾನು ಸತ್ತ ಮೇಲಾದರೂ ನನಗೆ ನ್ಯಾಯ ಸಿಗಲಿ ಇವರಿಗೆಲ್ಲಾ ಸರಿಯಾದ ಶಿಕ್ಷೆ ಆಗಲಿ ಎಂದು ನೇಹಾ ದಯನೀಯವಾಗಿ ಸೆಲ್ಫಿ ವಿಡಿಯೋದಲ್ಲಿ ಬೇಡಿಕೊಂಡಿದ್ದಾಳೆ.

English summary
A newly wed bride commit suicide in Hassan. Neha Shiref record a selfie video before she commit suicide and alleged that her husband sexually harassed and his family members also gave physical and mental torture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X