ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ; ವೈಯಕ್ತಿಕ ದ್ವೇಷ, 500ಕ್ಕೂ ಅಧಿಕ ಅಡಕೆ ಮರಗಳ ನಾಶ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜನವರಿ 02; ರೈತ ಉದ್ಧಾರ ಆದರೆ ದೇಶ ಉದ್ಧಾರ ಆಗುತ್ತದೆ ಅಂತಾರೆ. ರೈತ ಬೆಳೆಯುವ ಪ್ರತಿಯೊಂದು ಬೆಳೆಗೂ ಅಷ್ಟೇ ಶ್ರಮ ಕೂಡ ಹಾಕಿರುತ್ತಾನೆ. ಆದರೆ ಇಲ್ಲೊಬ್ಬ ರೈತ ಕಳೆದ ಆರು ವರ್ಷಗಳಿಂದ ಕಷ್ಟಪಟ್ಟು ಬೆಳೆದು ಇನ್ನೇನು ನಾನು ಬೆಳೆದ ಬೆಳೆಯ ಫಸಲು ನನ್ನ ಕೈಸೇರುತ್ತದೆ ಎನ್ನುವಷ್ಟರಲ್ಲಿ ಬೆಳೆ ಸಂಪೂರ್ಣ ನಾಶವಾಗಿ ಕಂಗಾಲಾಗಿದ್ದಾನೆ. ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸಕ್ಕೆ ಜೀವನಕ್ಕಾಗಿ ಆಸರೆಯಾಗಿದ್ದ ಬೆಳೆ ಕಳೆದುಕೊಂಡು ಮರುಗುತ್ತಿದ್ದಾನೆ.

ಫಸಲಿಗೆ ಬಂದಿದ್ದ 500ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಕಡಿದು ನಾಶ ಪಡಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಜ್ಜೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ವೀರಲಿಂಗೇಗೌಡ ಎಂಬುವವರಿಗೆ ಸೇರಿದ ಅಡಕೆ ಗಿಡಗಳನ್ನು ಕಡಿದು ದುಷ್ಕರ್ಮಿಗಳು ನೆಲಸಮ ಮಾಡಿದ್ದಾರೆ. ಅಡಕೆ ಗಿಡಗಳನ್ನು ನೆಟ್ಟು ಆರು ವರ್ಷಗಳಾಗಿತ್ತು. ಫಸಲು ಬರುತ್ತಿತ್ತು. ಆದರೆ ಕಿಡಿಗೇಡಿಗಳು ಫಸಲು ಕೈ ಸೇರುವ ಮೊದಲೇ ನಾಶಪಡಿಸಿದ್ದಾರೆ. ಒಂದು ವಾರದ ಹಿಂದೆ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಶಿವಮೊಗ್ಗ; ಬಾಳೆ, ಅಡಕೆ ಬೆಳೆ ನಾಶ ಮಾಡಿದ ಕಾಡಾನೆಗಳು ಶಿವಮೊಗ್ಗ; ಬಾಳೆ, ಅಡಕೆ ಬೆಳೆ ನಾಶ ಮಾಡಿದ ಕಾಡಾನೆಗಳು

Areca Nut farm

ರೈತ ವೀರಲಿಂಗೇಗೌಡ ಸುಮಾರು ಒಂದೂವರೆ ಎಕರೆಯಲ್ಲಿ 500 ಅಡಕೆ ಸಸಿನೆಟ್ಟು ಕಳೆದ ಆರು ವರ್ಷಗಳಿಂದ ಪೋಷಿಸಿದ್ದಾರೆ. ಮಳೆ ಇಲ್ಲದ ಸಮಯದಲ್ಲೂ ಬೇರೆಯವರ ಜಮೀನಿನಿಂದ ನೀರು ಹೊತ್ತು ತಂದು ಮಕ್ಕಳಂತೆ ಅಡಕೆ ಮರಗಳನ್ನು ಸಾಕಿದ್ದರು.

