ಹಾಸನ : ಜಿಲ್ಲಾಧಿಕಾರಿ ವಿ.ಚೈತ್ರ ರವರಿಗೆ ಆತ್ಮೀಯ ಬೀಳ್ಕೊಡುಗೆ

Posted By:
Subscribe to Oneindia Kannada

ಹಾಸನ, ಜುಲೈ 14:ಹಾಸನ ಜಿಲ್ಲಾಧಿಕಾರಿ ಹುದ್ಧೆಯಿಂದ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಯಾಗಿರುವ ವಿ.ಚೈತ್ರ ಅವರಿಗೆ ಜಿಲಾಡಳಿತ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆನೀಡಲಾಯಿತು.

ಹಾಸನದ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ

ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ವಿ.ಚೈತ್ರ ದಂಪತಿಗಳನ್ನು ಸನ್ಮಾನಿಸಲಾಯಿತು.

District administration accords warm send-off to V Chaitra former DC

ಈ ಸಂದರ್ಭದಲ್ಲಿ ಮಾತನಾಡಿದ ವಿ.ಚೈತ್ರ ಅವರು, ಕಳೆದ ಒಂದು ವರ್ಷಗಳ ಅವಧಿಯಲ್ಲಿನ ಸೇವೆ ತೃಪ್ತಿಕರ ತಂದಿದೆ ಎಂದರು. ಸರ್ಕಾರಿ ಸೇವೆಯನ್ನು ಪ್ರಾಮಾಣಿಕ ಮನಸ್ಸಿನಿಂದ ಮಾಡಬೇಕು, ಸವಾಲುಗಳು-ಸಂಕಷ್ಟಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತವೆ, ಅನುಭವವನ್ನು ಸಮೃದ್ಧಿಗೊಳಿಸತ್ತವೆ, ತಮ್ಮ ಕರ್ತವ್ಯ ಅವಧಿಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕ್ರತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್‌ಕುಮಾರ್ ಅವರು ಮಾತನಾಡಿ ಜಿಲ್ಲಾಧಿಕಾರಿಯಾಗಿ ವಿ.ಚೈತ್ರ ಅವರ ಸೇವೆ ಸ್ಮರಣೀಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಬರ ನಿರ್ವಹಣೆ, ಹಾಸನಾಂಬ ಜಾತ್ರೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮುಂದಿನ ಸರ್ಕಾರಿ ಸೇವಾ ಜೀವನವೂ ಶುಭಕರವಾಗಿರಲಿ ಎಂದು ಹಾರೈಸಿದರು.

District administration accords warm send-off to V Chaitra former DC

ಅಪರ ಜಿಲ್ಲಾಧಿಕಾರಿ ಕೆ.ಎಂ ಜಾನಕಿ, ಉಪ ವಿಭಾಗಾಧಿಕಾರಿ ನಾಗರಾಜ್, ಶ್ರವಣಬೆಳಗೊಳ ಮಹಾಮಸ್ತಕಾಭೀಷೇಕ ವಿಶೇಷ ಕರ್ತವ್ಯ ಅಧಿಕಾರಿ ವರಪ್ರಸಾದ್ ರೆಡ್ಡಿ, ತಹಶಿಲ್ದಾರರಾದ ಶಾರದಾಂಬ ರೇಣು ಕುಮಾರ್, ನಟೇಶ್, ಕಂದಾಯ ಇಲಾಖೆ ನೌಕರರ ಅಧ್ಯಕ್ಷರಾದ ಮೋಹನ್ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ವಿನೋದ್ ಚಂದ್ರ ಮತ್ತಿತರರು ಹಾಜರಿದ್ದರು. ಜಿಲ್ಲಾಧಿಕಾರಿ ಕಚೇರಿಯ ಅಧೀಕ್ಷಕರಾದ ರಮೇಶ್ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hassan : The district administration accord warm farewell to former deputy commissioner V Chaitra here on Thursday(July 13)
Please Wait while comments are loading...