ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ 12ರಿಂದ ಹಾಸನಾಂಬೆಯ ದರ್ಶನ ಪಡೆಯಿರಿ

|
Google Oneindia Kannada News

Recommended Video

Hasanamba temple : This year temple will be opened form October 12 to 21 | Oneindia Kannada

ಹಾಸನ, ಸೆಪ್ಟೆಂಬರ್ 08 : ಪುರಾಣ ಪ್ರಸಿದ್ಧ ಹಾಸನಾಂಬೆಯ ದರ್ಶನವನ್ನು ಈ ಬಾರಿ ಅಕ್ಟೋಬರ್ 12 ರಿಂದ 21ರ ತನಕ ಪಡೆಯಬಹುದಾಗಿದೆ. ದೇವಿಯ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಹಾಸನ ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ಪಡೆಯಿರಿ ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ಪಡೆಯಿರಿ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು. ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಆಚರಣೆ ಕುರಿತು ಚರ್ಚೆ ನಡೆಯಿತು. ನಿರ್ಧಾರಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಸಬಾಂಬೆ ಸ್ಥಳ ಪುರಾಣ ಓದಿಹಾಸಬಾಂಬೆ ಸ್ಥಳ ಪುರಾಣ ಓದಿ

Hassan

ಈ ವರ್ಷ ಒಟ್ಟಾರೆ 11 ದಿನ ದೇವಾಲಯ ಬಾಗಿಲು ತೆರೆಯಲಿದ್ದು, ಸಾರ್ವಜನಿಕರಿಗೆ 9 ದಿನಗಳ ಕಾಲ ದರ್ಶನಕ್ಕೆ ಅವಕಾಶ ದೊರೆಯಲಿದೆ. ಈ ಸೀಮಿತ ಅವಧಿಯಲ್ಲಿ ಹೆಚ್ಚಿನ ಭಕ್ತಾಧಿಗಳು ಆಗಮಿಸುವುದರಿಂದ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ವರ್ಷಕ್ಕೊಮ್ಮೆ ದೇಗುಲ ಬಾಗಿಲು ತೆರೆವ ಹಾಸನಾಂಬೆ ದರ್ಶನಕ್ಕೆ ಜನಸಾಗರವರ್ಷಕ್ಕೊಮ್ಮೆ ದೇಗುಲ ಬಾಗಿಲು ತೆರೆವ ಹಾಸನಾಂಬೆ ದರ್ಶನಕ್ಕೆ ಜನಸಾಗರ

ಹಾಸನಾಂಬೆ ದರ್ಶನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಅವರೆಲ್ಲರಿಗೂ ಸುಗಮವಾಗಿ ದರ್ಶನ ಭಾಗ್ಯ ದೊರೆಯಬೇಕು. ಧಾರ್ಮಿಕ ಕಟ್ಟು ಪಾಡುಗಳು ಸರಿಯಾಗಿ ಪಾಲನೆಯಾಗಬೇಕು, ಭಕ್ತರಿಗೆ ತೊಂದರೆಯಾದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಛತ್ರದಲ್ಲಿ ಪ್ರಸಾದ ವಿತರಣೆ : ದೇವಾಲಯದ ಹೊರ ಆವರಣದಲ್ಲಿ ಹಿಂದೆ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಜನ ದಟ್ಟಣೆ ಹೆಚ್ಚುತ್ತಿತ್ತು ಇದನ್ನು ತಪ್ಪಿಸಲು ಈ ಬಾರಿ ಎಲ್ಲಾ ಭಕ್ತಾದಿಗಳಿಗೆ ಪಕ್ಕದಲ್ಲೇ ಇರುವ ಛತ್ರದಲ್ಲಿ ಪ್ರಸಾದ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.

English summary
The historic Hasanamba temple in Hassan, Karnataka will be opened for devotees from October 12 to 21, 2017 said, Hassan Deputy Commissioner Rohini Sindhuri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X