ಅಡಕೆ ಕಾರ್ಯಪಡೆಯ ಮೊದಲ ಸಭೆ; 8 ನಿರ್ಣಯಗಳು ಅಡಕೆ ಕಾರ್ಯಪಡೆಯ ಮೊದಲ ಸಭೆ; 8 ನಿರ್ಣಯಗಳು

ಇದೀಗ ಹೊಂಬಾಳೆ ಕೂಡ ಹೊರಟಿದ್ದು ಫಸಲು ಬಿಡಲು ಪ್ರಾರಂಭದ ಮುನ್ಸೂಚನೆ ನೀಡಿವೆ. ಇನ್ನೇನು ಮುಂದಿನ ವರ್ಷ ನಾವು ಹಾಕಿದ ಅಡಕೆ ಗಿಡಗಳು ಫಸಲು ಕೊಡುತ್ತವೆ. ಇಷ್ಟು ವರ್ಷ ಕಷ್ಟಪಟ್ಟು ಬೆಳಸಿದ್ದಕ್ಕೂ ಸಾರ್ಥಕವಾಯಿತು. ಅಡಕೆಗೂ ಒಳ್ಳೆ ಬೆಲೆ ಇದೆ. ಇಷ್ಟು ವರ್ಷ ಪಟ್ಟಕಷ್ಟಕ್ಕೆ ಪ್ರತಿಫಲ ಸಿಗುತ್ತದೆ ಎಂದು ನೀರಿಕ್ಷಿಸಿದ್ದರಿಗೆ ಈಗ ಬರ ಸಿಡಿಲು ಬಡಿದಂತಾಗಿದೆ. ದುಷ್ಕರ್ಮಿಗಳು 500 ಅಡಕೆ ಮರಗಳನ್ನೂ ಬುಡ ಸಮೇತ ಕಡಿದು ಉರುಳಿಸಿದ್ದಾರೆ. ಬೆಳೆಯನ್ನು ನಂಬಿ ಬದುಕುತ್ತಿದ್ದ ರೈತ ಕುಟುಂಬ ಬೀದಿಗೆ ಬಿದ್ದಿದೆ.

ಅಡಕೆ ಕಾರ್ಯಪಡೆಗೆ 10 ಕೋಟಿ ಅನುದಾನ ಕೊಟ್ಟ ಸರ್ಕಾರ ಅಡಕೆ ಕಾರ್ಯಪಡೆಗೆ 10 ಕೋಟಿ ಅನುದಾನ ಕೊಟ್ಟ ಸರ್ಕಾರ

ಈ ಕೃತ್ಯ ಮಾಡಿರುವುದು ಯಾರು? ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ‌. ಆದರೆ ಈ ಹಿಂದೆ ಕೆಲವು ಬಾರಿ ಗ್ರಾಮದಲ್ಲಿ ಇವರೊಟ್ಟಿಗೆ ಸಣ್ಣಪುಟ್ಟ ಜಗಳಗಳು ನಡೆದಿವೆ. ಆದರೆ ಹೊಟ್ಟೆ ಪಾಡಿಗಾಗಿ ಕಷ್ಟಪಟ್ಟು ಬೆಳೆದ ಬೆಳೆ ನಾಶ ಮಾಡಿರುವುದು ಕಟುಕತನವನ್ನು ತೋರುತ್ತಿದೆ‌‌.

Areca Nut

ಅಲ್ಲದೇ ಮನುಷ್ಯ ಮನುಷ್ಯರ ನಡುವೆ ದ್ವೇಷವನ್ನು ಈ ರೀತಿ ಕೃತ್ಯಕ್ಕೆ ಬಳಸಿರುವುದುದ ಎಷ್ಟು ಸರಿ?. ಇಂತಹ ಕೆಲಸವನ್ನು ಯಾರು ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆಯಂತೂ ಆಗಬೇಕಿದೆ. ಇನ್ನು ಸ್ಥಳಕ್ಕೆ ಬೇಲೂರು ತಹಶೀಲ್ದಾರ್ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಒಟ್ಟಾರೆ ರೈತನೇ ದೇಶದ ಬೆನ್ನೆಲುಬು ಎನ್ನುವುದು ನಿಜವಾದರೂ ಮಾನವನ ಕೆಟ್ಟ ದ್ವೇಷಕ್ಕೆ ಅನ್ನದಾತ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ. ಈ ಕೃತ್ಯ ಎಸಗಿರುವ ಕಟುಕರನ್ನು ಕೂಡಲೆ ಪತ್ತೆ ಮಾಡಿ ತಕ್ಕ ಶಿಕ್ಷೆ ನೀಡುವ ಜವಾಬ್ದಾರಿ ಇದೀಗ ಪೊಲೀಸರ ಮೇಲಿದೆ.

ಫೈಬರ್ ದೋಟಿ ವರದಾನ; "ರೈತರು ಎದುರಿಸುತ್ತಿರುವ ಅಡಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ. ಸಾಮಾನ್ಯ ರೈತರೂ ಈ ವಿನೂತನ ದೋಟಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಆಯೋಜಿಸಿದ್ದ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

"ಇತ್ತೀಚಿನ ದಿನಗಳಲ್ಲಿ ರೈತರು ಅಡಿಕೆ ಕೊನೆ ತೆಗೆಯುವ ವಿಚಾರದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ ಹಲವಾರು ಕಾರ್ಮಿಕರೂ ಆಕಸ್ಮಿಕವಾಗಿ ಮರದ ಮೇಲಿನಿಂದ ಬಿದ್ದು ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ವರದಾನವೆಂಬಂತೆ ಅತ್ಯಂತ ಹಗುರವಾದ ಹಾಗೂ ಬಹಳವಾಗಿ ಉಪಯೋಗವಾಗುವ ಕಾರ್ಬನ್ ಧೋಟಿಯ ಆವಿಷ್ಕಾರ ಆಗಿದೆ. ಇದಕ್ಕಾಗಿ ಶ್ರಮಿಸಿದ ಯುವ ಸಂಶೋಧನಾಕಾರರಿಗೆ ಅಭಿನಂದನೆಗಳು" ಎಂದರು.

English summary
For personal clash areca nut farm belongs to Veeralinge Gowda destroyed in Hassan district Belur taluk Ajjanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X